ಉಡುಪಿ ಸೆ.18 ಸಂಸ್ಕೃತಿ ವಿಶ್ವ ಪ್ರತಿಷ್ಟಾನದ ವತಿಯಿಂದ ಬಡ ವಿದ್ಯಾರ್ಥಿನಿ ಶಿಕ್ಷಣಕ್ಕೆ ಹಾಗೂ ಅಲೆವೂರು ಅಭಿಮಾನ್ ಸ್ಪೋರ್ಟ್ಸ್ ಕ್ಲಬ್ ಗೆ ಸಹಾಯಧನದ ಚೆಕ್ ವಿತರಿಸಲಾಯಿತು.ಸಂಸ್ಕೃತಿ ವಿಶ್ವ ಪ್ರತಿಷ್ಟಾನದ ಅಧ್ಯಕ್ಷರೂ, ಕೊಡುಗೈ ದಾನಿ ವಿಶ್ವನಾಥ ಶೆಣೈ ಅವರು ವಿದ್ಯಾರ್ಥಿನಿಯ ಶೈಕ್ಷಣಿಕ ನೆರವಿಗಾಗಿ 10,000 ರೂ. ಸಹಾಯಧನ, ಹಾಗೂ ರಾಮಪುರದ ಅಭಿಮಾನ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ನಡೆಸುತ್ತಿರುವ ಮುದ್ದು ಕೃಷ್ಣ ಸ್ಪರ್ಧೆ ಮತ್ತು ಕ್ರೀಡಾ ಚಟುವಟಿಕೆಗೆ ಸಂಸ್ಥೆ ವತಿಯಿಂದ ರೂ.25,000 ದೇಣಿಗೆಯ ಚೆಕ್ ವಿತರಿಸಿದರು.ಈ ಸಂದರ್ಭದಲ್ಲಿ ರವಿರಾಜ್ ಎಚ್ ಪಿ, ವಿಘ್ನೇಶ್ವರ ಅಡಿಗ, ಅಭಿಮಾನ್ ಸ್ಪೋರ್ಟ್ಸ್ ಕ್ಲಬ್ ಗೌರವಾಧ್ಯಕ್ಷ ಅಶೋಕ ಶೆಟ್ಟಿಗಾರ್, ಅಧ್ಯಕ್ಷ ಪ್ರಕಾಶ ಆಚಾರ್ಯ, ಪ್ರಶಾಂತ್ ಕಾಮತ್ ಉಪಸ್ಥಿತರಿದ್ದರು.