Janardhan Kodavoor/ Team KaravaliXpress
30.6 C
Udupi
Monday, January 30, 2023
Sathyanatha Stores Brahmavara

ವಿದ್ಯಾನಿಧಿ ಸಮಿತಿ (ರಿ.) ಅಧ್ಯಕ್ಷರಾಗಿ ಚಂದ್ರಶೇಖರ ಅಡಿಗ 

ವಿದ್ಯಾದೇಗುಲ: ವಿದ್ಯಾನಿಧಿ ಸಮಿತಿಯ 2020-22ನೇ ಸಾಲಿನ ನೂತನ ಅಧ್ಯಕ್ಷರಾಗಿ ಚಂದ್ರಶೇಖರ ಅಡಿಗ ಆಯ್ಕೆಯಾದರು. ಶುಕ್ರವಾರದಂದು ನಡೆದ ಸಮಿತಿಯ ಸರ್ವಸದಸ್ಯರ ಮಹಾಸಭೆಯಲ್ಲಿ ನಿರ್ಗಮ ಅಧ್ಯಕ್ಷ ಮಾಧವ ಉಪಾಧ್ಯಾಯ ತಮ್ಮ ಅಧಿಕಾರವನ್ನು ಚಂದ್ರಶೇಖರ ಅಡಿಗರಿಗೆ ಹಸ್ತಾಂತರಿಸಿದರು. ಕಾರ್ಯದರ್ಶಿಯಾಗಿ ರಮೇಶ್ ರಾವ್, ಖಜಾಂಚಿಯಾಗಿ ಕೃಷ್ಣರಾಜ್ ರಾವ್ ಬ್ರಹ್ಮಗಿರಿ ಆಯ್ಕೆಯಾದರು.

ಚುನಾವಣಾಧಿಕಾರಿಯಾಗಿ ಸಮಿತಿಯ ಸ್ಥಾಪಕ ಸದಸ್ಯರಾದ ಬಾಲಕೃಷ್ಣ ಆಚಾರ್ಯರು ಆಯ್ಕೆ ಪ್ರಕ್ರೀಯೆಗಳನ್ನು ನಡೆಸಿಕೊಟ್ಟರು. ವೀಣಾ ಹತ್ವಾರ್ ಉಪಾಧ್ಯಕ್ಷರು, ಹಯವಧನ ಭಟ್ ಜೊತೆ ಕಾರ್ಯದರ್ಶಿಯಾಗಿ ಆಯ್ಕೆ ಗೊಂಡರು. ಸಮಿತಿಯ ಅಜೀವ ಸದಸ್ಯರು ಮಾಧವ ಉಪಾಧ್ಯಾಯ; ರಾಮಚಂದ್ರ ಆಚಾರ್ಯ, ಬಾಲಕೃಷ್ಣ ಆಚಾಯ್, ಸರೋಜಾ ಭಟ್, ಹರಿಪ್ರಸಾದ್, ಡಾ| ಶ್ರೀಧರ ಬಾಯರ್, ವಿಷ್ಣು ಪ್ರಸಾದ್ ಕಕ್ಕುಂಜೆ, ಎಂ.ಮಾಧವ ಭಟ್, ಶೈಲಜಾ ಎಂ. ಭಟ್. 

ನೂತನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶಿವರಾಮ ರಾವ್, ಪುರಂದರ ರಾವ್, ವಾಸುದೇವ ಭಟ್ ಮಾಯಾಗುಂಡಿ, ಆನಂದ ಭಟ್ ಮಾಯಾಗುಂಡಿ, ಸುರೇಶ್ ಯು.ಕೆ., ಗುರುರಾಜ್ ಸುಬ್ರಹ್ಮಣ್ಯನಗರ, ಪಧ್ಮನಾಭ ಉಪಾಧ್ಯಾಯ, ನಾಗರಾಜ ರಾವ್, ದೇವರಾಜ ಭಟ್ ಇವರುಗಳು ಆಯ್ಕೆಯಾದರು.

ಚುನಾವಣೆಯ ಮೊದಲು ನಡೆದ ವಿದ್ಯಾನಿಧಿ ಸಮಿತಿಯ 15ನೇ ವಾರ್ಷಿಕೋತ್ಸವದಲ್ಲಿ ಮಾಧವ ಉಪಾಧ್ಯಾಯ ಸ್ವಾಗತಿಸಿ,ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸಿದರು. ಕಾರ್ಯದರ್ಶಿ ಹರಿಪ್ರಸಾದ್ ವಾರ್ಷಿಕ ವರದಿ ಹಾಗು ವಾರ್ಷಿಕ ಲೆಕ್ಕ ಪತ್ರಗಳನ್ನು ಕೃಷ್ಣರಾಜ ರಾವ್ ಮಂಡಿಸಿದರು. ರಮೇಶ್ ರಾವ್ ವಂದಿಸಿದರು 

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!