ಉಡುಪಿ ಜಿಲ್ಲಾ ವಿಪ್ರ ಸಮ್ಮೆಳನ 2022 ಸಂಪನ್ನ

ಕಾರ್ಕಳ : ದೇವಸ್ಥಾನದ ಆದಾಯವನ್ನು ಸರಕಾರ ಮನಸೋ ಇಚ್ಚೆ ಬಳಸಬಾರದು. ಪುರೋಹಿತರು, ವೈದಿಕ ಪರಂಪರೆಯ ರಕ್ಷಣೆಗೆ ಯಾವ ಸರಕಾರವೂ ಮುಂದೆ ಬರುತ್ತಿಲ್ಲ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ಹೇಳಿದರು.
ಕಾರ್ಕಳ ರಾಧಾಕೃಷ್ಣ ಸಭಾಭವನದಲ್ಲಿ ರವಿವಾರ ನಡೆದ ಉಡುಪಿ ಜಿಲ್ಲಾಬ್ರಾಹ್ಮಣ ಮಹಾಸಭಾದ ಉಡುಪಿ ಜಿಲ್ಲಾ ವಿಪ್ರ ಸಮ್ಮೆಳನ 2022ರ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು. ನಾವು ಮಹಿಳಾ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಕೇಳುತ್ತಿದ್ದೇವೆ. ಈಗ ಇರುವ ಮಂಡಳಿಗೆ ಸರಕಾರ ದುಡ್ಡು ಕೊಡುತ್ತಿಲ್ಲ. ಇನ್ನುಇದು ಹೇಗೆ ಸಾಧ್ಯ ಎಂದರು.
ದೇವಸ್ಥಾನಗಳಲ್ಲಿ ಸರಕಾರದ ನಿಯಂತ್ರಣ ಇರಬಾರದು. ಇತರ ಸಮುದಾಯಗಳಿಗೆನೀಡುವ ಮೀಸಲಾತಿ ಪ್ರಮಾಣಶೇ. 56 ಮೀರುವಂತಿಲ್ಲ. ಇದನ್ನುಸುಪ್ರೀಂ ಕೋರ್ಟ್‌ ಕೂಡ ಸ್ಪಷ್ಟ ಪಡಿಸಿದೆ. ಅದನ್ನುಮೀರಿದರೆ ಬ್ರಾಹ್ಮಣ ಸಮುದಾಯದ ಉದ್ಯೋಗ ಇನ್ನಿತರ ಹಕ್ಕುಗಳನ್ನು, ಕಿತ್ತುಕೊಂಡಂತಾಗುತ್ತದೆ ಎಂದು ಹಾರನಹಳ್ಳಿ ಅಭಿಪ್ರಾಯ ಪಟ್ಟರು. ಕರ್ನಾಟಕ ಬ್ಯಾಂಕ್ ಸಿಇಒ ಮಹಾಬಲೇಶ್ವರ್ ಭಟ್ ಉದ್ಘಾಟಿಸಿದರು 
ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ವೈ. ಸುಧಾಕರ ಭಟ್‌ ಅಧ್ಯಕ್ಷತೆ ವಹಿಸಿದ್ದರು. ರೇವಾ ಯುನಿವರ್ಸಿಟಿ ಮಾಜಿ ವೈಸ್‌ ಚಾನ್ಸ್‌ಲರ್‌ ಡಾ| ಎಸ್‌.ವೈ ಕುಲಕರ್ಣಿ, ಅಖಿಲಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಂಘಟನ ಕಾರ್ಯದರ್ಶಿ ರಾಘವೇಂದ್ರ ಭಟ್‌, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ನಟರಾಜ ಭಾಗವತ್‌, ತರಂಗ ಪತ್ರಿಕೆ ಸಂಪಾದಕಿ ಡಾ| ಯು.ಬಿ ರಾಜಲಕ್ಷ್ಮೀ, ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಗೌರವಾಧ್ಯಕ್ಷ ಕೆ. ಕೃಷ್ಣಾನಂದ ಚಾತ್ರ ಕೊಶಾಧಿಕಾರಿ ಶ್ರೀಕಾಂತ ಕನ್ನಂತ,
ಕಾರ್ಯದರ್ಶಿ ಸಂದೀಪ್‌ ಮಂಜ, ಉಡುಪಿ ಜಿಲ್ಲಾ ತಾಲೂಕು ಬ್ರಾಹ್ಮಣ ಮಹಸಭಾದ ಅಧ್ಯಕ್ಷ ಮಂಜುನಾಥ ಉಪಾಧ್ಯಾಯ, ಕಾರ್ಕಳ ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷೆ ಸೌಜನ್ಯಾ ಉಪಾಧ್ಯಾಯ, ಕುಂದಾಪುರ ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅನಂತಪ್ಪನಾಭ ಬಾಯಿರಿ, ಬ್ರಹ್ಮಾವರ ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ್‌ ಭಟ್‌, ಪ್ರಾಂಶುಪಾಲ ಡಾ| ನಿರಂಜನ್‌ ಚಿಪ್ಕೂಣ್‌ಕರ್‌, ಕಾರ್ತಿಕ್‌ ಬಾಬಟ್‌, ಉಮೇಶ್‌ ಶಾಸ್ತ್ರಿ ತಾರಾನಾಥ ಹೊಳ್ಳ ಗಣೇಶ್‌ರಾವ್‌ ಕುಂಭಾಶಿ, ಶ್ರೀಕಾಂತ ಉಪಾಧ್ಯಾಯ, ಭಾಸ್ಕರ್‌ ಜೋಯಿಸ, ಪ್ರತಿಜ್ಞಾ ಪ್ರತೀಕ್ಷಾ ಉಪಸ್ಥಿತರಿದ್ದರು.
ಉದ್ಭಾಟನೆ ವೇಳೆ ವೇದಘೋಷ, ಪಾಂಚಜನ್ಯ ಮೊಳಗಿಸಲಾಯಿತು. ಸತೀಶ್‌ ರಾವ್‌ ಕೆ. ಕರ್ವಾಲು, ಮಾಧವ ಭಟ್‌ ಪೆರ್ವಾಜೆ ನಿರೂಪಿಸಿದರು. ಸ್ವಾತಂತ್ರ್ಯ ಹೋರಾಟಗಾರರಾದ ವಿಪ್ರರನ್ನು ಸಮ್ಮಾನಿಸಲಾಯಿತು.
 
 
 
 
 
 
 
 
 

Leave a Reply