ನನ್ನ ಬೀಚ್‌ ಸ್ವಚ್ಛ ಬೀಚ್ ಅಭಿಯಾನ 

ಹೂಡೆ ಸ್ವರ್ಣಾರಾಧನಾ ಅಭಿಯಾನದ ಅಂಗವಾಗಿ ಸ್ವಚ್ಛ ಭಾರತ್ ಫ್ರೆಂಡ್ಸ್, ನಿರ್ಮಲ್ ತೋನ್ಸೆ ನೇತೃತ್ವದಲ್ಲಿ ಸೌತ್ ಕೆನರಾ ಫೊಟೊಗ್ರಾಫರ್ಸ್ ಅಸೋಸಿಯೇಷನ್ ಉಡುಪಿ ವಲಯ, ತೋನ್ಸೆ ಗ್ರಾಮಪಂಚಾಯತ್, ಉಡುಪ ರತ್ನ ಪ್ರತಿಷ್ಠಾನ ಕೊಡವೂರು, ಜಯಂಟ್ಸ್ ಉಡುಪಿ ಬ್ರಹ್ಮಾವರ, ಬ್ಲಾಕ್ ಹಾಕ್ ರೈಡರ್ಸ್ ಉಡುಪಿ, ಹಳೆ ವಿದ್ಯಾರ್ಥಿ ಸಂಘ ಸ.ಪ.ಪೂ ಕಾಲೇಜು ಕೆಮ್ಮಣ್ಣು, ಲಯನ್ಸ್ ಕ್ಲಬ್ ಕಲ್ಯಾಣಪುರ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಉಡುಪಿ, ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ ಸಂಯುಕ್ತ ಆಶ್ರಯದಲ್ಲಿ ಹೂಡೆಯ ಕಡಲ ತೀರದಲ್ಲಿ ನನ್ನಬೀಚ್ ಸ್ವಚ್ಛ ಬೀಚ್ ಅಭಿಯಾನ ಭಾನುವಾರದಂದು ನಡೆಯಿತು. 
ಸುಮಾರು ೨ ಗಂಟೆಗಳ ಕಾಲ ಸ್ವಯಂಸೇವಕರು ಕಡಲ ತೀರದ ಒಂದು ಕಿಮೀ ವ್ಯಾಪ್ತಿಯನ್ನು ಸ್ವಚ್ಛಗೊಳಿಸಿ ಪ್ರವಾಸಿಗರಲ್ಲಿ ಮತ್ತು ಸ್ಥಳೀಯರಲ್ಲಿ ಕಡಲ ತೀರದ ಸ್ವಚ್ಛತೆಯನ್ನು ಕಾಪಾಡುವ ಬಗ್ಗೆ ಜಾಗೃತಿ ಮೂಡಿಸ ಲಾಯಿತು. ಸುಮಾರು 100 ಮಂದಿ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಡಾ. ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ಆಡಳಿತ ಅಧಿಕಾರಿ ಸೌಜನ್ಯ ಶೆಟ್ಟಿ, ಮಧುಸೂಧನ್ ಹೇರೂರು, ಇಂದಿರಾ ಶಿವರಾವ್ ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲ ಡಾ. ಪ್ರಕಾಶ್ ಶೆಣೈ, ರೊನಾಲ್ಡ್ ಸುವಾರಿಸ್, ಉಪನ್ಯಾಸಕಿ ಜಯಶ್ರೀ ನಾಯಕ್, ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ , ಸವಿತಾ ನೋಟಗಾರ್, ಸುಕೇಶ್‌ಅಮೀನ್, ಡಾ. ಕೀರ್ತಿ ಪಾಲನ್. ಈರಪ್ಪ ಗೌಂಡಿ, ರಮೇಶ್ ಎಲಿಬಳ್ಳಿ,  ಶರಣಪ್ಪ ಬಿ., ಸಂತೋಷ್ ಹೊಸೂರು ಮಹೇಶ್ ಗುಂಡಿ ಬೈಲ್
ಜಗದೀಶ್, ಶಿವ ಕೆ ಅಮೀನ್, ದೇವದಾಸ್ ಕಾಮತ್, ಜಗದೀಶ್‌ಶೆಟ್ಟಿ, ಉದಯ ನಾಯ್ಕ್, ರಂಜಿತ್ ಕೊಡವೂರು, ಗುರುರಾಜ್ ನಾಯಕ್, ಎಂ.ಎಸ್. ಖಾನ್,ವಿವೇಕ್, ನಾಗರಾಜ್ ಭಂಡಾರ್ಕಾರ್, ಶಿವ ಕೆ.‌ಅಮೀನ್, ರಮೇಶ್ ಪೂಜಾರಿ, ಅನೀಲ್ ಲಕ್ಷ್ಮಣ್, ಚಂದ್ರಶೇಖರ್, ನಾರಾಯಣ ಜತ್ತನ್, ಮಹೇಶ್ ಸುವರ್ಣ, ಎಮ್.ಎಸ್ ಮಂಜು ಪರ್ಕಳ, ಪ್ರವೀಣ್ ಹೂಡೆ, ಆನಂದ್ ಕಿದಿಯೂರು, ಜಯರಾಜ್ ಅಮೀನ್,  ಉದಯ ನಾಯ್ಕ್, ದೇವ್ ದಾಸ್ ಕಾಮತ್ ಮುಂತಾದವರು ಉಪಸ್ಥಿತರಿದ್ದರು.
ನಿರ್ಮಲ್‌ ತೋನ್ಸೆ ಅಧ್ಯಕ್ಷ ವೆಂಕಟೇಶ್ ಕುಂದರ್ ಸ್ವಾಗತಿಸಿ ರಾಘವೇಂದ್ರ ಪ್ರಭು ಕರ್ವಾಲುವಂದಿಸಿದರು. ಪ್ರಭಾಕರ ಭಟ್ ಪ್ರತಿಜ್ಞಾ ವಿಧಿ ಬೋಧಿಸಿದರು. ಎಸ್.ಕೆ.ಪಿ.ಎ ಮಾಧ್ಯಮ ವಕ್ತಾರ ಜನಾರ್ದನ್ ಕೊಡವೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ವಚ್ಛ ಭಾರತ್‌ಫ್ರೆಂಡ್ಸ್ ಸಂಚಾಲಕ ಗಣೇಶ್ ಪ್ರಸಾದ್ ನಿರೂಪಿಸಿದರು.
 
 
 
 
 
 
 
 
 
 
 

Leave a Reply