Janardhan Kodavoor/ Team KaravaliXpress
25.6 C
Udupi
Wednesday, August 17, 2022
Sathyanatha Stores Brahmavara

ಭಾರತ್ ಸ್ಕೌಟ್ಸ್ ಗೈಡ್ಸ್ ವತಿಯಿಂದ ಸರ್ವ ಧರ್ಮ ಪ್ರಾರ್ಥನೆ .

ಭಾರತ್ ಸ್ಕೌಟ್ ಮತ್ತು ಗೈಡ್ಸ್ ಕರ್ನಾಟಕ ಉಡುಪಿ  ಜಿಲ್ಲೆಯು  151ನೇ ಗಾಂಧಿಜಯಂತಿಯನ್ನು ಬಹಳ ಮಹತ್ವಪೂರ್ಣವಾಗಿ ಮಲ್ಪೆ ಕಡಲ ಕಿನಾರೆಯಲ್ಲಿ ಗಾಂಧಿ ಪ್ರತಿಮೆಯ ಬಳಿ ಸರ್ವಧರ್ಮ ಪ್ರಾರ್ಥನೆ, ಮತ್ತು ಸ್ವಚ್ಛತಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು….
ಈ ಕಾರ್ಯಕ್ರಮದಲ್ಲಿ  ಶಾಸಕ ರಘುಪತಿ ಭಟ್ ಭಟ್,  ಜಿಲ್ಲಾಧಿಕಾರಿ ಹಾಗೂ ಭಾರತ್ ಸ್ಕೌಟ್ ಅಂಡ್ ಗೈಡ್  ಜಿಲ್ಲಾ  ಸಂಸ್ಥೆ ಉಡುಪಿಯ  ಅಧ್ಯಕ್ಷ  ಜಿ. ಜಗದೀಶ್ ,ಎಸ್ಪಿ ವಿಷ್ಣುವರ್ಧನ್ , ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ನಗರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿರುವ ರಾಘವೇಂದ್ರ ಕಿಣಿ, 
ಪೌರಾಯುಕ್ತ ಮಾನ್ಯ ಆನಂದ ಕಲ್ಲೋಳಿಕರ್  ‘ಕಂದಾಯ ಅಧಿಕಾರಿ ವಿಶ್ವನಾಥ್, ಮಲ್ಪೆ ಅಭಿವೃದ್ಧಿ ಸಮಿತಿಯ ವ್ಯವಸ್ಥಾಪಕ ಸಂತೋಷ್, ಬೀಚ್‌  ನಿರ್ವಹಣಾಧಿಕಾರಿ ಸುಧೇಶ್ ಶೆಟ್ಟಿ,  ರಾಜ್ಯ ಸಂಸ್ಥೆಯ ಮುಖ್ಯ ಆಯುಕ್ತ ಪಿ ಜಿ ಆರ್ ಸಿಂಧ್ಯಾ , ಉಡುಪಿ ಜಿಲ್ಲಾ ಮುಖ್ಯ ಆಯುಕ್ತೆ  ಶ್ರೀಮತಿ  ಶಾಂತಾ ವಿ.ಆಚಾರ್ಯ,  ಜಿಲ್ಲಾ ಸ್ಕೌಟ್ ಆಯುಕ್ತ  ಡಾ ವಿಜಯೇಂದ್ರ  ವಸಂತ್ ,ಜಿಲ್ಲಾ ಗೈಡ್ ಆಯುಕ್ತೆ  ಜ್ಯೋತಿ ಜೆ ಪೈ ಶುಭಾಶಯ ಕೋರಿದರು .
ರಾಜ್ಯ ಸಂಘಟನಾ ಆಯುಕ್ತ ಮಾನ್ಯ ಪ್ರಭಾಕರ್  ಭಟ್, ಜಿಲ್ಲಾ ಸಹ ಆಯುಕ್ತರು ಶೇಖರ್ ಪೂಜಾರಿ ಕಲ್ಮಾಡಿ ಹಾಗೂ ಜಿಲ್ಲಾ ಪದಾಧಿಕಾರಿಗಳು ,ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು, ರೋವರ್ಸ್ ಮತ್ತು ರೇಂಜರ್ಸ್ ಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜಿಲ್ಲಾ ಸಂಘಟಕರಾದ ಸುಮನ್ ಶೇಖರ್ ಹಾಗೂ ಶ್ರೀ ನಿತಿನ್ ಬಿ ಅಮೀನ್ ಕಾರ್ಯಕ್ರಮ ಸಂಘಟಿಸಿದರು
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!