ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ವತಿಯಿಂದ ಎಂಜಿಎಂ ಕಾಲೇಜು ಉಡುಪಿ ಸಹಕಾರದೊಂದಿಗೆ ಇಂದು ಭಾನುವಾರ ಜನವರಿ 15ರಂದು ಸಂಜೆ 5. 45ಕ್ಕೆ ಸರಿಯಾಗಿ ಉಡುಪಿಯ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಸಂಸ್ಕೃತಿ ಉತ್ಸವ ನಡೆಯಲಿದೆ.
ಕನ್ನಡ ನಾಡು ನುಡಿ ಸಂಸ್ಕೃತಿ ಸಾಹಿತ್ಯಕ್ಕೆ ಕೊಟ್ಟ ಅನನ್ಯ ಸೇವೆಗಾಗಿ ಹಿರಿಯ ಪತ್ರಿಕೋದ್ಯಮಿ ತರಂಗದ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್. ಪೈ ಅವರಿಗೆ ಶ್ರೀಮತಿ ಪ್ರಭಾವತಿ ಹಾಗೂ ಉಡುಪಿ ವಿಶ್ವನಾಥ್ ಶೆಣಿೈ ಪ್ರಾಯೋಜಿತ ಪ್ರತಿಷ್ಠಿತ ‘ವಿಶ್ವಪ್ರಭಾ’ ಪುರಸ್ಕಾರವನ್ನು ನೀಡಲಾಗುವುದು.
ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ, ಸಾಹಿತಿ ಡಾ| ಎಂ. ವೀರಪ್ಪ ಮೊಯಿಲಿ ಅವರು ಉದ್ಘಾಟಿಸಲಿದ್ದಾರೆ.
ಅoತರಾಷ್ಟ್ರೀಯ ಖ್ಯಾತಿಯ ಜಾದೂಗಾರರಾದ ಪ್ರೊ. ಶಂಕರ್ ಹಾಗೂ ಜೂನಿಯರ್ ಶಂಕರ್ ನೇತೃತ್ವದ ಗಿಲಿ ಗಿಲಿ ಮ್ಯಾಜಿಕ್ ಪ್ರದರ್ಶನವಿರುತ್ತದೆ .






