ಸೌತ್ ಕೆನರಾ ಫೊಟೋಗ್ರಾಫರ್ಸ್ ಅಸೋಸಿಯೇಶನ್ ಉಡುಪಿ ವಲಯ ವತಿಯಿಂದ ಕ್ಲೀನ್ ಇಂಡಿಯಾ ಅಭಿಯಾನ

ಕುರ್ಕಾಲು: ಭಾರತ ಸರಕಾರ, ಯುವ ಕಾರ್ಯ ಕ್ರೀಡಾ ಸಚಿವಾಲಯ, ಉಡುಪಿ ಜಿಲ್ಲಾಡಳಿತ, ನೆಹರೂ ಯುವ ಕೇಂದ್ರ ಉಡುಪಿ ಜಿಲ್ಲೆ, ಜಿಲ್ಲಾ ಪಂಚಾಯತ್ ಉಡುಪಿ, ಕುರ್ಕಾಲು ಗ್ರಾಮ ಪಂಚಾಯತ್, ಸ್ವಚ್ಛ ಭಾರತ್ ಫ್ರೆಂಡ್ಸ್, ರೋಟರಿ ಉಡುಪಿ, ಸೌತ್ ಕೆನರಾ ಫೊಟೋಗ್ರಾಫರ್ಸ್ ಅಸೋಸಿಯೇಶನ್ (ರಿ.) ಉಡುಪಿ ವಲಯ, ಶ್ರೀ ಕೃಷ್ಣ ರೋಟರಾಕ್ಟ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಕುಂಜಾರುಗಿರಿಯಲ್ಲಿ  ಕ್ಲೀನ್ ಇಂಡಿಯಾ ಅಭಿಯಾನ ನಡೆಯಿತು.

ಭಾರತ ಸರಕಾರದ ನೆಹರೂ ಯುವ ಕೇಂದ್ರ ಉಡುಪಿ ಜಿಲ್ಲಾ ಯುವಜನ ಅಧಿಕಾರಿ ವಿಲ್ಫ್ರೆಡ್ ಡಿಸೋಜ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಅಕ್ಟೋಬರ್ 31ರವರೆಗೆ ಜಿಲ್ಲೆಯ ಹಲವೆಡೆ ಕ್ಲೀನ್ ಇಂಡಿಯಾ ಅಭಿಯಾನ ನಡೆಯಲಿದೆ.ಪ್ಲಾಸ್ಟಿಕ್ ಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಜನರು ಸ್ವಚ್ಛತೆಗೆ ಆದ್ಯತೆ ನೀಡುವ ಮನೋಭಾವ ಮೈಗೂಡಿಸಿಕೊಳ್ಳಲು ಪೂರಕ ವಾತಾವರಣ ನಿರ್ಮಾಣ ಮಾಡುವುದೇ ಅಭಿಯಾನದ ಉದ್ದೇಶ.

ಪ್ರಧಾನಿಯವರು ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿದ ದಿನದಿಂದ ಇಂದಿನವರೆಗೆ ಶೌಚಾಲಯ ನಿರ್ಮಾಣ ಸೇರಿದಂತೆ ಸ್ವಚ್ಛತೆಗೆ ಕೊಡುಗೆ ನೀಡಬಲ್ಲ ಹಲವಾರು ಚಟುವಟಿಕೆಗಳು ನಡೆದಿರುವುದು ಶ್ಲಾಘನೀಯ. ಸ್ವಚ್ಛತೆ ಒಂದು ದಿನದ ಮಾತಾಗಬಾರದು, ಅದು ನಿತ್ಯ ನಿರಂತರ ವಾಗಬೇಕು ಎಂದರು.ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ನಿರ್ಮಿಸಿದ ಕರಪತ್ರಗಳನ್ನು ಸೌತ್ ಕೆನರಾ ಫೊಟೋಗ್ರಾಫರ್ಸ್ ಅಸೋಸಿಯೇಶನ್ (ರಿ.) ಉಡುಪಿ ವಲಯ ನಿಯೋಜಿತ ಅಧ್ಯಕ್ಷ ಜನಾರ್ದನ್ ಕೊಡವೂರು ಬಿಡುಗಡೆ ಮಾಡಿ ಮಾತನಾಡಿದರು.

