Janardhan Kodavoor/ Team KaravaliXpress
27.6 C
Udupi
Monday, December 5, 2022
Sathyanatha Stores Brahmavara

ವಸತಿರಹಿತರಿಗೆ ಶೀಘ್ರ ಗ್ರಹ ನಿರ್ಮಾಣ~ಕೆ ರಘುಪತಿ ಭಟ್

ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಯಶೋಗಾಥೆಗಳು ಪಠ್ಯ ಪುಸ್ತಕದಲ್ಲಿ ಪ್ರಕಟವಾದರೆ ಮಕ್ಕಳ ಮನಸಿನಲ್ಲಿ ಕೂಡಾ ದೇಶ ಭಕ್ತಿಯ ಬೀಜ ಬೆಳೆಯುತ್ತದೆ. ರಾಯಣ್ಣನ ಬಗ್ಗೆ ಕವನಗಳು ಕಥೆಗಳ ಮೂಲಕ ಇನ್ನೂ ಹೆಚ್ಚಿನ ಕಾರ್ಯಕ್ರಮಗಳು ಅನುಷ್ಠಾನ ಗೊಳ್ಳಬೇಕು ಎಂದು ಕ್ರಾಂತಿವೀರ ಸಂಗೊಳ್ಳಿ  ರಾಯಣ್ಣ ಅಭಿಮಾನಿ ಬಳಗ ಉಡುಪಿ ಜಿಲ್ಲೆ ಇದರ ವತಿಯಿಂದ ಉಡುಪಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ  224ನೇ ರಾಯಣ್ಣನ ಜಯಂತ್ಯೋತ್ಸವದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಶಾಸಕ ರಘುಪತಿ ಭಟ್ ಮಾತನಾಡಿದರು.

ಉಡುಪಿಯಲ್ಲಿ ಯಾರೆಲ್ಲ ವಸತಿ ರಹಿತರಿದ್ದಾರೋ ಅವರೆಲ್ಲರಿಗೂ ಅತೀ ಕಡಿಮೆ ದರದಲ್ಲಿ ಮನೆ ಗಳನ್ನು ನಿರ್ಮಿಸಿ ಕೊಡಲಾಗುವುದು. ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಮೂಲಕ ಅರ್ಹ ಫಲಾನುಭವಿಗಳನ್ನು ಹುಡುಕಿ ನಮಗೆ ತಿಳಿಸಿದ್ದಲ್ಲಿ  ಈ ಬಗ್ಗೆ ವಿಶೇಷ ಗಮನ ಕೊಡಲಾಗುವುದು ಎಂದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಮಹಾಮಂಡಲದ ಆಧ್ಯಕ್ಷರಾದ ಯಶ್ ಪಾಲ್ ಸುವರ್ಣ ಸಮಾರಂಭವನ್ನು ಉದ್ಘಾಟಸಿ ಸಂಗೊಳ್ಳಿ ರಾಯಣ್ಣನವರ ವ್ಯಕ್ತಿತ್ವ ಯುವಜನತೆಗೆ ಪ್ರೇರಣೆಯಾಗಲಿ.  ಕೊರೊನ ವಾರಿಯರ್ಸ್ ಗೌರವಾರ್ಪಣೆ ಮೂಲಕ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಪ್ರಮುಖರಾದ ಸಂಗೊಳ್ಳಿ ರಾಯಣ್ಣನವರ ಜನ್ಮದಿನೋತ್ಸವ ಆಚರಣೆ ಅರ್ಥಪೂರ್ಣವಾಗಿದೆ ಎಂದರು.

