ರೋಟರಿ ಉಡುಪಿ ವತಿಯಿಂದ ಕೃಷ್ಣಾನುಗೃಹ ಅನಾಥಾಶ್ರಮಕ್ಕೆ ಸಹಾಯ

ಉಡುಪಿ: ಅನಾಥ ಮಕ್ಕಳ ಬಾಳಿನ ಆಶಾಕಿರಣ ಸಂತೆಕಟ್ಟೆಯ ಕೃಷ್ಣಾನುಗೃಹ ಅನಾಥಾಶ್ರಮದ ಕೆಲವು ಮಕ್ಕಳಿಗೆ ಮತ್ತು ಸಿಬ್ಬಂದಿಗೆ ಕ‌ರೋನ ಸೋಂಕು ತಗಲಿದೆ.ಉಳಿದ 17 ಜನ ಮಕ್ಕಳಿಗೆ ನೆಗೆಟಿವ್ ವರದಿ ಬಂದಿದ್ದು ಬೇರೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.

ಎರಡು ಪ್ರತ್ಯೇಕ ವ್ಯವಸ್ಥೆಗಾಗಿ ಸಿಬ್ಬಂದಿ ವರ್ಗ ಮತ್ತು ಮಕ್ಕಳಿಗೆ ಔಷಧಿ, ಮಕ್ಕಳ ಆಹಾರ ಮತ್ತು ಇತರೆ ಅವಶ್ಯ ವಸ್ತುಗಳಲ್ಲದೆ ರಾತ್ರಿ ಊಟದ ವ್ಯವಸ್ಥೆಯನ್ನು ದಾನಿಗಳ ಸಹಕಾರದಿಂದ ರೋಟರಿ ಉಡುಪಿ, ‘ಶ್ರೀ ಕೃಷ್ಣ ರೋಟರಾಕ್ಟ ಕ್ಲಬ್’ ಮತ್ತು ‘ಚೈಲ್ಡ್ ಲೈನ್’ ಉಡುಪಿಯ ವತಿಯಿಂದ ಮಾಡಲಾಗಿದೆ.ಅವುಗಳನ್ನು ಸಂಸ್ಥೆಯ ಅಧ್ಯಕ್ಷ ಡಾ. ಉಮೇಶ್ ಪ್ರಭು ಅವರಿಗೆ ಹಸ್ತಾಂತರಿಸಲಾಯಿತು. 

ಮಕ್ಕಳ ಕಲ್ಯಾಣ ಸಮಿತಿಯ ಮಾಜಿ ಅಧ್ಯಕ್ಷ ನಾರಾಯಣ ಬಿ.ಕೆ.,ರೋಟರಿ ಅಧ್ಯಕ್ಷೆ ರೋ.ರಾಧಿಕಾ ಲಕ್ಷ್ಮೀನಾರಾಯಣ,ರೋಟರಾಕ್ಟ್ ಅಧ್ಯಕ್ಷೆ ರೊ.ಶೃತಿ ಶೆಣೈ, ರೋಟರಿ ಜಿಲ್ಲಾ ಕಾರ್ಯದರ್ಶಿ ರೋ.ಡಾ.ಸುರೇಶ್ ಶೆಣೈ, ರೋ.ಲಕ್ಷ್ಮೀನಾರಾಯಣ, ರೋ.ದೀಪಾ ಭಂಡಾರಿ, ರೋ. ದಿನೇಶ್ ಭಂಡಾರಿ, ರೋ.ಸೀತಾರಾಮ ತಂತ್ರಿ,ರೋ.ಮಾಲತಿ ತಂತ್ರಿ, ರೋ.ವನಿತಾ ಉಪಾಧ್ಯಾಯ, ರೋ.ಸತ್ಯವತಿ ಹೆಬ್ಬಾರ್, ರೋ.ಆದಿತ್ಯ ಹೆಬ್ಬಾರ್,ಚೈಲ್ಡ್ ಲೈನ್ ನಿರ್ದೇಶಕ ರೋ. ರಾಮಚಂದ್ರ ಉಪಾಧ್ಯಾಯ,ಚೈಲ್ಡ್ ಲೈನ್ ನ ಜ್ಯೋತಿ,ಪ್ರಮೋದ್,ಸಂಸ್ಥೆಯ ಅಧಿಕಾರಿ ಶ್ರೀ ಉದಯಕುಮಾರ ಮುಂತಾದವರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply