Janardhan Kodavoor/ Team KaravaliXpress
23 C
Udupi
Thursday, January 28, 2021

ದ.ಕ.ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ನ ಸಾಲಿನ ಮಹಾಸಭೆ

ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ನ ​2019-20ನೇ ಸಾಲಿನ ಮಹಾಸಭೆಯು ರಮಾ ಲಕ್ಷ್ಮೀನಾರಾಯಣ ಸಭಾಭವನ, ಎಮ್ಮೆಕೆರೆ, ಪಾಂಡೇಶ್ವರ, ಮಂಗಳೂರು ಇಲ್ಲಿ ಜರಗಿತು.​​

ಫೆಡರೇಶನ್ ಮಹಾಸಭೆಗೆ ​44“ಬಿ” ವರ್ಗದ ಸದಸ್ಯರು ಮತ್ತು ​624  “ಸಿ” ವರ್ಗದ ಸದಸ್ಯರು ಮತ್ತು ಸರಕಾರದ ಪ್ರತಿನಿಧಿಗಳು ಹಾಜರಿದ್ದರು. ಅಧ್ಯಕ್ಷರಾದ ಯಶ್‌ಪಾಲ್ ಸುವರ್ಣರವರು ಸ್ವಾಗತಿಸಿ, ಸದಸ್ಯರಿಗೆ ಸಂಸ್ಥೆಯ ಚಟುವಟಿಕೆಗಳ ಸಂಕ್ಷಿಪ್ತ ವಿವರಣೆಯನ್ನು ನೀಡಿದರು. 
 
ಫೆಡರೇಶನ್ ವತಿಯಿಂದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಮೀನುಗಾರಿಕಾ ಕಾಲೇಜಿನಲ್ಲಿ ಮೀನುಗಾರಿಕೆಯ ಬಗ್ಗೆ ವ್ಯಾಸಂಗ ಮಾಡುವ ಸದಸ್ಯರ ಮಕ್ಕಳ ದತ್ತು ಸ್ವೀಕಾರ, ಸದಸ್ಯರಿಗೆ ಆರೋಗ್ಯ ಕಾರ್ಡು ಸೌಲಭ್ಯ ಒದಗಿಸುವುದು, ಸದಸ್ಯ ಸಹಕಾರಿ ಸಂಘಗಳ ಪ್ರತಿನಿಧಿಗಳಿಗೆ ತರಬೇತಿ ಕಾರ್ಯಗಾರ, ಮೀನುಗಾರಿಕೆ ಮತ್ತು ಮೀನಿನ ಬಗ್ಗೆ  ಜನರಿಗೆ ಹೆಚ್ಚಿನ ಮಾಹಿತಿಯನ್ನು ನೀಡುವ ಉದ್ದೇಶದಿಂದ “ಮತ್ಸö್ಯಮೇಳ” ಕಾರ್ಯಕ್ರಮ ಏರ್ಪಡಿಸುವುದು, ಸದಸ್ಯರಿಗೆ ಫೆಡರೇಶನಿನ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿ ಆರೋಗ್ಯ ಶಿಬಿರ ಏರ್ಪಡಿಸುವುದು, ಕಾಪು ಮತ್ತು ಹಂಗಾರಕಟ್ಟಾ ಕೇಂದ್ರಗಳಲ್ಲಿ ನೂತನವಾಗಿ ಬ್ಯಾಂ​ಕಿಂಗ್ ​ ವಿಭಾಗಗಳನ್ನು ತೆರೆಯುವುದು, 
 
ಕೇಂದ್ರ ಸರಕಾರದ ಆತ್ಮನಿರ್ಭರ ಭಾರತದ ಪ್ರಧಾನ ಮಂತ್ರಿ ​ಮತ್ಸ್ಯಸಂಪದ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವುದು ಮತ್ತು ಸದಸ್ಯ ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡು ಸೌಲಭ್ಯ ಒದಗಿಸುವ ಬಗ್ಗೆ ಯೋಜನೆಗಳನ್ನು ರೂಪಿಸಲಾಗಿದ್ದು, ಕೆಲವೊಂದು ಆಯ್ದ ಕೇಂದ್ರಗಳಲ್ಲಿ ​ ​ಫೆಡರೇಶನ್ ವತಿಯಿಂದ ​ಮತ್ಸ್ಯಕ್ಯಾಂಟಿನ್ ಆರಂಭಿಸುವ ಬಗ್ಗೆ ನಿರ್ಧರಿಸಲಾಯಿತು.
ಫೆಡರೇಶನಿನ ಸದಸ್ಯರಿಗೆ ಸಂಸ್ಥೆಯ ವ್ಯವಹಾರದಲ್ಲಿ ಪಾಲ್ಗೊಳುವರೇ ಅನುಕೂಲವಾಗುವಂತೆ ಮಂಗಳೂರು ನಗರದ ಕೇಂದ್ರ ಭಾಗದಲ್ಲಿ ಸರಕಾರದ ನಿವೇಶನದಲ್ಲಿ ಪ್ರಧಾನ ಕಚೇರಿಯ ಸುಸಜ್ಜಿತ ಕಟ್ಟಡವನ್ನು ನಿರ್ಮಿಸುವ ಪ್ರಕ್ರಿಯೆ ಪ್ರಗತಿಯಲ್ಲಿರುವುದಾಗಿ ಸಭೆಗೆ ತಿಳಿಸಿದರು.

