ಶ್ರಾವಣ ಮಾಸ ಪ್ರಕೃತಿಯ ಆರಾಧನೆಯೊಂದಿಗೆ ಹಬ್ಬಗಳ ಸರಣಿಗೆ ಚಾಲನೆ ನೀಡುವ ಮಾಸ – ಮಧುರಾ ನಾಯಕ್

ಶಿರ್ವ:-ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಶ್ರಾವಣಮಾಸಕ್ಕೆ ವಿಶೇಷ ಸ್ಥಾನಮಾನವಿದೆ. ನಾಗರಪಂಚಮಿ ಪ್ರಕೃತಿ ಆರಾಧನೆಯ ಮೊದಲ ಹಬ್ಬವಾಗಿದ್ದು, ನಂತರ ಬರುವ ಚೂಡಿಪೂಜೆ, ಹೊಸ್ತಿಲಪೂಜೆ, ವರಮಹಾಲಕ್ಕ್ಷ್ಮೀ ಪೂಜೆ, ಉಡಿ ತುಂಬಿಸುವುದು ಎಲ್ಲವೂ ಮನೆ ಗೃಹಿಣಿಯರಿಗೆ ಪಾವಿತ್ರತೆಯನ್ನು ತುಂಬುವ ಹಬ್ಬಗಳು, ನಮ್ಮ ಹಿರಿಯರ ಆಚರಣೆಗಳು, ದೂರ ದೃಷ್ಟಿತ್ವದಲ್ಲಿ ವಿಜ್ಞಾನವೂ ಸೇರಿಕೊಂಡಿದೆ.
ಶ್ರಾವಣ ಮಾಸ ಪ್ರಕೃತಿಯ ಆರಾಧನೆ ಯೊಂದಿಗೆ ಹಬ್ಬಗಳ ಸರಣಿಗೆ ಚಾಲನೆ ನೀಡುವ ಮಾಸ ಎಂದು ಆರ್ಟ್ ಆಫ್ ಲೀವಿಂಗ್‌ನ ಶಿಕ್ಷಕಿ, ಪ್ರಗತಿಪರ ಸಾವಯವ ಕೃಷಿ ರೈತ ಮಹಿಳೆ ಮಧುರಾ ನಾಯಕ್ ನುಡಿದರು.
ಅವರು ಶನಿವಾರ ಬಂಟಕಲ್ಲು ಶ್ರೀದೇವಳದ ಸಭಾಂಗಣದಲ್ಲಿ ಜರುಗಿದ ಶ್ರೀದುರ್ಗಾ ಮಹಿಳಾ ಚಂಡೆ ಬಳಗದ “ದಶಮಾನೋತ್ಸವ”ದ ಪ್ರಯುಕ್ತ ಏರ್ಪಡಿಸಿದ ಶ್ರಾವಣ ಸಂಭ್ರಮ, ಸಾಧಕರಿಗೆ ಸನ್ಮಾನ ಮತ್ತು ಬಡ ವಿದ್ಯಾರ್ಥಿ ಗಳಿಗೆ ವಿದ್ಯಾರ್ಥಿ ವೇತನ ವಿತರಣಾ ಸಮಾಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ದರು. ಕಾರ್ಯಕ್ರಮವನ್ನು ನಿವೃತ್ತ ಮುಖ್ಯಶಿಕ್ಷಕಿ  ಗಿರಿಜಾ ಟೀಚರ್ ಉದ್ಘಾಟಿಸಿ ಶುಭ ಹಾರೈಸಿದರು. 
ಈ ಸಂದರ್ಭದಲ್ಲಿ ಸಂಗೀತ ಕ್ಷೇತ್ರದ ಕಲಾಸಾಧಕ, ಚಂಡೆವಾದನದ ಗುರು ಪ್ರವೀಣ್ ನಾಯಕ್, ಉನ್ನತಶಿಕ್ಷಣದಲ್ಲಿ ಎರಡು ಚಿನ್ನದಪದಕಗಳಿಸಿದ ಜ್ಯೋತಿ ಬೋರ್ಕಾರ್, ಪ್ರಾಚ್ಯ ಶಿಲಾಶಾಸನ ಅಧ್ಯಯನ ತಜ್ಞ ಸುಭಾಸ್ ನಾಯಕ್, ಶಿರ್ವ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷ ಕೆ.ರಾಮರಾಯ ಪಾಟ್ಕರ್‌ರವರನ್ನು  ಬಳಗದ ವತಿಯಿಂದ ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ ಸಹಿತ ವೇದಿಕೆಯಲ್ಲಿರುವ ಗಣ್ಯರು ಸನ್ಮಾನಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀದುರ್ಗಾ ಮಹಿಳಾ ಚಂಡೆ ಬಳಗದ ಅಧ್ಯಕ್ಷೆ ಗೀತಾ ವಾಗ್ಲೆ ವಹಿಸಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ದೇವಳದ ಆಡಳಿತ ಮಂಡಳಿ ಅದ್ಯಕ್ಷ ಜಯರಾಮ ಪ್ರಭು, ಲೋಕೋಪಯೋಗಿ ಇಲಾಖೆಯ ಜಿಲ್ಲಾ ನಿವೃತ್ತ ಅಭಿಯಂತ ವಿಜಯಾನಂದ ನಾಯಕ್, ಶಶಿಕಲಾ ಪ್ರಭಾಕರ ನಾಯಕ್, ಸುಮಿತ್ರಾ ನಾಯಕ್ ಮಣಿಪಾಲ ಮೊದಲಾದವರು ಉಪಸ್ಥಿತರಿದ್ದರು. 
ಆಶಾ ನಾಯಕ್, ಶೈಲಜಾ ಪಾಟ್ಕರ್, ಅಕ್ಷತಾ ನಾಯಕ್, ಸಂಜನಾ ನಾಯಕ್ ಸನ್ಮಾನಪತ್ರ ವಾಚಿಸಿದರು.  ನಾಗವೇಣಿ ಪ್ರಭು ವರದಿ ಓದಿದರು. ಭವಾನಿ ನಾಯಕ್ ನಿರೂಪಿಸಿದರು.  ಜ್ಯೋತಿ ನಾಯಕ್ ಧನ್ಯವಾದವಿತ್ತರು.
 
 
 
 
 
 
 
 
 
 
 

Leave a Reply