ಸಹಕಾರ ಭಾರತಿಯಿಂದ ದೇಶದ ಸಹಕಾರಿ ರಂಗದಲ್ಲಿ ಪಾರದರ್ಶಕತೆ -ಬೋಳ ಸದಾಶಿವ ಶೆಟ್ಟಿ

ಉಡುಪಿ: ಉಡುಪಿ ಜಿಲ್ಲಾ ಸಹಕಾರಿ ಭಾರತಿ ಸಂಘಟನೆಯ ಆಶ್ರಯದಲ್ಲಿ ಉಡುಪಿ ನಗರದ ನೈವೇದ್ಯ ಹೋಟೆಲಿನ ಅನುಗ್ರಹ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಹಕಾರ ಭಾರತಿ ಸ್ಥಾಪನಾ ದಿನಾಚರಣೆ ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ರವಿರಾಜ ಹೆಗ್ಡೆ ದೀಪ ಬೆಳಗಿಸಿ ಉದ್ಘಾಟಿಸಿದರು. ಸಭಾಧ್ಯಕ್ಷತೆಯನ್ನು ಸಹಕಾರ ಭಾರತಿ ಜಿಲ್ಲಾಧ್ಯಕ್ಷ ಬೋಳ ಸದಾಶಿವ ಶೆಟ್ಟಿ ವಹಿಸಿ ಮಾತನಾಡಿದರು.

ದೇಶಾದ್ಯಂತ ಕಾರ್ಯಾಚರಿಸುತ್ತಿರುವ ಬಹುತೇಕ ಸಹಕಾರ ಸಂಘಗಳ ದಕ್ಷ ಆಡಳಿತ ವ್ಯವಸ್ಥೆಯಲ್ಲಿ ಸಹಕಾರ ಭಾರತಿ ಸಂಘಟನೆಯ ಪ್ರತಿನಿಧಿಗಳ ಪಾತ್ರ ಪ್ರಮುಖವಾಗಿದ್ದು, ಈ ಮೂಲಕ ಸಹಕಾರ ಭಾರತಿ ದೇಶದ ಸಹಕಾರಿ ರಂಗದಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು. ಸಹಕಾರಿ ರಂಗದಲ್ಲಿ ಸಾಮೂಹಿಕ ನಾಯಕತ್ವ, ಪ್ರಾಮಾಣಿಕತೆ, ಆಧುನೀಕರಣ ಹಾಗೂ ಸಹಕಾರಿ ಜಾಗೃತಿ ಮೂಡಿಸುವಲ್ಲಿ ಸಹಕಾರ ಭಾರತಿ ಸಂಘಟನೆ ಮುಂಚೂಣಿಯಲ್ಲಿದೆ ಎಂದರು.

ಸಹಕಾರ ಭಾರತಿಯ ವಿಭಾಗ ಸಂಘಟನೆ ಪ್ರಮುಖ ಮೋಹನ್ ಕುಂಬ್ಳೆಕರ್ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡವರಿಗೆ ಸಹಕಾರ ಭಾರತಿ ಮಾರ್ಗದರ್ಶಕವಾಗಿದೆ. ಸಹಕಾರ ರಂಗದಲ್ಲಿನ ಪ್ರಾಮಾಣಿಕತೆ, ಶಿಸ್ತು ಸಹಕಾರಿ ಸಂಸ್ಥೆಗಳ ಉಳಿವಿಗೆ ಕಾರಣ ಎಂದರು.
ಆಧುನೀಕರಣ ಹಾಗೂ ಸಹಕಾರಿ ಕಾಯ್ದೆಗಳ ಬಗ್ಗೆ ಸಹಕಾರ ಭಾರತಿ ರಾಜ್ಯ ಕಾನೂನು ಪ್ರಕೋಷ್ಟದ ಪ್ರಮುಖ ಮಂಜುನಾಥ ಎಸ್.ಕೆ ಮಾತನಾಡಿದರು.

ಹಿರಿಯ ಸಹಕಾರಿ ಧುರೀಣರಾದ ಹದ್ದೂರು ರಾಜೀವ ಶೆಟ್ಟಿ ಹಾಗೂ ಯಶವಂತ ಬಿ.ಕೆ ಅಕಾಲಿಕ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಸಹಕಾರ ಭಾರತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಧೂಸೂಧನ ನಾಯಕ್ ಸ್ವಾಗತಿಸಿ, ಸಾಣೂರು ನರಸಿಂಹ ಕಾಮತ್ ವಂದಿಸಿದರು.

 
 
 
 
 
 
 
 
 
 
 

Leave a Reply