Janardhan Kodavoor/ Team KaravaliXpress
33 C
Udupi
Tuesday, December 1, 2020

ರಾಜ್ಯಮಟ್ಟದ ಮಕ್ಕಳ ಛಾಯಾಚಿತ್ರ ಸ್ಪರ್ಧೆ 2020

 ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಉಡುಪಿ ವಲಯದ ವತಿಯಿಂದ ಮಕ್ಕಳ ದಿನಾಚರಣೆಯ ಪ್ರಯುಕ್ತ ರಾಜ್ಯಮಟ್ಟದ ಮಕ್ಕಳ ಛಾಯಾಚಿತ್ರ ಸ್ಪರ್ಧೆ 2020 ಆಯೋಜಿಸಲಾಗಿದೆ.  ನಿಬಂಧನೆಗಳು :ಮೂರು ವರ್ಷದೊಳಗಿನ ಮಕ್ಕಳಿಗೆ ಮಾತ್ರ ಅವಕಾಶ.  ಮಗುವಿನ ಫೋಟೋ ೬x ೯ ಅಳತೆಯಲ್ಲಿ ಇರಬೇಕು.  ಹಳೆಯ ಫೋಟೋ ಹಾಗು ಮೊಬೈಲ್ ನಿಂದ ತೆಗೆದ ಫೋಟೋವನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.
ಫೋಟೋದ ಹಿಂದೆ ಮಗುವಿನ ಹೆಸರು, ವಿಳಾಸ ಜನ್ಮ ದಿನಾಂಕ ಮತ್ತು ದೂರವಾಣಿ ಸಂಖ್ಯೆ ನಮೂದಿಸತಕ್ಕದ್ದು.  ಜನ್ಮದಿನಾಂಕದ ದಾಖಲೆಯ ನಕಲು ಪ್ರತಿ ಜೊತೆಗಿರಲಿ.  ಫೋಟೋ ಕಳುಹಿಸಲು ಕೊನೆಯ ದಿನಾಂಕ 10.11. 2020. ಫಲಿತಾಂಶವನ್ನು 14.11.2020 ಪ್ರಕಟಿಸಲಾಗುವುದು.  ಛಾಯಾಚಿತ್ರವನ್ನು ಅಂಚೆ ಮೂಲಕವೇ ತಲುಪಿಸ ಬೇಕು. ಫೋಟೋ ಕಳುಹಿಸಬೇಕಾದ ವಿಳಾಸ-  ಶ್ಯಾಡೋ ಡಿಜಿಟಲ್  ಕ್ರಿಯೇಶನ್,  ಕಸ್ತೂರಿ ಬಿಲ್ಡಿಂಗ್ ಎರಡನೇ ಮಹಡಿ,  ಶಿರಿಬೀಡು,  ಉಡುಪಿ.  ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ವಿಶೇಷ ಬಹುಮಾನಗಳನ್ನು ನೀಡಲಾಗುವುದು ಎಂದು ವಲಯಾಧ್ಯಕ್ಷ ಪ್ರಕಾಶ್ ಕೊಡಂಕೂರ್ ಹಾಗು ಕಾರ್ಯದರ್ಶಿ ಸುಕೇಶ್ ಅಮೀನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

ಮಂಗಳೂರಿನಲ್ಲಿ ಬೋಟ್ ದುರಂತ,6ಮಂದಿ ನಾಪತ್ತೆ

ಮಂಗಳೂರು: ಡಿ 1 : ಮೀನುಗಾರಿಕೆಗೆ ತೆರಳಿ ವಾಪಾಸಾಗುತ್ತಿದ್ದ ಬೋಟ್ ಮಗುಚಿ ಬಿದ್ದು 6 ಮಂದಿ ಮೀನುಗಾರರು ನಾಪತ್ತೆಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಬೋಳಾರದ ಶ್ರೀ ರಕ್ಷಾ ಎಂಬ ಮೀನುಗಾರಿಕಾ ಬೋಟ್...

