Janardhan Kodavoor/ Team KaravaliXpress
25.6 C
Udupi
Saturday, December 3, 2022
Sathyanatha Stores Brahmavara

ರೋಟರಿ ಮಣಿಪಾಲ ಹಾಗು ​ಎಸ್ ​ಕೆಪಿಎ ಉಡುಪಿ ವಲಯ ಜಂಟಿ ಸಭೆ

ಸಮಾಜ ಸೇವೆಯಲ್ಲಿ ಛಾಯಾಗ್ರಹಣ ಪ್ರಮುಖ ಪಾತ್ರ ವಹಿಸುತ್ತದೆ. ಆ ಸಂದರ್ಭದಲ್ಲಿ ಕಾರ್ಯಕ್ರಮಗಳ ದಾಖಲಾತಿಯು ಅತೀ ಮುಖ್ಯ ಎಂದು ರೋಟರಿ ಜಿಲ್ಲೆ 3182 ಜಿಲ್ಲಾ ಗವರ್ನರ್ ಜಯ ಗೌರಿ ಹಡಿಗಾಲ್ ಅಭಿಪ್ರಾಯಪಟ್ಟರು. ಅವರು ಮಣಿಪಾಲದಲ್ಲಿ ನಡೆದ ಸೌತ್ ಕೆನರಾ ಫೋಟೋಗ್ರಾಪರ್ಸ್ ಅಸೋಸಿಯೇಷನ್ ಉಡುಪಿ ವಲಯ ಹಾಗೂ ರೋಟರಿ ಮಣಿಪಾಲದ ಜಂಟಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಮಹಿಳಾ ಛಾಯಾಗ್ರಾಹಕಿಯಾರಾದ  ವಿದ್ಯಾ ಪಿ. ಹೆಬ್ಬಾರ್, ಪೂರ್ಣಿಮಾ ಪ್ರಕಾಶ್ ಶೆಟ್ಟಿ, ವಿಮಲಾ ಕಲ್ಮಾಡಿ ಹಾಗೂ ಕ್ರೀಡಾ ಸಾಧಕಿ ಸಾನಿಕ ಬಂಗೇರ ಮತ್ತು ದ್ವಿಚಕ್ರ ವಾಹನದಲ್ಲಿ ದೇಶ ಪರ್ಯಟನೆ ಮಾಡಿದ ಸಾಕ್ಷಿ ಹೆಗಡೆಯವರನ್ನು ಗೌರವಿಸಿ ಅಭಿನಂದಿಸಲಾಯಿತು. ರಾಜವರ್ಮ ಅರಿಗ,  ಪ್ರವೀಣ್ ಕೊರೆಯ,  ಉಪಸ್ಥಿತರಿದ್ದರು.

ರೋಟರಿ ಮಣಿಪಾಲದ ಅಧ್ಯಕ್ಷೆ ರೇಣು ಜಯರಾಮ ಸ್ವಾಗತಿಸಿದರು. ಎಸ್ ಕೆ ಪಿಎ ಉಡುಪಿ ವಲಯಧ್ಯಕ್ಷ ಜನಾರ್ದನ್ ಕೊಡವೂರು ಪ್ರಸ್ತಾವನೆಗೆದರು. ಪೂರ್ಣಿಮಾ ಜನಾರ್ದನ್, ಹಾಗೂ ಸಿ.ಪ್ರದೀಪ್ ಭಟ್ ಸನ್ಮಾನಿತರನ್ನು ಸಭೆಗೆ ಪರಿಚಯಿಸಿದರು. ನಿಯೋಜಿತ ಅಧ್ಯಕ್ಷ ಶ್ರೀಪತಿ ಮಣಿಪಾಲ್ ನಿರೂಪಿಸಿದರು..

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!