ಎಸ್  ಕೆಪಿಎ ಉಡುಪಿ ವಲಯ ಆಯೋಜಿಸಿದ್ದ ಮಕ್ಕಳ ಛಾಯಾಚಿತ್ರ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ  

ಮಕ್ಕಳು ದೇವರಿಗೆ ಸಮಾನ, ಮಕ್ಕಳೆಂದರೆ ಚೆಂದ. ಅದರಲ್ಲೂ ಮಕ್ಕಳು ನಕ್ಕರೆ ಇನ್ನೂ ಚೆಂದ. ಅದನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುವ ಚಾತುರ್ಯ ಛಾಯಾಗ್ರಾಹರಿಗೆ ಮಾತ್ರ ಎಂದು ಬಡಗುಬೆಟ್ಟು ಕ್ರೆಡಿಟ್  ಕೋ.ಆಪರೇಟಿವ್  ಸೊಸೈಟಿ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು. 
ಅವರು  ಸೌತ್ ಕೆನರಾ ಫೋಟೋ ಗ್ರಾಫರ್ ಅಸೋಸಿಯೇಷನ್  ಉಡುಪಿ ವಲಯದ ಆಶ್ರಯದಲ್ಲಿ  ಮಕ್ಕಳ ದಿನಾಚರಣೆಯ ಪ್ರಯುಕ್ತ  ಆಯೋಜಿಸಿದ  ಮಕ್ಕಳ ಛಾಯಾಚಿತ್ರ ಸ್ಪರ್ಧೆ 2020 ಇದರ ಜಗನ್ನಾಥ ಸಭಾ ಭವನದಲ್ಲಿ ಮಂಗಳವಾರ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ   ಎಸ್  ಕೆಪಿಎ ​ಸಂಘಟನೆ ಸಾಮಾಜಿಕವಾಗಿ ತನ್ನನ್ನು ತೊಡಗಿಸಿಕೊಂಡು ಸಮಾಜದಲ್ಲಿ ಒಳ್ಳೊಳ್ಳೆಯ ಕಾರ್ಯಕ್ರಮವನ್ನು ಹಮ್ಮಿಕೊಂಡು ಒಂದು ಮಾದರಿ ಸಂಘಟನೆಯಾಗಿ ಬೆಳೆಯುತ್ತಿದೆ ಎಂದರು.
ಇನ್ನೋರ್ವ ಅತಿಥಿ ಎಸ ಕೆ ಪಿ ಎ ಜಿಲ್ಲಾಧ್ಯಕ್ಷ ಕರಂದಾಡಿ ಶ್ರೀಧರ್ ಶೆಟ್ಟಿಗಾರ್ ಮಾತನಾಡಿ ಮಕ್ಕಳ ಛಾಯಾಗ್ರಹಣ ಮಾಡುವುದು ಕಷ್ಟದ ಕೆಲಸ. ಮಕ್ಕಳ ಮೂಡ್, ಸನ್ನಿವೇಶ, ಭಾವನೆ ಎಲ್ಲವನ್ನು ಮನಗಂಡು ಮತ್ತು ಮಕ್ಕಳಿಗೆ ಕಿರಿ ಕಿರಿಯಾಗದಂತೆ ನೋಡಿಕೊಂಡು, ಅದರಲ್ಲೂ ಪೋಷಕರಲ್ಲಿ ಸೈ  ಎನಿಸಿಕೊಂಡು ಛಾಯಾಗ್ರಹಣ ಮಾಡಬೇಕು ಎಂದರು. 
ಬಹುಮಾನ ಪಡೆದ ಪುಟಾಣಿಗಳಿಗೆ  ಧನಾತ್ಮಕ ಬೆಂಬಲ, ಸ್ಮರಣಿಕೆ, ಫೋಟೋ ಫ್ರೆಮ್ ಹಾಗು ಗಿಫ್ಟ್ ಐಟಂ ಗಳನ್ನು ನೀಡಲಾಯಿತು.  ಈ ಸಂದರ್ಭದಲ್ಲಿ ಜಿಲ್ಲಾ ಮಾಧ್ಯಮ ವಕ್ತಾರ ಜನಾರ್ದನ್ ಕೊಡವೂರು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುಂದರ ಪೂಜಾರಿ ಕೊಳಲಗಿರಿ, ವಲಯ ಗೌರಾವಾಧ್ಯಕ್ಷ ಶಿವ ಕೆ ಅಮೀನ್, ವಲಯ ಗೌರವಾಧ್ಯಕ್ಷ ನವೀನ್  ಬಲ್ಲಾಳ್  ಉಪಸ್ಥಿತರಿದ್ದರು. 
ವಲಯಾಧ್ಯಕ್ಷ ಪ್ರಕಾಶ್ ಕೊಡಂಕೂರ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುಕೇಶ್ ಅಮೀನ್ ವಂದಿಸಿದರು. ರಾಘವೇಂದ್ರ  ಮರ್ಣೆ ನಿರೂಪಿಸಿದರು.        
     
 
 
 
 
 
 
 
 
 
 
 
 

Leave a Reply