}ಶ್ರೀಕೃಷ್ಣ ಮಠದ ನಾಮ ಫಲಕದಲ್ಲಿ ಕನ್ನಡವನ್ನು ತೆಗೆದು ಹಾಕಿರುವುದು ಸರಿಯಾದ ಕ್ರಮವಲ್ಲ~ಕಸಾಪ

ಉಡುಪಿ, ಡಿ.1: ಉಡುಪಿ ಶ್ರೀಕೃಷ್ಣ ಮಠದ ನಾಮ ಫಲಕದಲ್ಲಿ ಕನ್ನಡವನ್ನು ತೆಗೆದು ಹಾಕಿರುವುದು ಸರಿಯಾದ ಕ್ರಮವಲ್ಲ. ಕನ್ನಡ ಸಾಹಿತ್ಯ ಪರಿಷತ್ ಇದನ್ನು ಉಗ್ರವಾಗಿ ಖಂಡಿಸುತ್ತದೆ ಎಂದು ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ...

ಹಣತೆ ದೀಪದೊಂದಿಗೆ ಕಲಾತ್ಮಕ ಛಾಯಾಗ್ರಹಣ ನಡೆಸಿದ ಕರಂದಾಡಿ ಶ್ರೀಧರ್ ಶೆಟ್ಟಿಗಾರ್… 

​​ಕಾಪು ಮಜೂರು ಗ್ರಾಮದ ಕರಂದಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಾರ್ಷಿಕ ದೀಪೋತ್ಸವ ರವಿವಾರ ನಡೆಯಿತು. ದೀಪೋತ್ಸವದ ಪ್ರಯುಕ್ತ ಶ್ರೀ ದೇವರಿಗೆ ನವಕ ಕಲಶಾಭಿಷೇಕ, ಮಧ್ಯಾಹ್ನ ಅನ್ನ ಸಂತರ್ಪಣೆ, ರಾತ್ರಿ ರಂಗಪೂಜೆ,ತುಳಸಿ ಪೂಜೆ, ತುಳಸಿ ಸಂಕೀರ್ತಣೆ...

ಗ್ರಾ.ಪಂ. ಚುನಾವಣೆ ಘೋಷಣೆ: ಕಾಂಗ್ರೆಸ್ ರಾಜಕೀಯ ದೊಂಬರಾಟ ಪ್ರಾರಂಭ–ಪೆರ್ಣಂಕಿಲ ಶ್ರೀಶ ನಾಯಕ್ ಲೇವಡಿ

ಉಡುಪಿ: ಕೊರೋನಾದ ಸಂಕಷ್ಟದ ಕಾಲದಲ್ಲಿ ನಿದ್ದೆಯಲ್ಲಿ ಮುಳುಗಿದ್ದ ಕಾಂಗ್ರೆಸ್ ನಾಯಕರು ಇದೀಗ ಗ್ರಾಮ ಪಂಚಾಯತ್ ಚುನಾವಣೆಯ ಘೋಷಣೆಯಿಂದ ಎದ್ದು ರಾಜಕೀಯ ದೊಂಬರಾಟದಲ್ಲಿ ತೊಡಗಿರುವುದು ಹಾಸ್ಯಾಸ್ಪದ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪೆರ್ಣಂಕಿಲ ಶ್ರೀಶ...

ಮಣಿಪಾಲ: ಯುವಕರ ಸಮಯ ಪ್ರಜ್ಞೆಯಿಂದ ಭಾರಿ​ ಬೆಂಕಿ​ ಅನಾಹುತದಿಂದ ಪಾರು

ಮಣಿಪಾಲ : ಸಮೀಪದ ದುಗ್ಲಿ ಪದವು ಎಂಬಲ್ಲಿ ತಡರಾತ್ರಿ ಸುಮಾರಿಗೆ ಬೆಂಕಿಬಿದ್ದಿದ್ದು​ ​ಯುವಕರ ಸಮಯ​ ​ಪ್ರಜ್ಞೆಯಿಂದ ಬಹಳಷ್ಟು ಜೀವ ಹಾನಿ ಮತ್ತು ಆಸ್ತಿಪಾಸ್ತಿ ರಕ್ಷಣೆಯಾಗಿದೆ.​ ಇಂದು ರಾತ್ರಿ ಸುಮಾರು ಹತ್ತು ಗಂಟೆ ಸುಮಾರಿಗೆ ಮಣಿಪಾಲ...
error: Content is protected !!