ನಮ್ಮ ಮಾಡುವ ಸೇವೆ ಮಾತ್ರ ಜಗತ್ತಿನಲ್ಲಿ ಶಾಶ್ವತ~ ಫಾ.ಎಂ.ಸಿ ಮಥಾಯಿ

ಬ್ರಹ್ಮಾವರ: – ಜಗತ್ತಿನಲ್ಲಿ ಶಾಶ್ವತವಾಗಿ ಉಳಿಯುವ ವಸ್ತು ನಾವು ಮಾಡುವ ಉತ್ತಮ ಸೇವೆ ಮಾತ್ರ. ಆದರೆ ನಾವೆಲ್ಲರೂ ಹಣ ಅಧಿಕಾರದ ದಾಸರಾಗಲು ಹೋಗುತ್ತಿರುವುದು ತಪ್ಪು ಎಂದು ಎಸ್.ಎಂ.ಎಸ್ ಕೆತಡ್ರಲ್ ವಿಗಾರ್ ಜನರಲ್ ಫಾ|| ಎಂ.ಸಿ ಮಥಾಯಿ ಹೇಳಿದರು.

ಅವರು ಜ.9ರಂದು ಸಿಟಿ ಸೆಂಟರ್ ನಲ್ಲಿ ಬ್ರಹ್ಮಾವರ ಜಯಂಟ್ಸ್ ಗ್ರೂಪ್ ಇದರ ವತಿಯಿಂದ ನಡೆದ ಸಾಧಕರಿಗೆ ಅಭಿನಂದನೆ ಹಾಗೂ ಮಹಾಸಭೆ ಕಾಯ೯ಕ್ರಮದಲ್ಲಿ ಮಾತನಾಡಿದರು. ಜಗತ್ತಿನ ಶ್ರೇಷ್ಠ ಸಂಪತ್ತು ಅದು ಮಾನವ ಸಂಪತ್ತು ಇದನ್ನು ಅರಿತು ಗಳಿಸಿದರಲ್ಲಿ ಸ್ವಲ್ಪ ಅಂಶ ಸಮಾಜಕ್ಕೆ ಅಪ೯ಣಿಯಾಗಲಿ ಎಂದರು.

ಜಯಂಟ್ಸ್ ಉಡುಪಿ ಯೂನಿಟ್ ಡೈರೆಕ್ಟರ್ ದೇವದಾಸ್ ಕಾಮತ್ ಯುವಕರನ್ನು ಸಂಸ್ಥೆಗೆ ಸೇರಿಸುವ ಮೂಲಕ ಮತ್ತಷ್ಟು ಉತ್ತಮ ಕಾಯ೯ ಮುಂದುವರೆಯಲಿ ಎಂದರು. ವೇದಿಕೆಯಲ್ಲಿ ಮಾಜಿ ಫೆಡರೇಶನ್ ಅಧ್ಯಕ್ಷ ಮಧುಸೂಧನ್ ಹೇರೂರು, ಮಾಜಿ ಅಧ್ಯಕ್ಷ ಮಂಜುನಾಥ್ ಶೆಟ್ಟಿಗಾರ್, ಕಾಯ೯ದಶಿ೯ ಶ್ರೀನಾಥ್ ಕೋಟ ಮುಂತಾದವರಿದ್ದರು.

ಅಧ್ಯಕ್ಷತೆಯನ್ನು ಜಯಂಟ್ಸ್ ಅಧ್ಯಕ್ಷ ಸುಂದರ ಪೂಜಾರಿ ಮೂಡುಕುಕುಡೆ ವಹಿಸಿದ್ದರು.ಕಾಯ೯ಕ್ರಮದಲ್ಲಿ ರೆಡ್ ಕ್ರಾಸ್ ನಲ್ಲಿ ಉತ್ತಮ ಸಾಧನೆ ಮಾಡಿದ ಕುಂದಾಪುರ ರೆಡ್ ಕ್ರಾಸ್ ಸಭಾಪತಿ ಜಯಕರ ಶೆಟ್ಟಿ, ಮುಖ್ಯಮಂತ್ರಿ ಪದಕ ಪುರಸ್ಕೃತ ಸಕ೯ಲ್  ಇನ್ಸ್ಪೆಕ್ಟರ್ ಅನಂತ ಪದ್ಭನಾಭ , ಖ್ಯಾತ ಸಾಹಿತಿ ಡಾII ಕಾತ್ಯಾಯನಿ ಕುಂಜಿಬೆಟ್ಟು, ರೂಬಿಕ್ ಕ್ಯೂಬ್ ಸಾಧಕ ಮಹೇಶ್ ಮಲ್ಪೆ, ರವರನ್ನು ಗೌರವಿಸಲಾಯಿತು.

ಈ ಸಂದಭ೯ದಲ್ಲಿ ನೂತನ ಸದಸ್ಯರಾದ ಉಮೇಶ್ ಬಿತಿ೯, ರೊನಾಲ್ಡ್, ಅನಿಲ್ ಶೆಟ್ಟಿ, ನಂದಿನಿರವರನ್ನು ಬರಮಾಡಿಕೊಳ್ಳಲಾಯಿತು. ವಿವೇಕ್ ಕಾಮತ್, ಮಿಲ್ಟನ್ ಒಲಿವರ್ ಪರಿಚಯಿಸಿದರು.ಸುಂದರ ಪೂಜಾರಿ ಸ್ವಾಗತಿಸಿ ವರದಿ ವಾಚಿಸಿದರು.ಮಧುಸೂಧನ್ ಹೇರೂರು ವಂದಿಸಿದರು. ರಾಘವೇಂದ್ರ ಪ್ರಭು, ಕವಾ೯ಲು ನಿರೂಪಿಸಿದರು

 
 
 
 
 
 
 
 
 
 
 

Leave a Reply