ಫೆಡರೇಶನಿನ ​2019-20 ನೇ ವಾರ್ಷಿಕ ವರದಿಯನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಮಹಾಸಭೆಯಲ್ಲಿ ಮಂಡಿಸಿದರು. ಸದಸ್ಯರು ಸಂಸ್ಥೆಯ ಚಟುವಟಿಕೆಗಳಾದ ಜಿ.ಶಂಕರ್ ಮತ್ತು​ ಕೆ.ಎಂ.ಸಿ ಆಸ್ಪತ್ರೆಯ ಸಹಕಾರದೊಂದಿಗೆ ಉಚಿತ ವೈದ್ಯಕೀಯ ಸೌಲಭ್ಯ ನೀಡುವ ಬಗ್ಗೆ  ಹರ್ಷ ವ್ಯಕ್ತಪಡಿಸಿ, ಆಡಳಿತ ಮಂಡಳಿಗೆ ಅಭಿನಂದನೆಯನ್ನು ಸಲ್ಲಿಸಿದರು. ಈ ಸಭೆಯಲ್ಲಿ ಕರ್ನಾಟಕ ಮೀನುಗಾರಿಕಾ ಅಭಿವೃದ್ದಿ ನಿಗಮಕ್ಕೆ ಅಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾದ ನಿತಿನ್ ಕುಮಾರ್ ಮತ್ತು ತುಳು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದುಕೊಂಡಿರುವ ಯೋಗೀಶ್ ಕಾಂಚನ್, ಬೈಕಂಪಾಡಿ ಹಾಗೂ ಫೆಡರೇಶನಿನಲ್ಲಿ ಹಲವಾರು ವರ್ಷ ಸೇವೆಯನ್ನು ಸಲ್ಲಿಸಿ ವಯೋ​ ​ನಿವೃತ್ತಿ ಹೊಂದಿರುವ​ ​ ಜನಾರ್ಧನ್ ಮತ್ತು ಚಂದ್ರಶೇಖರ್ ಇವರನ್ನು ಸನ್ಮಾನಿಸಲಾಯಿತು.

ಸಭೆಯಲ್ಲಿ ಉಪಾಧ್ಯಕ್ಷ ಪುರುಷೋತ್ತಮ ಅಮೀನ್, ವ್ಯವಸ್ಥಾಪಕ ನಿರ್ದೇಶಕ  ಹರೀಶ್ ಕುಮಾರ್,  ಪಾರ್ಶ್ವನಾಥ್, ಮೀನುಗಾರಿಕಾ ಉಪನಿರ್ದೇಶಕರು, ಮಂಗಳೂರು, ಸಹಕಾರಿ ಸಂಘಗಳ ಉಪನಿಬಂಧಕರಾದ​ ​ಪ್ರವೀಣ್ ನಾಯಕ್,  ಹಾಗೂ ಫೆಡರೇಶನಿನ ಆಡಳಿತ ಮಂಡಳಿಯ ಸರ್ವಸದಸ್ಯರು ಉಪಸ್ಥಿತರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

ಅಮಾಸೆಬೈಲಿನ ಡ್ಯುಯಲ್ ಸ್ಟಾರ್ ಶಾಲಾ ವೆಬ್ ಸೈಟ್ ಉದ್ಘಾಟನೆ

 ಶಾಲೆಯ ಬೆಳವಣಿಗೆಯ ಸುಂದರ ಕ್ಷಣ ಸವಿಯಲು ವೆಬ್ ಸೈಟ್ ಅತ್ಯಂತ ಪ್ರಯೋಜನಕಾರಿ ಅದು ಎಲ್ಲಾ ಜನರಿಗೆ ಕ್ಷಣ ಮಾತ್ರದಲ್ಲಿ ತಲುಪಿಸಲು ಸುಗಮ ದಾರಿ ಇದಾಗಿದೆ ಎಂದು ಮಣಿಪಾಲ ಕ್ಯಾರಿಯರ್ ಅಕಾಡೆಮಿ ಮಣಿಪಾಲದ ಪ್ರಾಂಶುಪಾಲ...

ಮೋದಿ ಬಿಗ್ರೇಡ್ ವತಿಯಿಂದ ಉಚಿತ ಅರೋಗ್ಯ ತಪಾಸಣಾ ಶಿಬಿರ

ಉಡುಪಿ: ಮೋದಿ ಬಿಗ್ರೇಡ್ ಕರ್ನಾಟಕ ಉಡುಪಿ , ರಾಮಕ್ಷತ್ರಿಯ ಸಂಘ ಉಡುಪಿ , ರಾಮಕ್ಷತ್ರಿಯ ವೆಲ್ ಫೇರ್ ಟ್ರಸ್ಟ್ ಉಡುಪಿ ,ಶ್ರೀ ಧರ್ಮಸ್ಥಳ ಆಯುರ್ವೇದ ಉದ್ಯಾವರದ ಜಂಟಿ ಆಶ್ರಯದಲ್ಲಿ ಉಚಿತ ಅರೋಗ್ಯ ತಪಾಸಣಾ...

“ದೊಂದಿ ಬೆಳಕಿನಲ್ಲಿ ನಡೆಯಲಿರುವ ರಾಶಿ ಪೂಜೆಗೆ ಛಾಯಾಚಿತ್ರ ಸ್ಪರ್ಧೆಯ ಸಾಂಗತ್ಯ -2021” (ಈಶ ಸೇವೆಯೊಂದಿಗೆ ಕಲಾ ಸೇವೆ}  

ಮಹತೋಬಾರ  ಕೊಡವೂರು ಶ್ರೀ ಶಂಕರನಾರಾಯಣ ರಾಶಿಪೂಜೆ ಸೇವಾ ಸಮಿತಿ ಪ್ರಾಯೋಜಕತ್ವದಲ್ಲಿ ಸೌತ್ ಕೆನರಾ ಫೋಟೋ ಗ್ರಾಪರ್ಸ್  ಅಸೋಷಿಯೇಷನ್  ಉಡುಪಿ ವಲಯ ಆಯೋಜಿಸುವ " ದೊಂದಿ ಬೆಳಕಿನಲ್ಲಿ ನಡೆಯಲಿರುವ ರಾಶಿ ಪೂಜೆಗೆ ಛಾಯಾಚಿತ್ರ ಸ್ಪರ್ಧೆಯ ಸಾಂಗತ್ಯ -2021" (ಈಶ ಸೇವೆಯೊಂದಿಗೆ...

 ನಾಳೆ ನಡೆಯಲಿದೆ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ‘ಸಲಾಂ ಕಲಾಂ’ ಕಾರ್ಯಕ್ರಮ

ಉಡುಪಿ: ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ , ಡಾ | ಪಳ್ಳತ್ತಡ್ಕ ಕೇಶವ ಭಟ್ ಮೆಮೋರಿಯಲ್ ಟ್ರಸ್ಟ್ (ರಿ.) ಮಣಿಪಾಲದ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿಯ ಸಹಕಾರದಲ್ಲಿ ಗುರುವಾರ...

ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದಿಂದ ಹುತಾತ್ಮರ ಅಭಿಯಾನಕ್ಕೆ ಚಾಲನೆ

ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಕರ್ನಾಟಕದ ಸಂಸ್ಥಾಪಕ ಅಧ್ಯಕ್ಷ ಸುರೇಶ್ ಗೋಕಾಕ್ ನೇತೃತ್ವದಲ್ಲಿ ನಡೆದ ಹುತಾತ್ಮರ ಅಭಿಯಾನಕ್ಕೆ ಹುಬ್ಬಳ್ಳಿಯ ಮೂರುಸಾವಿರ ಮಠದ ಮಹಾಸ್ವಾಮಿಗಳಿಂದ ಚಾಲನೆ ದೊರೆಯಿತು. ಗಣರಾಜ್ಯೋತ್ಸವದಂದು ಸಂಗೊಳ್ಳಿ ರಾಯಣ್ಣನ ಸಮಾಧಿಯಿಂದ...
error: Content is protected !!