ಶಿರ್ವ – ರೈತರಿಗೆ ಕೃಷಿ ಮಾಹಿತಿ- ಪ್ರಾತಿಕ್ಷಿಕೆ ಮತ್ತು ಸರಕಾರದ ಸೌಲಭ್ಯಗಳ ಪರಿಚಯ

ಶಿರ್ವ :- ಉಡುಪಿ ಜಿಲ್ಲಾ ಪಂಚಾಯತ್ ಕೃಷಿ ಇಲಾಖೆ, ಆತ್ಮ ಅನುಷ್ಠಾನ ಸಮಿತಿ ಉಡುಪಿ ತಾಲೂಕು, ರೈತ ಸಂಪರ್ಕ ಕೇಂದ್ರ ಕಾಪು, ಇವರ ಜಂಟಿ ಆಶ್ರಯದಲ್ಲಿ ಭತ್ತದಲ್ಲಿ ಬೀಜೋಪಚಾರ ಆಂದೋಲನ, ಸಾವಯವ ತರಕಾರಿ ಕೃಷಿಯ ಬಗ್ಗೆ ಪ್ರಾತಿಕ್ಷಿಕೆ ತರಬೇತಿ ಕಾರ್ಯಕ್ರಮ ಪ್ರಗತಿಪರ ಕೃಷಿಕ ಶಿರ್ವ ಪಾಲಮೆ ಬೆಟ್ಸಿ ಅರಾನ್ಹರ ಮನೆಯಲ್ಲಿ ಜರುಗಿತು.

 ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಆರ್.ಪಾಟ್ಕರ್ ಉದ್ಘಾಟಿಸಿ ಸರಕಾರ ವಿವಿಧ ಇಲಾಖೆಗಳಿಂದ ಸಿಗುವ ಸೌಲಭ್ಯಗಳನ್ನು ಬಳಸಿಕೊಳ್ಳುವಂತೆ ಕರೆ ನೀಡಿ, ನರೇಗಾ ಯೋಜನೆಯ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.

 ಗ್ರಾ.ಪಂ.ಉಪಾಧ್ಯೆಕ್ಷೆ ಗ್ರೇಸಿ ಕರ್ಡೋಜಾ ರೈತಬಂಧು ಅಭಿಯಾನದ ಬಗ್ಗೆ ಮಾತನಾಡಿದರು. ಕೃಷಿ ಅಧಿಕಾರಿ ಪುಷ್ಪಲತಾ ಕೃಷಿ ಇಲಾಖೆಯ ಯೋಜನೆಗಳ ಬಗ್ಗೆ ವಿಸ್ತೃತ ಮಾಹಿತಿ ನೀಡಿದರು. ಪ್ರಗತಿಪರ ಕೃಷಿಕ ರಾಮಚಂದ್ರ ಪೈ ಸಾವಯವ ತರಕಾರಿ ಬೆಳೆಗಳು, ಪ್ರಶಸ್ತಿ ವಿಜೇತ ಪ್ರಗತಿಪರ ರೈತ ರಾಘವೇಂದ್ರ ನಾಯಕ್ ಕಲ್ಲೊಟ್ಟು ಭತ್ತದ ಬೀಜೋಪಾಚಾರ ಮಾಡುವ ಬಗ್ಗೆ ಪಾತಿಕ್ಷಿಕೆ ಮಾಹಿತಿ ನೀಡಿದರು. ಕಾಪು ರೈತ ಸಂಪರ್ಕ ಕೇಂದ್ರದ ಆತ್ಮಯೋಜನೆಯ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಅರುಣ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 

Leave a Reply