Janardhan Kodavoor/ Team KaravaliXpress
29.6 C
Udupi
Thursday, January 20, 2022
Sathyanatha Stores Brahmavara

ಉಡುಪಿ : ಚಿಟ್ಪಾಡಿ ವಲಯ ಬ್ರಾಹ್ಮಣ ಸಭಾದ 18ನೇ ವಾರ್ಷಿಕ ಮಹಾಸಭೆ

ಉಡುಪಿ : ಚಿಟ್ಪಾಡಿ ವಲಯ ಬ್ರಾಹ್ಮಣ ಸಭಾದ18ನೇ ವಾರ್ಷಿಕ ಮಹಾಸಭೆಯು ಶ್ರೀನಿವಾಸ ದೇವಸ್ಥಾನದಲ್ಲಿ ಸಭಾದ ಅಧ್ಯಕ್ಷ ಕೃಷ್ಣ ಭಟ್ ನೇತೃತ್ವದಲ್ಲಿ ಜರುಗಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಡುಪಿ ಅನಂತೇಶ್ವರ ದೇವಾಲಯದ ಪರ್ಯಾಯ ಅರ್ಚಕ ವೇದವ್ಯಾಸ ಐತಾಳ್ ಮಾತನಾಡಿ ನಮ್ಮ ಸಂಸ್ಕೃತಿ, ಸಂಸ್ಕಾರಗಳ ಆಚರಣೆ ಮತ್ತು ಅವುಗಳ ಮಹತ್ವದ ಬಗ್ಗೆ ತಿಳಿ ಹೇಳಿದರು. 

ಉಡುಪಿಯ ಖ್ಯಾತ ಸಿವಿಲ್ ಇಂಜಿನಿಯರ್ ಶ್ರೀಧರ ಆಚಾರ್ ದಂಪತಿಗಳನ್ನು ಗೌರವಾಧ್ಯಕ್ಷ ಡಾ ಗೋಪಾಲಕೃಷ್ಣ ಬಲ್ಲಾಳ್ ಸಭಾದ ವತಿಯಿಂದ ಸಮ್ಮಾನಿಸಿದರು. 

ಮಹಾಸಭೆಯ ಸಂಪೂರ್ಣ ವೆಚ್ಚ ಭರಿಸಿದ ಕೆ ಎನ್ ಸತ್ಯನಾರಾಯಣ ದಂಪತಿಗಳನ್ನು ಹಾಗೂ ಕಳೆದ ಪಿಯುಸಿ ಫಲಿತಾಂಶದಲ್ಲಿ ಪೂರ್ಣ ಅಂಕ ಪಡೆದ ಕು ಧನ್ಯರವರನ್ನು ವೇದಿಕೆಯಲ್ಲಿ ಸತ್ಕರಿಸಲಾಯಿತು.

ಕಳೆದ ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿಪ್ರ ಸದಸ್ಯರ ಮಕ್ಕಳನ್ನು ನಗದು ಪುರಸ್ಕಾರದೊಂದಿಗೆ ಗೌರವಿಸಲಾಯಿತು.ನೂತನ ಆಡಳಿತ ಮಂಡಳಿಯ ಸದಸ್ಯರನ್ನು ಇದೇ ಸಂದರ್ಭದಲ್ಲಿ ಸಭೆಗೆ ಪರಿಚಯಿಸಲಾಯಿತು.

ಪ್ರಾರಂಭದಲ್ಲಿ ಸಭಾದ ಅಧ್ಯಕ್ಷ ಕೃಷ್ಣ ಭಟ್ ಸ್ವಾಗತಿಸಿ, ಖಜಾಂಜಿ ವೆಂಕಟೇಶ್ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು.ಕಾರ್ಯದರ್ಶಿ ಮಧ್ವರಾಯ ಭಟ್ ವಂದಿಸಿ, ಸಭಾದ ಸ್ಥಾಪಕಾಧ್ಯಕ್ಷ ಪ್ರೋ ವೇಣುಗೋಪಾಲ ಮುಳ್ಳೇರಿಯ ನಿರೂಪಿಸಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!