Janardhan Kodavoor/ Team KaravaliXpress
31.6 C
Udupi
Wednesday, December 8, 2021
Sathyanatha Stores Brahmavara

ರಂಗಭೂಮಿ (ರಿ). ಉಡುಪಿಯ ರಂಗ ತರಬೇತಿ ಸರಣಿ ಕಾರ್ಯಾಗಾರದ ಎರಡನೇ ಶಿಬಿರ

ಉಡುಪಿ : ಒಟ್ಟು ರಂಗಭೂಮಿ ಬೆಳೆಯಬೇಕು ಎಂಬ ಮಹತ್ವದ ಸಂಕಲ್ಪದೊಂದಿಗೆ ರಂಗಭೂಮಿ (ರಿ.) ಉಡುಪಿ ಕಳೆದ ತಿಂಗಳಿಂದ ಪ್ರತೀ ತಿಂಗಳು “ಎರಡು ದಿನಗಳ ರಂಗತರಬೇತಿ ಸರಣಿ ಕಾರ್ಯಾಗಾರ” ವನ್ನು ನಡೆಸಲು ಸಂಕಲ್ಪಿಸಿದೆ.

ಕಳೆದ ಅಕ್ಟೋಬರ್ ತಿಂಗಳಲ್ಲಿ ಸರಣಿಯ ಪ್ರಥಮ ಕಾರ್ಯಾಗಾರವು ಹೆಸರಾಂತ ರಂಗಕರ್ಮಿ, ಧಾರಾವಾಹಿ – ಚಲನಚಿತ್ರ ನಟ ಶ್ರೀ ಮಂಡ್ಯ ರಮೇಶ್ ಇವರ ತರಬೇತಿಯಲ್ಲಿ ಅತ್ಯಂತ ಯಶಸ್ವಿಯಾಗಿದೆ. 

ಇದೀಗ ಈ ರಂಗ ತರಬೇತಿ ಸರಣಿ ಕಾರ್ಯಾಗಾರದ ಎರಡನೇ ಶಿಬಿರವನ್ನು ನವೆಂಬರ್ 13 ಮತ್ತು 14 (ಶನಿವಾರ-ಭಾನುವಾರ) ರಂದು ರಾಜ್ಯದ ಮತ್ತೋರ್ವ ಹೆಸರಾಂತ ರಂಗಕರ್ಮಿ, ಝೀ ಕನ್ನಡ ವಾಹಿನಿಯ ಜನಪ್ರಿಯ ಡ್ರಾಮಾ ಜ್ಯೂನಿಯರ್ ನಲ್ಲಿ ಇನ್ನಷ್ಟು ಖ್ಯಾತಿಯ ಪಡೆದ ನಿರ್ದೇಶಕ ಅಲ್ಲದೆ ನಮ್ಮ ಸಂಸ್ಥೆಯ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆಯಲ್ಲಿ 3 ಬಾರಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ವಿಜೇತ “ಮಂಜುನಾಥ ಎಲ್. ಬಡಿಗೇರ್” ಇವರು ನಡೆಸಿಕೊಡಲಿದ್ದಾರೆ.

ಸೀಮಿತ ಸಂಖ್ಯೆಯ ಶಿಬಿರಾರ್ಥಿಗಳಿಗೆ ಅವಕಾಶದ ಕಾರಣ – ಇನ್ನೂ ನೋಂದಾಯಿಸಿರದವರು ಆದಷ್ಟು ಬೇಗ ನೋಂದಾಯಿಸಿ ಕೊಳ್ಳಬೇಕು.ಶಿಬಿರದಲ್ಲಿ ಭಾಗವಹಿಸಲು ಇಚ್ಚಿಸುವವರರು ಸಂಸ್ಥೆಯ ಕಾರ್ಯಕಾರಿಣಿ ಸದಸ್ಯರಾಗಿರುವ, ಅಧ್ಯಾಪಕರಾದ ವಿವೇಕಾನಂದ – 9449367595 ಇವರಿಗೆ ಊಟೋಪಚಾರದ ಬಾಬ್ತು ₹300/- Google pay ಮಾಡಿ ಹಾಗೂ ಅವರಿಗೆ ನಿಮ್ಮ ಹೆಸರು, ವಿಳಾಸ ಮತ್ತು Google pay ಮಾಡಿರುವುದರ ಮಾಹಿತಿಯನ್ನು (screen shot) ಆದಷ್ಟು ಬೇಗ ಕಳುಹಿಸಿ ನೋಂದಾಯಿಸಿ ಕೊಳ್ಳಬೇಕು.

ಶಿಬಿರಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಬೇಕಾದಲ್ಲಿ ಪ್ರದೀಪ್ ಚಂದ್ರ ಕುತ್ಪಾಡಿ – 9448952847, ಶ್ರೀಪಾದ ಹೆಗಡೆ – 9845118449, ವಿವೇಕಾನಂದ – 9449367595, ಪೂರ್ಣಿಮಾ ಸುರೇಶ್ – 9731812468 

ಇವರನ್ನು ಸಂಪರ್ಕಿಸಬಹುದು ಎಂದು ರಂಗಭೂಮಿ (ರಿ.) ಉಡುಪಿ ಕಾರ್ಯಕಾರಿ ಮಂಡಳಿ ತಿಳಿಸಿದೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!