ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ತಿನ ಸ್ವಂತ ಕಟ್ಟಡ “ಬ್ರಾಹ್ಮಿ ಸಭಾಭವನ” ಲೋಕಾರ್ಪಣೆ.

ಅಭಿವೃದ್ಧಿಯಲ್ಲಿ ಸಂಘಟನಾತ್ಮಕವಾಗಿ ಕಾರ್ಯ ನಿರ್ವಹಿಸಿ ಸಮಾಜದ ಆಸಕ್ತ ಕಟ್ಟಕಡೆಯ ವ್ಯಕ್ತಿಗೂ ಸಹಾಯ ಹಸ್ತ ನೀಡಿದಲ್ಲಿ ಸಮಾಜದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ.

ಅವರು ಭಾನುವಾರದಂದು ನಡೆದ ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ (ರಿ.) ಇದರ ಗುಂಡಿಬೈಲಿನಲ್ಲಿ ನೂತನವಾಗಿ ನಿರ್ಮಿಸಲಾದ ಬ್ರಾಹ್ಮಿ ಸಭಾಭವನ ಸಮರ್ಪಣಾ ಹಾಗೂ ಅಭಿನಂದನಾಕಾ ರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಈ ನಿಟ್ಟಿನಲ್ಲಿ ಸಮಾಜಕ್ಕೆ ಸಂಘಟನೆ ಅವಶ್ಯಕ. ಪ್ರಸ್ತುತ ದಿನಗಳಲ್ಲಿ ಬ್ರಾಹ್ಮಣ ಸಮಾಜ ಜಾಗೃತಿ ಯಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ಶಾಸಕ ರಘುಪತಿ ಭಟ್ ಹೇಳಿದರು.*

*”ಸರ್ವೇ ಜನಃ ಸುಖಿನೋ ಭವಂತು” ಎಂಬ ವಾಣಿಯಂತೆ ಬ್ರಾಹ್ಮಣರು ಸಮಸ್ತ ಹಿಂದೂ ಧರ್ಮದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದವರು.

ಜಾತಿಯಿಂದ ಹಿಂದೂ ಧರ್ಮ ಒಡೆಯದಂತೆ ಬ್ರಾಹ್ಮಣ ಸಮಾಜ ಸಮಸ್ತ ಹಿಂದೂ ಸಮಾಜಕ್ಕೆ ಮಾರ್ಗದರ್ಶನ ನೀಡಬೇಕು ಎಂದು ಹೇಳಿದ ಅವರು ಬ್ರಾಹ್ಮಿ ಸಭಾಭವನ ನಿರ್ಮಿಸುವಲ್ಲಿ ಯುವ ಬ್ರಾಹ್ಮಣ ಪರಿಷತ್ (ರಿ.) ಕಾರ್ಯ ವೈಖರಿಯನ್ನು ಶ್ಲಾಘಿಸಿದರು.*

ಈ ಸಂದರ್ಭದಲ್ಲಿ ಶ್ರೀ ಕೃಷ್ಣಾಪುರ ಮಠದ ಶ್ರೀ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು, ಶ್ರೀ ಪಲಿಮಾರು ಮಠದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಶ್ರೀ ಕಾಣಿಯೂರು ಮಠದ ಶ್ರೀ ಶ್ರೀ ವಿಧ್ಯಾವಲ್ಲಭತಿರ್ಥ ಶ್ರೀಪಾದರು,

ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ, ಕರ್ನಾಟಕ ಬ್ಯಾಂಕ್ ನ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್ ಮಹಾಬಲೇಶ್ವರ, ಉದ್ಯಮಿಗಳಾದ ವಿದ್ಯಾ ಪ್ರಸಾದ್, ಶ್ರೀಕಾಂತ್ ಭಟ್ ಕೆಮ್ತೂರು, ಶ್ರೀಪತಿ ಭಟ್, ವಿ ಅಶೋಕ್ ಕುಮಾರ್ ಮುಖ್ಯಸ್ಥರು ನಿಸರ್ಗ ಆಯುರ್ವೇದಿಕ್ ಮೆಡಿಸಿನ್, ಪಿ.ಎನ್.

ಪ್ರಸನ್ನಕುಮಾರ್ ರಾವ್ ಆಡಳಿತ ಮೊಕ್ತೇಸರರು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಪೆರಂಪಳ್ಳಿ, ವಿಜಯ್ ಬಲ್ಲಾಳ್ ಶ್ರೀ  ಜನಾರ್ದನ ಮಹಾಕಾಳಿ ದೇವಸ್ಥಾನ ಅಂಬಲಪಾಡಿ ಮತ್ತು ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ಅಧ್ಯಕ್ಷರಾದ ವಿಷ್ಣುಪ್ರಸಾದ್ ಪಾಡಿಗಾರ್.

ಪ್ರಧಾನ ಕಾರ್ಯದರ್ಶಿ ಪ್ರವೀಣ್ ಉಪಾಧ್ಯ, ಕೋಶಾಧಿಕಾರಿ ಕುಮಾರಸ್ವಾಮಿ ಉಡುಪ, ಕಟ್ಟಡ ಸಮಿತಿ ಕಾರ್ಯಾಧ್ಯಕ್ಷ ಕೆ.ರಂಜನ್ ಕಲ್ಕೂರ, ಪ್ರಧಾನ ಕಾರ್ಯದರ್ಶಿ ಎಂ.ಎಸ್ ವಿಷ್ಣು, ಕಾರ್ಯದರ್ಶಿ ಚಂದ್ರಕಾಂತ ಕೆ.ಎನ್ ಮತ್ತು ಎಲ್ಲಾ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಹಾಗು ಸಮಾಜ ಭಾಂದವರು ಉಪಸ್ಥಿತರಿದ್ದರು.

 
 
 
 
 
 
 
 
 

Leave a Reply