Janardhan Kodavoor/ Team KaravaliXpress
28.6 C
Udupi
Sunday, August 1, 2021

ಜಿಲ್ಲಾ ವರ್ತಕರ ಸಂಘದಿಂದ ಎಲ್ಲಾ ವರ್ತಕರಿಗೆ ಹಾಗು ಸಿಬ್ಬಂದಿಗೆ ಉಚಿತ ಲಸಿಕೆ ನೀಡುವಂತೆ ಜಿಲ್ಲಾಡಳಿತಕ್ಕೆ ಮನವಿ

ಉಡುಪಿ: ಜಿಲ್ಲಾ ವರ್ತಕರ ಸಂಘದಿಂದ ಉಡುಪಿ ಜಿಲ್ಲಾಡಳಿತಕ್ಕೆ,ಅಪಾರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.ಸರಕಾರದಿಂದ ಎಲ್ಲಾ ಬಗೆಯ ಅಂಗಡಿಗಳನ್ನು ತೆರೆದು ವ್ಯವಹಾರ ಮಾಡಲು ಅನುಮತಿ ನೀಡುವಂತೆ ವಿನಂತಿಸಲಾಯಿತು.

ಮನವಿ ಸ್ವಕರಿಸಿದ ಅಪಾರ ಜಿಲ್ಲಾಧಿಕಾರಿ ಸರಕಾರದಿಂದ ಎಲ್ಲಾ ವರ್ತಕರಿಗೆ ಹಾಗು ಸಿಬ್ಬಂದಿಗೆ ಉಚಿತ ಲಸಿಕೆ ನೀಡುವ ಬಗ್ಗೆ ತಿಳಿಸಿದರು.ಶಾಸಕರಘುಪತಿ ಭಟ್ ಗೆ ಮನವಿ ಸಲ್ಲಿಸಿ ಸಂಘದ ಸದಸ್ಯರಿಗೆ ವ್ಯವಹಾರ ಮಾಡಲು ಅನುಮತಿ ನೀಡುವಂತೆ ಒತ್ತಾಯಿಸಲಾಯಿತು.

ಸಂಘದ ಅಧ್ಯಕ್ಷ ಐರೋಡಿ ಸಹನ ಶೀಲ ಪೈ , ಹರ್ಷವರ್ಧನ್,ಪ್ರಕಾಶ್ ಉಪಾಧ್ಯಾಯ, ಅಬ್ದುಲ್ಲಾ ,ಸಂಘದ ಉಪಾಧ್ಯಕ್ಷ ವಸಂತ ಭಟ್,ಕಾರ್ಯದರ್ಶಿ ನಾಗರಾಜ್ ಪಾದೆ ಮಠ, ವಿಶ್ವನಾಥ್ ಗಂಗೊಳ್ಳಿ,ಶ್ರೀಧರ್ ನಾಯಕ್ ಉಪಸ್ಥರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಸುಪ್ರಭಾತ

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!