ಸಂಗೊಳ್ಳಿರಾಯಣ್ಣನ  224ನೇ  ಜಯಂತ್ಯೋತ್ಸವದ ಅಂಗವಾಗಿ ಕರೋನಾ ವಾರಿಯರ್ಸ ಆಶಾ ಕಾರ್ಯಕರ್ತರು,  ಪತ್ರಕರ್ತರು,  ಅರೋಗ್ಯ ಸಿಬ್ಬಂದಿ ಹಾಗು ಜನತಾ ಗ್ಯಾರೇಜ್ ಗೆ ವಿಶೇಷ ಗೌರವಾರ್ಪಣೆ ನಡೆಸಲಾಯಿತು. ಸಂಘಟನೆಯ ಮೂಲಕ ವಿವಿಧ ಜನಪರ ಕಾರ್ಯಕ್ರಮಗಳನ್ನು ಈಗಾಗಲೇ ಹಮ್ಮಿ ಕೊಳ್ಳಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕೆಲಸಗಳು ನಡೆಯಲು ಸರ್ವರ ಸಹಕಾರ ಅಗತ್ಯ ಎಂದು ಉಡುಪಿ ಜಿಲ್ಲಾ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ನೂತನ ಅಧ್ಯಕ್ಷ ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದರು.

ಈ  ಸಂದರ್ಭದಲ್ಲಿ ಸಮಾರಂಭದಲ್ಲಿ ಪತ್ರಕರ್ತ ಜನಾರ್ದನ್  ಕೊಡವೂರು,  ಶ್ರೀ ರಾಮಸೇನೆಯ ಜಿಲ್ಲಾಧ್ಯಕ್ಷರಾದ ಶ್ರೀ ಜಯರಾಮ ಅಂಬೆಕಲ್ಲು, ನಗರಸಭೆಯ ಹಿರಿಯ ಅರೋಗ್ಯ ನೀರೀಕ್ಷಕ ಕರುಣಾಕರ ವಿ.,  ಜಿಲ್ಲಾ ಹಾಲುಮತ ಮಹಾ ಸಭಾದ ಹನುಮಂತ ಜಿ ಗೋಡೆ, ಉಡುಪಿ ಜಿಲ್ಲಾ ಕನಕದಾಸ ಸಮಾಜ ಸೇವಾ ಸಂಘದ ಹನುಮಂತ ಐಹೊಳೆ,  ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ದಯಾನಂದ್, ಸಂಘದ ಉಪಾಧ್ಯಕ್ಷ ಈರಪ್ಪ ಗೌಂಡಿ,ಬಸವರಾಜ್ ಐಹೊಳೆ, ಲಕ್ಷ್ಮಣ ಬಿ ಕೊಲ್ಕಾರ್, ಬಸವರಾಜ್ ಮಂಗಳುರು,ಉಮಾ ಎಸ್ ಚಿಕ್ಕಮಠ, ಪಂಪೇಶ್, ಶಿವು ಸಜ್ಜನ್ ಉದ್ಯಾವರ, ನಾಗಲಿಂಗಯ್ಯ ಕರಕಳ್ಳಿ ಮಠ, ಮಹೇಶ್ ಗುಂಡಿಬೈಲ್, ಯಮುನಪ್ಪ ಎಂಜಿಎಂ   ಉಪಸ್ಥಿತರಿದ್ದರು. 

ರಾಯಣ್ಣ ಅಭಿಮಾನ ಬಳಗದ ಕಾರ್ಯದರ್ಶಿ ಶಿವರಾಜ್ ಗುಂಜಿ ಸ್ವಾಗತಿಸಿದರು. ಮಹಿಳಾ ವಿಭಾಗದ ಸವಿತಾ ಎಸ್, ನೋಟ್ ಗಾರ್ ದನ್ಯವಾದವಿತ್ತರು. ರಮೇಶ್ ಎಲಿಬಳ್ಳಿ ಎಂಜಿಎಂ ಪ್ರಸ್ತಾಪಿಸಿದರು. ಶಿಕ್ಷಕ ಪ್ರಶಾಂತ್ ಶೆಟ್ಟಿ ಹಾವಂಜೆ ನಿರೂಪಿಸಿದರು.ಪಾಡಿಗಾರ್ ಲಕ್ಷ್ಮೀನಾರಾಯಣ ಉಪಾಧ್ಯ ಪ್ರಾರ್ಥಿಸಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!