ವೃತ್ತಿನಿರತರಿಗೆ ಒಂದು ವೃತ್ತಿಪರ ಸಂಘಟನೆ ಅತೀ ಮುಖ್ಯ ~ಅಶೋಕ್ ಕುಮಾರ್ ಶೆಟ್ಟಿ ನಾವುಂದ 

ಯಾವುದೇ ಒಂದು ವೃತ್ತಿನಿರತರಿಗೆ ಅವರದ್ದೇ ಆದ ಒಂದು ವೃತ್ತಿಪರ ಸಂಘಟನೆ ಅತೀ ಮುಖ್ಯ. ಸ್ಥಾಪಕ ಸದಸ್ಯರು ಕಟ್ಟಿ ಬೆಳೆಸಿದ ನಮ್ಮ ವೃತ್ತಿಪರ ಸಂಘಟನೆ 30 ವರುಷಗಳ ಸುದೀರ್ಘ ಹಾದಿಯಲ್ಲಿ ಯಶಸ್ವಿಯಾಗಿ ನಡೆದು  ಬರಲು ಸದಸ್ಯರೆಲ್ಲರ ನಿರಂತರ ಸಹಕಾರವೇ ಕಾರಣ. ಇದು ಮುಂದೆಯೂ ನಿರಂತರವಾಗಿರಲಿ. ಸಂಘಟನೆಯ ಯಶಸ್ಸು ಇದೇ ರೀತಿ ಮುಂದುವರಿಯಲಿ ಎಂದು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಷಿಯೇಷನ್ ದಕ್ಷಿಣ ಕನ್ನಡ-ಉಡುಪಿ ಜಿಲ್ಲಾ ಸಂಚಾಲಕ ಅಶೋಕ್ ಕುಮಾರ್ ಶೆಟ್ಟಿ ನಾವುಂದ ಅಭಿಪ್ರಾಯ ಪಟ್ಟರು. 

ಅವರು ಮಂಗಳವಾರದಂದು  ಮಂಗಳೂರಿನ ಸೈಂಟ್ ಸೆಬಾಸ್ಟಿಯನ್ ಚರ್ಚ್ ಹಾಲ್ ನಲ್ಲಿ ಜರಗಿದ ಸೌತ್ ಕೆನರಾ ಫೋಟೋಗ್ರಾಫರ್ಸ್  ಅಸೋಷಿಯೇಷನ್  ಇದರ 30ನೇ ಜಿಲ್ಲಾ ವಾರ್ಷಿಕ ಮಹಾಸಭೆಯನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.   

ಅಧ್ಯಕ್ಷತೆಯನ್ನು ವಹಿಸಿದ್ದ ಜಲ್ಲಾಧ್ಯಕ್ಷ ಕರಂದಾಡಿ ಶ್ರೀಧರ್ ಶೆಟ್ಟಿಗಾರ್ ಮಾತನಾಡುತ್ತಾ ಸಂಘಟನೆಯ ಪ್ರತಿಯೊಬ್ಬ ಸದಸ್ಯನೂ ಸಂಘಟನೆಯಿಂದ ತನಗೇನು ಲಾಭ ಎಂದು ಯೋಚಿಸುವುದಕ್ಕಿಂತ ತಾನು ಸಂಘಟನೆಗೆ ಏನು ನೀಡಬಲ್ಲೆ ಎಂದು ಯೋಚಿಸಿದರೆ ಸಂಘಟನೆಯ ಅಭಿವೃದ್ಧಿ ಸಾಧ್ಯ. ಕೊರೋನಾದ ಸಂದಿಗ್ಧ ಸಮಯದಲ್ಲಿ ವೃತ್ತಿಗೆ ಹೊಡೆತ ಬಿದ್ದರೂ ನಮ್ಮ ವೃತ್ತಿಪರ ಸಂಘಟನೆಯ ಬಲ ಕುಂದದಂತೆ ಎಲ್ಲಾ ವಲಯಗಳ ಅಧ್ಯಕ್ಷರು ಪದಾಧಿಕಾರಿಗಳೊಂದಿಗೆ ಎಲ್ಲಾ ಸದಸ್ಯರ ನಿರಂತರ ಸಂಪರ್ಕದಲ್ಲಿದ್ದು ಸದಸ್ಯರ ಒಳಿತಿಗಾಗಿ ಬಹಳಷ್ಟು ಶ್ರಮ ವಹಿಸಿದ್ದಾರೆ. ಇದು ಪ್ರಶಂಸನೀಯ ಎಂದರು.

ಸ್ಥಾಪಕ ಸದಸ್ಯ ವಿಠಲ ಚೌಟ ಛಾಯಾ ಸುರಕ್ಷಾ ಚಾರಿಟೇಬಲ್ ಟ್ರಸ್ಟ್ ಲೋಕಾರ್ಪಣೆಗೊಳಿಸಿದರು.  ತುರ್ತು ರಕ್ತದಾನಿಗಳ ಗುಂಪುನ್ನು ಮಾಜಿ ಅಧ್ಯಕ್ಷ ಕರುಣಾಕರ ಕಾನಂಗಿ   ಬಿಡುಗಡೆಗೊಳಿಸಿದರು. ಕಲಿಕೆಯಲ್ಲಿ ಸಾಧನೆಗೈದ ಸದಸ್ಯರ ಮಕ್ಕಳಿಗೆ ಕಲಿಕಾ ಪ್ರೋತ್ಸಾಹದಡಿಯಲ್ಲಿ ಧನ ಸಹಾಯ ಮಾಡಲಾಯಿತು.

