ನ.14 -ಆಧುನಿಕ ಕನ್ನಡ ರಂಗಭೂಮಿ ದಿನ

ತಪೋವನ ಲೈಫ್ ಸ್ಪೇಸ್, ಮಣಿಪಾಲ ಸಕ್ಕರಿ ಬಾಳಾಚಾರ್ಯ ಶಾಂತಕವಿ ಟ್ರಸ್ಟ್ (ರಿ) ಇವರ ಸಂಯುಕ್ತ ಆಶ್ರಯದಲ್ಲಿ ಆಧುನಿಕ ಕನ್ನಡ ರಂಗಭೂಮಿ ದಿನ

ದಿನಾಂಕ ೧೪/೧೧/೧೮೭೭ ರಂದು ಗದಗಿನಲ್ಲಿ ಕರ್ನಾಟಕದ ಪ್ರಪ್ರಥಮ ನಾಟಕ ಮಂಡಳಿ”ಶ್ರೀ ವೀರನಾರಾಯಣ ಪ್ರಸಾದಿತ ಕೃತುಪುರ ಕರ್ಣಾಟಕ ನಾಟಕ ಮಂಡಳಿ” ಸ್ಥಾಪಿತವಾಗಿದ್ದು ಶಾಂತಕವಿ ಶ್ರೀ ಸಕ್ಕರಿ ಬಾಳಾಚಾರ್ಯ ರವರು ರಚಿಸಿದ ಕನ್ನಡದ ಪ್ರಥಮ ಸ್ವತಂತ್ರ ನಾಟಕ “ಉಷಾ ಹರಣ”ವು ಮೊಟ್ಟ ಮೊದಲಬಾರಿಗೆ ಈ ದಿವಸ ಪ್ರದರ್ಶಿಸಲ್ಪಟ್ಟಿದೆ.

ದಿನಾಂಕ: 14 ನವೆಂಬರ್ 2023, ಮಂಗಳವಾರ, ಬೆಳಗ್ಗೆ 10.30 ರಿಂದ

ಸ್ಥಳ: ತಪೋವನ ಲೈಫ್ ಸ್ಪೇಸ್, ಮಣಿಪಾಲ

ಉಪನ್ಯಾಸ “ಹವ್ಯಾಸಿ ರಂಗಭೂಮಿ ಮತ್ತು ವೃತ್ತಿ ರಂಗಭೂಮಿ ನಡುವಿನ ವ್ಯತ್ಯಾಸ” ಡಾ. ಯಶವಂತ ಎಸ್ ಸರದೇಶಪಾಂಡೆ ಖ್ಯಾತ ರಂಗಭೂಮಿ, ಚಲನಚಿತ್ರ ನಟ ಮತ್ತು ನಿರ್ದೇಶಕರು”ಭಾವ – ಗಾಯನ” ಶ್ರೀಮತಿ ವಾಸಂತಿ ರಮೇಶ್ ಶೆಣೈ ಆಕಾಶವಾಣಿ ಮತ್ತು ದೂರದರ್ಶನ ಕಲಾವಿದರು “ಸಕ್ಕರಿ ಬಾಳಾಚಾರ್ಯರ ಕುರಿತು” ಶ್ರೀಮತಿ ರೇವತಿ ನಾಡಗೀರ ರಂಗಭೂಮಿ ನಟಿ ಹಾಗೂ ಉಪಾಧ್ಯಕ್ಷರು, ತಪೋವನ

ಸಹಕಾರ: ರಂಗಭೂಮಿ (ರಿ) ಉಡುಪಿ ಕನ್ನಡ ಮತ್ತು ಪ್ರಾದೇಶಿಕ ಭಾಷೆಗಳ ಕೇಂದ್ರ, ಭಾಷಾ ವಿಭಾಗ, ಮಾಹೆ.

Leave a Reply