ಸ್ವಚ್ಛ ಸಾಣೂರು ತಂಡದಿಂದ ಸ್ವಚ್ಚತಾ ಕಾರ್ಯಕ್ರಮ

ಉಡುಪಿ : ಭಾರತ ಸರ್ಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಸಂಘಟನೆ, ಉಡುಪಿ ಜಿಲ್ಲಾಡಳಿತ ಉಡುಪಿ, ಜಿಲ್ಲಾ ಪಂಚಾಯತ್ ಉಡುಪಿ, ಇವುಗಳ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಅತ್ಯುತ್ತಮ ಯುವ ಮಂಡಲ ಪ್ರಶಸ್ತಿ ಪುರಸ್ಕೃತ ಯುವಕ ಮಂಡಲ (ರಿ.) ಸಾಣೂರು, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಉಡುಪಿ ಜಿಲ್ಲಾ ಅತ್ಯುತ್ತಮ ಯುವ ಮಂಡಲ ಪ್ರಶಸ್ತಿ, ಕರ್ನಾಟಕ ಸಂಘ ರತ್ನ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಇದರ ಸ್ವಚ್ಛ ಸಾಣೂರು ತಂಡದಿಂದ ದೇಶದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಸಂಭ್ರಮದ ಪ್ರಯುಕ್ತ ಕ್ಲೀನ್ ಇಂಡಿಯಾ ಪ್ಲಾಸ್ಟಿಕ್ ಮುಕ್ತ ಪ್ರದೇಶ ಕಾರ್ಯಕ್ರಮದಡಿ ಪ್ರತಿ ಆದಿತ್ಯವಾರ ಬೆಳಿಗ್ಗೆ 7.00 ರಿಂದ 8.00 ಗಂಟೆಯವರೆಗೆ ಸ್ವಚ್ಚತಾ ಸಾಪ್ತಾಹಿಕ ಆಂದೋಲನ ನಡೆಯುತ್ತಿದೆ.

11ನೇ ವಾರದ ಸ್ವಚ್ಛತಾ ಸಾಪ್ತಾಹಿಕವನ್ನು ಪುಲ್ಕೇರಿ ಬೈಪಾಸ್ ನಿಂದ ಪ್ರಾರಂಭಿಸಿ ವಿಶಾಲ್ ಗ್ಯಾರೇಜ್ ವರೆಗೆ ಸ್ವಚ್ಛತೆಯನ್ನು ಮಾಡಲಾಯಿತು.

ಸಾಣೂರು ಯುವಕ ಮಂಡಲದ ಕಾರ್ಯದರ್ಶಿ ಮೋಹನ್ ಶೆಟ್ಟಿ, ಮಾಜಿ ಅಧ್ಯಕ್ಷ ಮಹೇಶ್ ಕುಮಾರ್ , ದೇವಾನಂದ್ ಶೆಟ್ಟಿ, ಪ್ರಕಾಶ್ ಮಡಿವಾಳ ಜೊತೆ ಕಾರ್ಯದರ್ಶಿ ಪ್ರಕಾಶ್ ರಾವ್, ಕ್ರೀಡಾ ಕಾರ್ಯದರ್ಶಿ ಹರೀಶ್ ರಾವ್, ಕೋಶಾಧಿಕಾರಿ ರಾಜೇಶ್ ಪೂಜಾರಿ, ಪದಾಧಿಕಾರಿಗಳಾದ ಸಾಕ್ಷಾತ್ ಶೆಟ್ಟಿ, ಪ್ರಸನ್ನ ಆಚಾರ್ಯ ಸತೀಶ್ ಮಡಿವಾಳ ದಿನೇಶ್ ಶೆಟ್ಟಿಗಾರ್, ಜಯನ್ ಶೆಟ್ಟಿ, ಜಯ ಶೆಟ್ಟಿಗಾರ್, ಸುದರ್ಶನ್ ನಾಯ್ಕ್, ಸುಧಾಕರ್, ಸಂಪತ್, ವಿದ್ಯಾನಂದ್ ಕೋಟ್ಯಾನ್ ಮೊದಲಾದವರು ಪಾಲ್ಗೊಂಡಿದರು.

ಒಟ್ಟು 8 ಚೀಲ ತ್ಯಾಜ್ಯಗಳು ಲಭಿಸಿದೆ ಇದರಲ್ಲಿ ಪ್ಲಾಸ್ಟಿಕ್, ಬಿಯರ್ ಬಾಟಲಿ ಪರಿಸರಕ್ಕೆ ಹಾನಿಕರವಾಗುವ ಇತರ ತಾಜ್ಯಗಳು ಲಭಿಸಿದೆ.

 
 
 
 
 
 
 
 
 

Leave a Reply