ಮಾಜಿ ಅಧ್ಯಕ್ಷರುಗಳಾದ ಶಿವರಾಮ ಕಡಬ,  ಕೆ ವಾಸುದೇವರಾವ್,  ಜಗನ್ನಾಥ ಶೆಟ್ಟಿ, ಗೋಪಾಲ್ ಸುಳ್ಯ, ವಿಲ್ಸನ್ ಬೆಳ್ತಂಗಡಿ, ,ದಯಾನಂದ ಪಯ್ಯಡೆ, ಸ್ಥಾಪಕ ಸದಸ್ಯರಾದ ಜಯಕರ್ ಸುವರ್ಣ,  ಕೀರ್ತಿ ಮಂಗಳೂರು, ಸಲಹಾ ಸಮಿತಿ ಸದಸ್ಯ ಶಿವ ಕೆ. ಅಮೀನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರೀಶ್ ಅಡ್ಯಾರ್,  ಜಿಲ್ಲಾ ಪ್ರಧಾನ ಕೋಶಾಧಿಕಾರಿ ಆನಂದ ಎಂ ಬಂಟ್ವಾಳ, ಉಪಾಧ್ಯಕ್ಷ ನಾಗರಾಜ ರಾಯಪ್ಪನ ಮಠ ಕುಂದಾಪುರ,  ಜೊತೆ ಕಾರ್ಯದರ್ಶಿಗಳಾದ ಸಂತೋಷ್ ಶೆಟ್ಟಿ ಕಾಪು, ಅಜಯ್ ಮಂಗಳೂರು, ಸಂಘಟನಾ ಕಾರ್ಯದರ್ಶಿಗಳಾದ ಸುಂದರ ಪೂಜಾರಿ ಕೊಳಲಗಿರಿ, ಲೋಕೇಶ್ ಬಿ ಎಂ, ಕ್ರೀಡಾ ಕಾರ್ಯದರ್ಶಿಗಳಾದ ತನುಂಜಯ ರಾವ್,  ಪ್ರಕಾಶ್ ಬ್ರಹ್ಮಾವರ,  ಪ್ರಸಾದ್ ಐಸಿರ ಕಾರ್ಕಳ,  ಉದಯ ಮುಂಡೂರು,  ಮಾಧ್ಯಮ ಪ್ರತಿನಿಧಿ ವಿಲ್ಫ್ರೆಡ್ ಮೆಂಡೋನ್ಸಾ,  ಸಾಂಸ್ಕೃತಿಕ ಕಾರ್ಯದರ್ಶಿ ನವೀನ್ ಕುಮಾರ್ ಕಟೀಲ್,  ಕಿರಣ್ ಕುಮಾರ್ ಬೆಳ್ತಂಗಡಿ,  ಪಿಆರ್ ಒ  ಹರೀಶ್ ಪುಣಚ ಹಾಗೂ ಪ್ರಮೋದ್ ಸುವರ್ಣ ಕಾಪು.

ವಿವಿಧ ವಲಯಗಳ ಅಧ್ಯಕ್ಷರುಗಳಾದ ಕುಂದಾಪುರ ವಲಯದ ರಾಜಾ ಮಠದಬೆಟ್ಟು,  ಬ್ರಹ್ಮಾವರ ವಲಯದ   ಹಿರಿಯ ಮಂಗಳೂರು ವಲಯದ ಮಧು ಮಂಗಳೂರು, ಉಳ್ಳಾಲ ವಲಯದ ಚಿದಾನಂದ ಉಲ್ಲಾಳ,  ಉಡುಪಿ ವಲಯದ ಪ್ರಕಾಶ್ ಕೊಡಂಕೂರು,  ಸುಳ್ಯ ವಲಯದ ಸುಧಾಕರ ಬೆಳ್ತಂಗಡಿ, ಬೆಳ್ತಂಗಡಿ ವಲಯದ ಸುರೇಶ್ ಕೌಡಂಗೆ, ಮೂಡಬಿದ್ರೆ ವಲಯದ ರವಿ ಮಾನಸ,  ಕಾರ್ಕಳ ವಲಯದ ಭಾಸ್ಕರ್ ಕುಲಾಲ್,  ಕಾಪು ವಲಯದ ವೀರೇಂದ್ರ ಪೂಜಾರಿ,  ಸುರತ್ಕಲ್ ವಲಯದ ಜಯಕರ ಸುವರ್ಣ,  ಪುತ್ತೂರು ವಲಯದ ಹರೀಶ್ಎಲಿಯ, ಮೂಲ್ಕಿ ವಲಯದ ನವೀನ್ ಚಂದ್ರ,  ಬಂಟ್ವಾಳ ವಲಯದ ಕುಮಾರಸ್ವಾಮಿ ಉಪಸ್ಥಿತರಿದ್ದರು 

ಉಪಾಧ್ಯಕ್ಷ ದೇವರಾಜ್ ಶೆಟ್ಟಿ ಸ್ವಾಗತಿಸಿದರು. ಮಾಧ್ಯಮ ಪ್ರತಿನಿಧಿ ಜನಾರ್ದನ್ ಕೊಡವೂರು ದನ್ಯವಾದ ವಿತ್ತರು, ದಿವಾಕರ್ ಕಟೀಲು ಪ್ರಾರ್ಥಿಸಿದರು,  ರಾಘವೇಂದ್ರ ಸೇರಿಗಾರ ಹಾಗೂ ಬಬಿತಾ ಲತೀಶ್ ಮಂಗಳೂರು ನಿರೂಪಿಸಿದರು.

 
 
 
 
 
 
 
 
 
 
 

Leave a Reply