Janardhan Kodavoor/ Team KaravaliXpress
30.6 C
Udupi
Wednesday, August 17, 2022
Sathyanatha Stores Brahmavara

ಯಕ್ಷಗಾನ ನೃತ್ಯ ತರಬೇತಿ ತರಗತಿ ಉದ್ಘಾಟನೆ  

ಅಜಪುರ ಯಕ್ಷಗಾನ ಸಂಘದ 2020-21 ರ ಸಾಲಿನ ಯಕ್ಷಗಾನ ನೃತ್ಯ ತರಬೇತಿ ತರಗತಿಯ ಉದ್ಘಾಟನೆ​ಯು ಶನಿವಾರ ​ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಸಂಘದ ಅಧ್ಯಕ್ಷ ಬಾಲಕೃಷ್ಣ ಗಾಣಿಗ ಬಿರ್ತಿ ಯವರ ಅಧ್ಯಕ್ಷತೆಯಲ್ಲಿ ಸಂಪನ್ನ ಗೊಂಡಿತು.​ 
ಹಿರಿಯ ಕಲಾವಿದರೂ, ಸಂಘದ ಉಪಾಧ್ಯಕ್ಷ  ಪದ್ಮನಾಭ ಗಾಣಿಗರು ದೀಪ ಬೆಳಗಿಸುವ ಮೂಲಕ ತರಗತಿಯನ್ನು ಉದ್ಘಾಟಿಸಿದರು. ಗೌರವಾಧ್ಯಕ್ಷ ಕೃಷ್ಣಸ್ವಾಮಿ ಜೋಶಿಯವರು ಗಣಪತಿ ಸ್ತುತಿಯನ್ನು ಹಾಡುವ ಮೂಲಕ ತರಗತಿಗೆ ಚಾಲನೆ ನೀಡಿದರು.  ಸಹ ಕಾರ್ಯದರ್ಶಿ ಕೃಷ್ಣಮೂರ್ತಿ ಯವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ಶ್ರೀಧರ ಶೆಟ್ಟಿಗಾರರು ವಂದಿಸಿದರು.
ಕೋಶಾಧಿಕಾರಿ ಗಣೇಶ್ ಬ್ರಹ್ಮಾವರ ನಿರೂಪಿಸಿದರು  ತರಬೇತಿ ಶಿಕ್ಷಕ ಪ್ರತೀಶ್ ಬ್ರಹ್ಮಾವರ ಮತ್ತು ಮಿಥುನ್ ನಾಯಕ್ ಹಂದಾಡಿ ತರಗತಿಯನ್ನು ನಡೆಸಿ ಕೊಟ್ಟರು. ವಿಧ್ಯಾರ್ಥಿಗಳು ಮತ್ತು ಪೋಷಕರು ಕಾರ್ಯಕ್ರಮದಲ್ಲಿ ಭಾಗಿಯಾದರು.​
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!