ಕಸಾಪ 108ನೇ ಸಂಸ್ಥಾಪನಾ ದಿನಾಚರಣೆ -ದತ್ತಿ ಉಪನ್ಯಾಸ

ಶಿರ್ವ:-ಇತ್ತೀಚಿನ ದಿನಗಳಲ್ಲಿ ಕನ್ನಡ ಮಾತನಾಡುವಾಗ ಅತ್ಯಧಿಕವಾಗಿ ಆಂಗ್ಲ ಹಾಗೂ ಅನ್ಯ ಭಾಷಾ ಪದಗಳ ಪ್ರಯೋಗ ರೂಢಿಯಾಗುತ್ತಿದ್ದು, ಭವಿಷ್ಯದಲ್ಲಿ ಶುದ್ಧ ಕನ್ನಡ ಪದಗಳು ಮರೆಯಾಗುವ ಅಪಾಯವಿದೆ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಅಗತ್ಯ ಇದೆ ಎಂದು ನಿವೃತ್ತ ಭಾಷಾ ಶಿಕ್ಷಕ, ಯಕ್ಷಗಾನ ಕಲಾವಿದ ಪದ್ಮನಾಭ ನಾಯಕ್ ಮೂಡುಬೆಳ್ಳೆ ಅಭಿಪ್ರಾಯ ಪಟ್ಟರು.
ಅವರು ಗುರುವಾರ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕದ ವತಿಯಿಂದ ಕಾಪು ರೋಟರಿ ಭವನದಲ್ಲಿ ಜರುಗಿದ “ಕಸಾಪ ೧೦೮ನೇ ಸಂಸ್ಥಾಪನಾ ದಿನಾಚರಣೆ ಮತ್ತು ದತ್ತಿ ಉಪನ್ಯಾಸ”ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಾ, ಶತಮಾನೋತ್ತರ ಇತಿಹಾಸ ಹೊಂದಿದ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ನಾಡು,ನುಡಿ, ಸಂಸ್ಕೃತಿ, ಜಾನಪದ ಪರೆಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹೋಬಳಿ ಮಟ್ಟದಿಂದ ಅಖಿಲಭಾರತ ಮಟ್ಟದವರೆಗೆ ಸಮ್ಮೇಳನ, ಕಮ್ಮಟ,ಗೋಷ್ಠಿ, ಸಾಂಸ್ಕçತಿಕ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ಜನಸಾಮಾನ್ಯರಲ್ಲಿ ಕನ್ನಡದ ಅರಿವು ಮೂಡಿಸುವ ಕಾರ್ಯವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ ಎಂದರು.

ನಿವೃತ್ತ ಪ್ರಾಚಾರ್ಯ ಡಾ.ಮಹಾಬಲೇಶ್ವರ ರಾವ್ ಪ್ರಾಯೋಜಿತ ದಿ.ಕಾಳಿಂಗ ರಾವ್ ದತ್ತಿ ಉಪನ್ಯಾಸದಲ್ಲಿ ಕಾಳಿಂಗ ರಾವ್ ಜೀವನ ಮತ್ತು ಸಾಧನೆಗಳ ಬಗ್ಗೆ ಸ್ನಾತಕೋತ್ತರ ಅಧ್ಯಯನ ವಿಭಾಗದ ವಿದ್ಯಾರ್ಥಿ ಹನುಮಂತ ಮಾತನಾಡಿದರು. ಸೂರಾಲು ನಾರಾಯಣ ಮಡಿ ಪ್ರಾಯೋಜಿತ ಕೂರಾಡಿ ಸೀತಾರಾಮ ಅಡಿಗ,ಕಮಲಾಕ್ಷಿ ಅಡಿಗ ಸ್ಮಾರಕ ದತ್ತಿ ಉಪನ್ಯಾಸದಲ್ಲಿ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕಸಾಪ ಕಾಪು ತಾಲೂಕು ಘಟಕದ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಸಾಪ ಉಡುಪಿ ಜಿಲ್ಲಾ ಕನ್ನಡ ಭವನ ನಿರ್ಮಾಣ ಸಮಿತಿ ಅಧ್ಯಕ್ಷ ಕಟ್ಟಿಂಗೇರಿ ದೇವದಾಸ ಹೆಬ್ಬಾರ್, ಕೋಶಾಧಿಕಾರಿ ವಿದ್ಯಾಧರ್ ಪುರಾಣಿಕ್, ನಿಕಟಪೂರ್ವ ಕಾರ್ಯದರ್ಶಿ ವಿದ್ಯಾ ಅಮ್ಮಣ್ಣಾಯ, ಕವಿ ಆರ್.ಡಿ ಪಾಂಬೂರು, ಮಧುಕರ್ ಎಸ್.ಯು.ಕಲ್ಯ, ಪ್ರೊ.ಟಿ.ಮುರುಗೇಶಿ, ಸುಂದರ ಟಿ, ಡಿ.ಆರ್.ನೊರೋನ್ಹಾ ಕುರ್ಕಾಲು, ಪಿ.ರಮಾಕಾಂತ್ ರಾವ್ ಪಡುಬಿದ್ರಿ, ಕೆ.ಸದಾಶಿವ ಭಟ್, ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು. ಕಸಾಪ ತಾಲೂಕು ಗೌ.ಕಾರ್ಯದರ್ಶಿ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಸ್ವಾಗತಿಸಿದರು. ನವ್ಯತಾ ಪ್ರಶಾಂತ್ ರಾವ್ ನಾಡಗೀತೆ ಹಾಡಿದರು. ಗೌ.ಕಾರ್ಯದರ್ಶಿ ನೀಲಾನಂದ ನಾಯ್ಕ್ ನಿರೂಪಿಸಿದರು. ಸಮಿತಿ ಸದಸ್ಯ ದೇವದಾಸ್ ಪಾಟ್ಕರ್ ಧನ್ಯವಾದವಿತ್ತರು.

 
 
 
 
 
 
 
 
 

Leave a Reply