ಕೋಟಿ ಗಾಯತ್ರಿ ಜಪ ಹಾಗೂ ಲಕ್ಷ ಲಲಿತಾ ಸಹಸ್ರನಾಮ ಪಾರಾಯಣ ಅಭಿಯಾನದ ಪ್ರಾರಂಭೋತ್ಸವ

ಶ್ರೀ ಶಾಂತಿಮತೀ ಪ್ರತಿಷ್ಠಾನ ದ ದಶಮಾನೋತ್ಸವ ಕಾರ್ಯಕ್ರಮದ ಪ್ರಯುಕ್ತ ಹಮ್ಮಿಕೊಂಡಿರುವ ಕೋಟಿ ಗಾಯತ್ರಿ ಜಪ ಅಭಿಯಾನ ಹಾಗೂ ಲಕ್ಷ ಲಲಿತಾ ಸಹಸ್ರನಾಮ ಪಾರಾಯಣ ಅಭಿಯಾನ ದ ಪ್ರಾರಂಭೋತ್ಸವ ವನ್ನು ವಿಪ್ರ ಬಂಧುಭಗಿನಿಯರ ಅಭೂತಪೂರ್ವ ಸಹಕಾರದೊಂದಿಗೆ ಪಾಂಡೇಶ್ವರದ ತೀರ್ಥಬೈಲ್ ಶಂಕರನಾರಾಯಣ ದೇವಸ್ಥಾನ ದಲ್ಲಿ ನಡೆಸಲಾಯಿತು, ಸಾಲಿಗ್ರಾಮ ಗುರು ನರಸಿಂಹ ದೇವಸ್ಥಾನ ದ ಅನುವಂಶಿಕ ಅರ್ಚಕರಾದ ಜ್ಯೋತಿಷ್ಯ ವಿದ್ವಾನ್ ಶ್ರೀನಿವಾಸ ಅಡಿಗಳು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು, ಶಾಂತಿಮತೀ ಪ್ರತಿಷ್ಠಾನ ದ ಅಧ್ಯಕ್ಷರಾದ ಸಚ್ಚಿದಾನಂದ ಅಡಿಗ ವಡ್ಡರ್ಸೆ, ಗುರು ನರಸಿಂಹ ದೇವಸ್ಥಾನ ದ ಆಡಳಿತ ಮಂಡಳಿಯ ಸದಸ್ಯರಾದ ಅನಂತ ಪದ್ಮನಾಭ ಐತಾಳ್, ಶ್ರೀಮತಿ ಉಮಾ ಅಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು,ಇದೇ ಸಂದರ್ಭದಲ್ಲಿ ಕೋಟಿ ಗಾಯತ್ರಿ ಜಪ ಅಭಿಯಾನ ಹಾಗೂ ಲಕ್ಷ ಲಲಿತಾ ಸಹಸ್ರನಾಮ ಪಾರಾಯಣ ಅಭಿಯಾನ ದ ಮನವಿ ಪತ್ರವನ್ನು ಅನಂತ ಪದ್ಮನಾಭ ಐತಾಳ್ ಅನಾವರಣಗೊಳಿಸಿದರು , ಪ್ರಸನ್ನ ಭಟ್ ಕೋಟ ಸ್ವಾಗತಿಸಿ ವಿದ್ವಾನ್ ಡಾ.ವಿಜಯ್ ಕುಮಾರ್ ಮಂಜರ್ ಪ್ರಾಸ್ತಾವಿಕ ಮಾತನಾಡಿದರು , ಅಧ್ಯಕ್ಷರಾದ ಸಚ್ಚಿದಾನಂದ ಅಡಿಗ ವಡ್ಡರ್ಸೆ ಧನ್ಯವಾದ ಸಮರ್ಪಣೆಗೈದು ರಾಮಚಂದ್ರ ಉಡುಪ ಬಾರ್ಕೂರು ಕಾರ್ಯಕ್ರಮ ನಿರೂಪಿಸಿದರು. ವಿಪ್ರ ಬಂಧುಭಗಿನಿಯರಿಂದ ಎರಡು ಬಾರಿ ಲಲಿತಾ ಸಹಸ್ರನಾಮ ಪಾರಾಯಣ ಹಾಗೂ ಐದು ಸಾವಿರ ಗಾಯತ್ರಿ ಜಪ ಮಾಡುವ ಮೂಲಕ ಸಾಂಕೇತಿಕವಾಗಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು‌.

 
 
 
 
 
 
 
 
 
 
 

Leave a Reply