ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿ

ಸಂಸ್ಕೃತ ಕವಿ, ಆದಿಕವಿ, ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ವಿಜೃಂಭಣೆಯಿಂದ ಅಕ್ಟೋಬರ್ 9 ಭಾನುವಾರದಂದು ಸಂಗೊಳ್ಳಿ ರಾಯಣ್ಣ ಉಡುಪಿ ಕಚೇರಿಯಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕರಾವಳಿ ಪೊಲೀಸ್ ಪಡೆಯ ಗಂಗೊಳ್ಳಿ ಠಾಣೆಯ ಶಾಂತಗೌಡ ದೋರನಹಳ್ಳಿ ಅವರು ವಲಸೆ ಕಾರ್ಮಿಕರಾಗಿ ಆಗಮಿಸಿದ ನಾವೆಲ್ಲ ಒಗ್ಗಟ್ಟಾಗಿ ದುಡಿಯೋಣ ಆ ಸಮಾಜ ಈ ಸಮಾಜ ಎಂದು ನಮ್ಮಲ್ಲಿ ಎಲ್ಲಾ ಸಮಾಜದವರು ಒಂದಾಗಿ ಉಡುಪಿಯಲ್ಲಿ ದೊಡ್ಡ ಮಟ್ಟದ ಸಂಘಟನೆಯನ್ನು ರಚಿಸೋಣ ಎಂದು ತಮ್ಮ ಮನದ ಮಾತುಗಳನ್ನು ತಿಳಿಸಿದರು, ವಾಲ್ಮೀಕಿ ಸಮಾಜದ ಹಿರಿಯರಾದ ಹನುಮಂತರಾಯ ದೊರೆ ಮಾತನಾಡಿ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದವರ ಕಾರ್ಯವನ್ನು ಮೆಚ್ಚಿಕೊಂಡರು, ಅವರ ಹಾಗೆ ನಮ್ಮಲ್ಲಿಯೂ ಕೂಡ ಸಂಘಟಿತರಾಗೋಣ ಮುಂದಿನ ದಿನಗಳಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸೋಣ ಎಂದು ಸಮಾಜದ ಎಲ್ಲ ಬಾಂಧವರಿಗೆ ಸಂದೇಶವನ್ನು ತಿಳಿಸಿದರು,
ಈ ಸಂದರ್ಭದಲ್ಲಿ ಪಿಡಬ್ಲ್ಯೂಡಿ ಇಂಜಿನಿಯರ್ ಸೋಮನಾಥ, ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಉಪಾಧ್ಯಕ್ಷ ಈರಪ್ಪ ಗೌಂಡಿ, ಪಂಪೇಶ್,ಸಿದ್ದಣ್ಣ ಪೂಜಾರಿ,ಸಂತೋಷ್ ದೊರೆ, ಶಿವರಾಜ್ ವಾಲಿಕಾರ್, ಗೋಪಾಲ್ ದೊರೆ ಅಮಲಿಹಾಳ, ದೇವರಾಜ್ ದೊರೆ, ಶಶಿಕುಮಾರ್ ಬಿರಾದರ್, ಗೋಪಾಲ್ ದೊರೆ ದೇವದುರ್ಗ, ನಾಗರಾಜ್ ದೊರೆ, ಮುತ್ತುರಾಜ್ ದೊರೆ, ದೇವೇಂದ್ರ ಸಾಹುಕಾರ, ಗಣೇಶ್ ಪಾತ್ರೋಟಿ, ಮತ್ತಿತರರು ಉಪಸ್ಥಿತರಿದ್ದರು.

ಪರಶು ಬಿ ದೊರೆ ಸ್ವಾಗತಿಸಿ ಪ್ರಸ್ತಾವನೆಗೈದರು,
ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಅಧ್ಯಕ್ಷರಾದ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ನಿರೂಪಿಸಿದರು, ಸಂಗನಗೌಡ ದೊರೆ ಧನ್ಯವಾದವಿತ್ತರು.

 
 
 
 
 
 
 
 
 
 
 

Leave a Reply