ಸಂಜೀವಿನಿ ನವೋದಯ ಸ್ವ ಸಹಾಯ ಸಂಘಗಳ ಒಕ್ಕೂಟ ಕುಕ್ಕಿಕಟ್ಟೆ ವತಿಯಿಂದ ಸನ್ಮಾನ ಕಾರ್ಯಕ್ರಮ

ಉಡುಪಿ ಜು.18 : ಕೊರಂಗ್ರಪಾಡಿ ಸಹಕಾರಿ ವ್ಯವಸಾಯಿಕ ಸಂಘ ಕುಕ್ಕಿಕಟ್ಟೆ ಇದರ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಸಂಜೀವಿನಿ ನವೋದಯ ಸ್ವ ಸಹಾಯ ಸಂಘಗಳ ಒಕ್ಕೂಟ ಕುಕ್ಕಿಕಟ್ಟೆ ಇದರ ವತಿಯಿಂದ ಮುಚ್ಲುಕೋಡು ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಒಕ್ಕೂಟದ ಅಧ್ಯಕ್ಷರಾದ ಭಾಸ್ಕರ್ ಶೆಟ್ಟಿಗಾರ ಅವರ ನೃತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಬಳಿಕ ನಡೆದ ಸಭೆಯಲ್ಲಿ ಒಕ್ಕೂಟದ ವತಿಯಿಂದ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ 90 ಶೇ.ಕ್ಕಿಂತ ಹೆಚ್ಚು ಅಂಕ ಪಡೆದ ಸ್ವಸಹಾಯ ಸಂಘದ ಸದಸ್ಯರ ಮಕ್ಕಳಿಗೆ ಸನ್ಮಾನಿಸಿ ಪ್ರೋತ್ಸಾಹ ಧನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಕೊರಂಗ್ರಪಾಡಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಹರೀಶ್ ಶೇರಿಗಾರ್, ಉಪಾಧ್ಯಕ್ಷ ಸತೀಶ್ ದೇವಾಡಿಗ, ನಿರ್ದೇಶಕರಾದ ಚಂದ್ರ ಹಾಸ ಶೆಟ್ಟಿ, ಹರೀಶ್ ದೇವಾಡಿಗ, ಅಲೆವೂರು ದಿನೇಶ್ ಕಿಣಿ, ಅಲೆವೂರು ಯತೀಶ್ ಕುಮಾರ್, ರಮಾದೇವಿ, ದಿನೇಶ್ ನಾಯಕ್ , ಎಂ. ಕಿಟ್ಟ ಮಾಸ್ಟ್ರ್, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖರ್ ಸುವರ್ಣ ಮಾರ್ಪಳ್ಳಿ, ಬೈಲೂರು ಶಾಖೆಯ ವ್ಯವಸ್ಥಾಪಕ ಜಯೇಂಧ್ರ ಭಂಡಾರಿ, ಸ್ವ ಸಹಾಯ ಸಂಘದ ಮೇಲ್ವಿಚಾರಕರಾದ ಹರಿನಾಥ್, ಪ್ರೇರಕಿ ಭಾರತಿ ಉಪಸ್ಥಿತರಿದ್ದರು. ಗಿರೀಶ್ ಐತಾಳ್ ಕಾರ್ಯಕ್ರಮ ನಿರ್ವಹಿಸಿದರು. ಆಶಾ ಐಮನ್ ಸ್ವಾಗತಿಸಿದರು. ಮಂಜುನಾಥ ಮಾರ್ಪಳ್ಳಿ ವಂದಿಸಿದರು.

Leave a Reply