ಸಾಣೂರು:ಉಚಿತ ಆರೋಗ್ಯ ತಪಾಸಣಾ ಶಿಬಿರ.

ಡಾ.ಟಿ.ಎಂ. ಎ.ಪೈ. ರೋಟರಿ ಹಾಸ್ಪಿಟಲ್ ಕಾರ್ಕಳ, ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಇವರ ನೇತೃತ್ವದಲ್ಲಿ ಸಾಣೂರು ಗ್ರಾಮ ಪಂಚಾಯತ್, ಹಾಲು ಉತ್ಪಾದಕರ ಸಹಕಾರಿ ಸಂಘ (ರಿ), ಸಾಣೂರು; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ), ಸಾಣೂರು ವಲಯ; ಯುವಕ ಮಂಡಲ (ರಿ)ಸಾಣೂರು; ಶ್ರೀ ವಿಶ್ವಕರ್ಮ ಮಹಿಳಾ ಮಂಡಳಿ, ನೆಕ್ಲಾಜೆ, ಕಾರ್ಕಳ; ಇವರ ಸಹಭಾಗಿತ್ವದಲ್ಲಿ ಸಾಣೂರು ಗ್ರಾಮ ಪಂಚಾಯತ್ ವಠಾರದ ‘ಸುವರ್ಣ ಗ್ರಾಮೋದಯ ಸೌಧ’ದಲ್ಲಿ ಮಂಗಳವಾರ  ಉಚಿತ ಹೃದಯರೋಗ, ಕಿವಿ-ಮೂಗು-ಗಂಟಲು ಹಾಗೂ ಕಣ್ಣಿನ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.

ಈ ವೈದ್ಯಕೀಯ ಶಿಬಿರವನ್ನು ಸಾಣೂರಿನ ‘ಈಶಾವಾಸ್ಯಂ ಟ್ರಸ್ಟ್’ ನ ಆಡಳಿತ ಟ್ರಸ್ಟಿ ಹಾಗೂ ಸಾಣೂರು ದೇಂದಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಳದ ಪ್ರಧಾನ ಅರ್ಚಕರಾಗಿರುವ ವೇದ ಮೂರ್ತಿ ಶ್ರೀ ಶ್ರೀರಾಮಭಟ್ ರವರು ನೆರವೇರಿಸಿ, ಪ್ರತಿಯೊಬ್ಬನಿಗೂ ಆರೋಗ್ಯದ ಬಗೆಗಿನ ಅರಿವು ಹಾಗೂ ಆರೋಗ್ಯ ತಪಾಸಣೆಯ ಅಗತ್ಯತೆಯನ್ನು ವಿವರಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾದ ಶ್ರೀ ಸಾಣೂರು ನರಸಿಂಹ ಕಾಮತ್ ಅವರು ರೋಟರಿ ಸಂಸ್ಥೆಯ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿ, ಪ್ರತಿಯೊಬ್ಬರೂ ನಿಯಮಿತವಾಗಿ ಆರೋಗ್ಯ ತಪಾಸಣೆಯನ್ನು ಮಾಡುವುದರ ಮೂಲಕ ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಆದ್ಯತೆಯನ್ನು ನೀಡಬೇಕೆಂದು ಕರೆ ನೀಡಿದರು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಅಧ್ಯಕ್ಷರಾದ ರೊ. ಪ್ರಶಾಂತ್ ಬೆಳಿರಾಯರವರು ವಹಿಸಿ ಅತಿಥಿಗಳನ್ನು ಸ್ವಾಗತಿಸಿದರು.

