Janardhan Kodavoor/ Team KaravaliXpress
23.4 C
Udupi
Saturday, February 4, 2023
Sathyanatha Stores Brahmavara

ನಮ್ಮೂರ ಗೆಳೆಯರ ಬಳಗ ಸಗ್ರಿ ವತಿಯಿಂದ ಕೆಸರು ಗದ್ದೆಯಲ್ಲಿ ಒಂದು ದಿನ

ನಮ್ಮೂರ ಗೆಳೆಯರ ಬಳಗ ರಿ. ಸಗ್ರಿ ಇವರ ವತಿಯಿಂದ  ಸತತವಾಗಿ 6 ನೆಯ ವರ್ಷದ ನಾಟಿ ಕಾರ್ಯಕ್ರಮ ಸುಮಾರು 3 ಎಕ್ರೆ ನಮ್ಮೂರ ಗದ್ದೆಯಲ್ಲಿ ಜುಲೈ 11 ರ ಭಾನುವಾರ ನೆರವೇರಿತು.  ಬಳಗದ ಗೌರವಾಧ್ಯಕ್ಷರಾದ  ಮುರಳೀಧರ ಭಟ್ ಇವರು ಭೂಮಿ ತಾಯಿಗೆ ಕ್ಷೀರಾಭಿಷೇಕ ಸಮರ್ಪಿಸಿ ಉದ್ಘಾಟಿಸಿದರು. 
ಬಳಗದ ಅಧ್ಯಕ್ಷರಾದ ಹರೀಶ್ ಭಾರದ್ವಾಜ್ ರವರು ಆಗಮಿಸಿದ ಎಲ್ಲರನ್ನೂ ಸ್ವಾಗತಿಸಿದರು. ಊರವರ ಹಾಗೂ ಅಭಿಮಾನಿಗಳ ಸಹಕಾರದಿಂದ  ನಾಟಿ ಕಾರ್ಯಕ್ರಮ ಯಶಸ್ವಿಯಾಯಿತು. ಕೊರೋನ ಮಾರ್ಗಸೂಚಿಯನ್ನು ಪಾಲಿಸಿ ನಡೆದ ಕಾರ್ಯಕ್ರಮದಲ್ಲಿ ಯಾವುದೇ ಕ್ರೀಡೆ , ಆಟೋಟ ಗಳನ್ನು ನಡೆಸದೆ ಕೇವಲ ನಾಟಿ ಕಾರ್ಯಕ್ರಮ ನಡೆಸಲಾಯಿತು. 
ಬಳಗದ  ಗೌರವ ಸಲಹೆಗಾರದ ಉಮೇಶ್ ನಾಯಕ್ , ಸದಾನಂದ ನಾಯಕ್ ಹಾಗೂ ಸರ್ವ ಸದಸ್ಯರು ಹಾಜರಿದ್ದರು. ಉದಯ್ ಕುಮಾರ್ ಕುಂಡೆಲು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!