ಕೊರಂಗ್ರಪಾಡಿ ಸಹಕಾರಿ ವ್ಯವಸಾಯಿಕ ಸಂಘದಿಂದ ಇನ್ವರ್ಟರ್, ಪಲ್ಸ್ ಆಕ್ಸಿಮೀಟರ್, ಥರ್ಮೋಮೀಟರ್ ಕೊಡುಗೆ 

ಉಡುಪಿ: ಕೊರಂಗ್ರಪಾಡಿ ಸಹಕಾರಿ ವ್ಯವಸಾಯಿಕ ಸಂಘದಿಂದ ಕುಕ್ಕಿಕಟ್ಟೆಯ ನಗರ ಕುಟುಂಬ ಕಲ್ಯಾಣ ಕೇಂದ್ರಕ್ಕೆ ಇನ್ವರ್ಟರ್ ಹಾಗೂ ಮಾರ್ಪಳ್ಳಿಯ ಕೋವಿಡ್ ವಾರ್ ಕೇಂದ್ರಕ್ಕೆ ಪಲ್ಸ್ ಆಕ್ಸಿಮೀಟರ್, ಥರ್ಮೋಮೀಟರ್ ನೀಡಲಾಯಿತು. 

ಅಲ್ಲದೇ, ಕೊರೊನ ಸಂಕಷ್ಟದ ಸಂದರ್ಭದಲ್ಲಿ ಸಂಘದ ಕಾರ್ಯ ವ್ಯಾಪ್ತಿಯಲ್ಲಿ ಬರುವ ಅಲೆವೂರು, ಕೊರಂಗ್ರಪಾಡಿ ಗ್ರಾಮಗಳ ಕೋವಿಡ್ ಟಾಸ್ಕ್ ಫೋರ್ಸ್ ನ ಬಳಕೆಗೆ ಸಂಸ್ಥೆಯ ವಾಹನವನ್ನು ಉಚಿತವಾಗಿ ನೀಡಲಾಗಿದೆ. ಇಂದಿರಾ ನಗರ ಕೊರೊನ ಲಸಿಕಾ ಕೇಂದ್ರಕ್ಕೆ ಕುಡಿಯುವ ನೀರಿನ ಸರಬರಾಜು ಮಾಡಲಾಗಿದೆ ಹಾಗೂ ಕೊರೊನದಿಂದ ಮೃತಪಟ್ಟ ಸಂಘದ ‘ಅ’ ದರ್ಜೆಯ ಸದಸ್ಯರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿ ಕೊರಂಗ್ರಪಾಡಿಯವರು ಕೊರೊನ ತಡೆಗಟ್ಟುವಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ , ನಗರ ಕುಟುಂಬ ಕಲ್ಯಾಣ ಕೇಂದ್ರದ ಸಿಬ್ಬಂದಿಗಳ, ಆಶಾ ಕಾರ್ಯಕರ್ತರ ಹಾಗೂ ಜಿಲ್ಲೆಯ ಎಲ್ಲಾ ಪೋಲಿಸ್ ಠಾಣಾ ಸಿಬ್ಬಂದಿಗಳ ಕರ್ತವ್ಯ ಶ್ಲ್ಯಾಘನೀಯವಾದುದು ಎಂದು ಹೇಳಿದರು

ನಗರ ಕುಟುಂಬ ಕಲ್ಯಾಣ ಕೇಂದ್ರದ ವೈದ್ಯಾಧಿಕಾರಿ ಡಾ. ಮಂಜುನಾಥ ಎನ್, ಭಾರತೀಯ ಕುಟುಂಬ ಯೋಜನಾ ಸಂಘದ ಅಧ್ಯಕ್ಷೆ ಹರಿಣಿ ದಾಮೋದರ್ ಕೊಡುಗೆಯನ್ನು ಸ್ವೀಕರಿಸಿದರು.

ಸಂಘದ ಉಪಾಧ್ಯಕ್ಷ ಸತೀಶ್ ದೇವಾಡಿಗ ಕುಕ್ಕಿಕಟ್ಟೆ, ನಿರ್ದೇಶಕ ಹರೀಶ್ ಸೇರಿಗಾರ್ ಅಲೆವೂರು, ಹರೀಶ್ ದೇವಾಡಿಗ ಕುಕ್ಕಿಕಟ್ಟೆ, ಅಶೋಕ್ ಕುಮಾರ್ ಅಲೆವೂರು , ಯತೀಶ್ ಕುಮಾರ್ ಅಲೆವೂರು, ವಿ. ಚಂದ್ರಹಾಸ ಶೆಟ್ಟಿ ಕುಕ್ಕಿಕಟ್ಟೆ , ದಿನೇಶ್ ಕಿಣಿ ಅಲೆವೂರು, ಶ್ರೀಧರ್ ದೇವಾಡಿಗ ಕುಕ್ಕಿಕಟ್ಟೆ, ಶ್ರೀಧರ ಶೆಟ್ಟಿ ಅಲೆವೂರು.

ದಿನೇಶ್ ಸಿ.ನಾಯ್ಕ್ ಅಲೆವೂರು, ಕಿಟ್ಟ ಮಾಸ್ಟರ್ ಮಾರ್ಪಳ್ಳಿ, ರಮಾದೇವಿ ಇಂದಿರಾನಗರ, ಲಕ್ಷ್ಮಿ ಚಂದ್ರಶೇಖರ್ ಇಂದಿರಾನಗರ, ವಿಜಯ ಪಾಲನ್ ಕುಕ್ಕಿಕಟ್ಟೆ ಹಾಗೂ ಸಂಘದ ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ವಿಜಯಲಕ್ಷ್ಮಿ. ಎಂ ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖರ್ ಸುವರ್ಣ ಮಾರ್ಪಳ್ಳಿ ಸ್ವಾಗತಿಸಿ, ವಂದಿಸಿದರು.

 
 
 
 
 
 
 
 
 
 
 

Leave a Reply