ವೇದಿಕೆಯಲ್ಲಿ ಯುವಕ ಮಂಡಲ ಸಾಣೂರು ಇದರ ಅಧ್ಯಕ್ಷರಾದ ಶ್ರೀ ಪ್ರಸಾದ್ ಪೂಜಾರಿ, ಹಾಲು ಉತ್ಪಾದಕರ ಸಹಕಾರಿ ಸಂಘ, ಸಾಣೂರು ಇದರ ಕಾರ್ಯದರ್ಶಿ ಶ್ರೀ ಜ್ಞಾನದೇವ್, ಶ್ರೀ ವಿಶ್ವಕರ್ಮ ಮಹಿಳಾ ಮಂಡಳಿ ನೆಕ್ಲಾಜೆ, ಕಾರ್ಕಳ ಇದರ ಅಧ್ಯಕ್ಷರಾದ ಶ್ರೀಮತಿ ಜ್ಯೋತಿ ರವಿ,ಡಾ.ಟಿಎಂಎ ಪೈ ರೋಟರಿ ಹಾಸ್ಪಿಟಲ್ ನ ವೈದ್ಯರಾದ ಡಾ.ಅನೂಜ್, ಡಾ.ವಿನಯ್, ಡಾ.ಮೋನಿಕಾ, ಡಾ.ಮನಿಷಾ ಉಪಸ್ಥಿತರಿದ್ದರು .

ಸಾಣೂರು ಯುವಕ ಮಂಡಲದ ಪದಾಧಿಕಾರಿಗಳು, ಸಾಣೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರುಗಳು, ವಿಶ್ವಕರ್ಮ ಮಹಿಳಾ ಸಂಘದ ಪದಾಧಿಕಾರಿಗಳು, ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಇದರ ಸ್ಥಾಪಕ ಅಧ್ಯಕ್ಷರಾದ ರೊ.ಸುಭಾಷ್ ಕಾಮತ್,ಪೂರ್ವಾಧ್ಯಕ್ಷರಾದ ರೊ.ಸುರೇಂದ್ರ ನಾಯಕ್, ನಿಯೋಜಿತ ಅಧ್ಯಕ್ಷರಾದ ರೊ.ಪ್ರಕಾಶ್ ಪೈ,ರೊ. ಗೀತಾ ರಾವ್,ರೊ.ಅಬ್ದುಲ್ ರೆಹಮಾನ್, ರೋಟರಿ ಹಾಸ್ಪಿಟಲ್ ನ ಇತರ ಸಿಬ್ಬಂದಿ ವರ್ಗದವರು ಕಾರ್ಯಕ್ರಮದ ಆಯೋಜನೆಯಲ್ಲಿ ಸಹಕರಿಸಿದರು.

ಶ್ರೀ ಸೋಮಶೇಖರ್ ಪ್ರಾರ್ಥನೆ ಗೀತೆ ಹಾಡಿದರು. ಸಾಣೂರು ಯುವಕ ಮಂಡಲದ ಅಧ್ಯಕ್ಷರಾದ
ಶ್ರೀ ಪ್ರಸಾದ್ ಪೂಜಾರಿ ಧನ್ಯವಾದ ಸಮರ್ಪಣೆ ಗೈದರು. ರೊ.ಗಣೇಶ ಬರ್ಲಾಯ ಕಾರ್ಯಕ್ರಮ ನಿರೂಪಿಸಿದರು. ಸುಮಾರು ನೂರೈವತ್ತಕ್ಕಿಂತಲೂ ಹೆಚ್ಚು ಹೆಚ್ಚು ಮಂದಿ ಉಚಿತ ಆರೋಗ್ಯ ತಪಾಸಣಾ ಶಿಬಿರದ ಉಪಯೋಗವನ್ನು ಪಡೆದರು.

ಕಣ್ಣಿನ ಶಸ್ತ್ರಚಿಕಿತ್ಸೆ ಅಗತ್ಯವಿರುವ 5 ಮಂದಿಗೆ ಕಾರ್ಕಳದ ರೋಟರಿ ಹಾಸ್ಪಿಟಲ್ ನಲ್ಲಿ ಸಂಪೂರ್ಣ ಉಚಿತವಾಗಿ ಮಾಡಿಕೊಡುವ ಅನುಕೂಲ ಕಲ್ಪಿಸಲಾಯಿತು.

 
 
 
 
 
 
 
 
 
 
 

Leave a Reply