ದೈನಂದಿನ ಜೀವನದಲ್ಲಿ ಸ್ವಚ್ಛತೆಗೆ ಗರಿಷ್ಠ ಆದ್ಯತೆ ನೀಡಿದರೆ ಮಾತ್ರ ಆರೋಗ್ಯವಂತ ಸಮಾಜದ ನಿರ್ಮಾಣವಾಗುವುದು. ಪ್ರತಿಯೊಬ್ಬರೂ ಸ್ವಚ್ಛತಾ ರಾಯಭಾರಿಗಳಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದರೆ ಸ್ವಚ್ಛ ಭಾರತದ ಪರಿಕಲ್ಪನೆ ಸಾಕಾರಗೊಳ್ಳುವುದು ಎಂದರು.

ನೆಹರೂ ಯುವ ಕೇಂದ್ರ ಉಡುಪಿ ಜಿಲ್ಲೆಯ ಲೆಕ್ಕಾಧಿಕಾರಿ ವಿಷ್ಣು, ರೋಟರಿ ಉಡುಪಿ ಕಾರ್ಯದರ್ಶಿ ಜೆ.ಜಿ. ಪ್ರಭು, ಎಸ್.ಕೆ.ಪಿ.ಎ ವಲಯಾಧ್ಯಕ್ಷ ಪ್ರಕಾಶ್ ಕೊಡಂಕೂರ್, ಕಾರ್ಯದರ್ಶಿ ಸುಕೇಶ್ ಅಮೀನ್, ಪ್ರವೀಣ್ ಕೊರೆಯ, ದಿವಾಕರ್ ಹಿರಿಯಡ್ಕ, ಶ್ರೀ ಕೃಷ್ಣ ರೋಟರಾಕ್ಟ್ ಕ್ಲಬ್ ಅಧ್ಯಕ್ಷೆ ಮೇಘನಾ ರಾವ್, ಕಾರ್ಯದರ್ಶಿ ತನ್ವಿ ವಿಶಿಷ್ಟ, ರಾಘವೇಂದ್ರ ಪ್ರಭು ಕರ್ವಾಲು, ಜಗದೀಶ್ ಶೆಟ್ಟಿ, ಪ್ರಸನ್ನ ಕುಮಾರ್ ಉದ್ಯಾವರ, ನಾಗರಾಜ್ ಭಂಡಾರ್ಕರ್, ವಿವೇಕ್.

ಸಂತೋಷ್ ಕೊರಂಗ್ರಪಾಡಿ, ವಾಸುದೇವ ರಾವ್, ಸುಶಾಂತ್ ಕೆರೇಮಠ, ಉದಯ ನಾಯ್ಕ್, ಮಹೇಶ್ ಸುವರ್ಣ, ಮಂಜು ಪರ್ಕಳ, ನಾರಾಯಣ್ ಜತ್ತನ್, ಸಚಿನ್ ಪೂಜಾರಿ, ಸುರಭಿ ರತನ್, ಅಶೋಕ್ ಕೋಟ್ಯಾನ್, ಜಯರಾಮ್ ಪ್ರಭು, ರಾಜೇಂದ್ರ ಮಯ್ಯ, ಕಲ್ಪನಾ ಪ್ರಭು, ಸಂಧ್ಯಾ ಪ್ರಭು, ಆದಿತ್ಯ ಹೆಬ್ಬಾರ್, ಅರ್ಪಿತಾ ಹೆಬ್ಬಾರ್, ಮಹಿಮಾ ಶೆಣೈ, ನಿಕಿತಾ ಹೆಬ್ಬಾರ್, ಶ್ರೀಹರಿ, ಅನಿರುದ್ಧ ಕೆದಿಲಾಯ, ಅನ್ಶ್ ಕೋಟ್ಯಾನ್, ಎಲ್ಟನ್ ಆಳ್ವ, ಸಮ್ಹಿತ್ ಆರ್ ಮುಂತಾದವರು ಉಪಸ್ಥಿತರಿದ್ದರು.

ರೋಟರಿ ಉಡುಪಿ ಅಧ್ಯಕ್ಷ ಹೇಮಂತ್ ಯು. ಕಾಂತ್ ಪ್ರಸ್ತಾವಿಕವಾಗಿ ಮಾತನಾಡಿ ವಂದಿಸಿದರು. ಸ್ವಚ್ಛ ಭಾರತ್ ಫ್ರೆಂಡ್ಸ್ ಸದಸ್ಯ ಗಣೇಶ್ ಪ್ರಸಾದ್ ಸ್ವಾಗತಿಸಿ ನಿರೂಪಿಸಿದರು.

 
 
 
 
 
 
 
 
 
 
 

Leave a Reply