​ರೋಟರಿ ವಲಯ​​ 4ರ ‘ಧನ್ಯತೆ’ಯ ಕೃತಜ್ಞತಾ ಸಮರ್ಪಣೆ

ರೋಟರಿ ವರ್ಷ ​2020-21 ನ್ನು ಯಶಸ್ವಿಯಾಗಿ ಪೂರೈಸಿರುವ ವಲಯ​ ​​4ರ  ಎಲ್ಲಾ​ ರೋಟರಿ ಕ್ಲಬ್ ಅಧ್ಯಕ್ಷರಿಗೆ, ಕಾರ್ಯದರ್ಶಿಗಳಿಗೆ ಗೌರವಾರ್ಪಣೆ ಹಾಗೂ ರೋಟರಿ ಅವಕಾಶಗಳನ್ನು ನೀಡುತ್ತದೆ ತಂಡದ ನಾಯಕರನ್ನು ಗುರುತಿಸುವ​ “ಧನ್ಯತೆ’ ಕಾರ್ಯಕ್ರಮನ್ನು ನಿಕಟಪೂರ್ವ ಸಹಾಯಕ ಗವರ್ನರ್ ಆನಂದ್ಉದ್ಯಾವರ್ ನೇತೃತ್ವದಲ್ಲಿ ​ಭಾನುವಾರದಂದು  ಉಡುಪಿಯ ಕಿದಿಯೂರು​ ಹೋಟೇಲಿನಲ್ಲಿ ಜರಗಿಸಲಾಯಿತು.
ಸವಾಲುಗಳ ಮಧ್ಯೆಯೂ ಮನುಕುಲದ ಸೇವೆಯಲ್ಲಿ ತನ್ನನ್ನು​ ತೊಡಗಿಸಿಕೊಂಡು ಇಡೀ ವರ್ಷ ಸೇವಾ ಚಟುವಟಿಕೆಯೊಂದಿಗೆ ​116ವರ್ಷ ಇತಿಹಾಸ​ ಹೊಂದಿರುವ ರೋಟರಿ ಪಯಣವನ್ನು ಯಶಸ್ವಿಯಾಗಿ ನಿರ್ವಹಿಸಿದ ವಲಯದ​ ಯಶಸ್ವಿ ಅಧ್ಯಕ್ಷ ಕಾರ್ಯದರ್ಶಿಗಳಾದ ಕಟಪಾಡಿ ರೋಟರಿಯ ಗಣೇಶ್ ಕಿಣಿ​ ಹಾಗೂ ಸಂತೋಷ್ ಶೆಟ್ಟಿ, ಉದ್ಯಾವರ ರೋಟರಿಯ ದೀಕ್ಷತ್ ಶೆಟ್ಟಿ, ಅಬ್ದುಲ್​ ಫಿರೋಜ್, ಉಡುಪಿ ರೋಟರಿಯ ರಾಧಿಕಾ ​ಲಕ್ಶ್ಮೀ ನಾರಾಯಣ್, ದೀಪಾ ಭಂಡಾರಿ,​ ಮಣಿಪಾಲ ರೋಟರಿಯ ಪ್ರಶಾಂತ್ ಹೆಗ್ಡೆ, ಶ್ರೀಪತಿ ಪಿ, ಮಣಿಪಾಲ ಟೌನ್ ರೋಟರಿಯ​ ಪ್ರೊ| ರವೀಂದ್ರನಾಥ ನಾಯಕ್, ಜ್ಯೋತಿ ಆರ್ ನಾಯಕ್, ಮಣಿಪಾಲ ಹಿಲ್ಸ್​ ರೋಟರಿಯ ಭಾಸ್ಕರ ರಾವ್, ನಾರಾಯಣ್ ಭಟ್, ಪರ್ಕಳ ರೋಟರಿಯ ಗೀತಶ್ರೀ​ ಉಪಾಧ್ಯಾಯ, ಜಯ​ಲಕ್ಷ್ಮೀ ಶೆಟ್ಟಿಗಾರ್, ಪೆರ್ಡೂರು ರೋಟರಿಯ ಸಂತೋಷ್​ ಕುಲಾಲ್, ಸಂದೀಪ್ ಶೆಟ್ಟಿ ಹಾಗೂ ಉಡುಪಿ ರಾಯಲ್ ರೋಟರಿಯ ಮಂಜುನಾಥ​ ಮಣಿಪಾಲ ಇವರೆಲ್ಲರನ್ನು ಸನ್ಮಾನಿಸಲಾಯಿತು.​ 
ರೋಟರಿ ​2020-21ನೇ ಸಾಲಿನ ಜಿಲ್ಲಾ ಗವರ್ನರ್ ರಾಜಾರಾಮ್ ಭಟ್, ಕೋವಿಡ್​ ಸವಾಲಿನಲ್ಲೂ ಜಿಲ್ಲೆ ಸದಸ್ಯತ್ವ ವೃದ್ಧಿ ಹಾಗೂ ರೋಟರಿ ದತ್ತಿನಿಧಿಗೆ ದೇಣಿಗೆ ಸಂಗ್ರಹಿಸುವಲ್ಲಿ ಮಹತ್ತರ ಸಾಧನೆ ಮಾಡಿದೆ, ರೋಟರಿ ನೈಜ ನಾಯಕತ್ವಕ್ಕೆ​ ಮಾದರಿ ಎಂದು ಶುಭಹಾರೈಸಿದರು.ಮುಖ್ಯ ಅತಿಥಿ ಸುಬ್ರಹ್ಮಣ್ಯ ಬಾಸ್ರಿ ಮಾತನಾಡಿ​​ ಸ್ನೇಹ ಒಡನಾಟದಿಂದ ಸೇವೆಯ ಅಡಿಗಲ್ಲನ್ನು ಮನುಕುಲಕ್ಕೆ ನೀಡಿ ಇಂದು​ ಜನಮಾನಸದಲ್ಲಿ ರೋಟರಿಯ ಸೇವೆ ಮನೆಮಾತಾಗಿದೆ. ಇದನ್ನು​ ನಿಭಾಯಿಸುತ್ತಿರುವ ರೋಟೇರಿಯನ್ನುರು ನಿಜವಾಗಿಯೂ ಧನ್ಯರು.
​ ಕಾರ್ಯಕ್ರಮ ನಾಯಕರಲ್ಲಿ ಇನ್ನಷ್ಟು ಸೇವೆಯ ಪುಟಗಳನ್ನು​ ತೆರೆಯಲು ನಾಂದಿಯಾಗಲಿ ಎಂದು ಹೇಳಿದರು. ವಲಯ ಟ್ರೈನರ್​ ​ಡಾ| ಎ​ ಗಣೇಶ್ ರೋಟರಿ ಬಗ್ಗೆ ತಿಳಿಸಿದರು. ರೋಟರಿ ​2020-21ನೇ ಸಾಲಿನ ರೋಟರಿ ಪ್ರಥಮ​ ಮಹಿಳೆ ವರದಾಂಬ ಆರ್ ಭಟ್. ವಲಯ ಸೇನಾನಿ ಕಟಪಾಡಿ ಶಂಕರ ಪೂಜಾರಿ,​ ಗುರುಪ್ರಸಾದ್ ಕಾಮತ್, ಸಂತೆಕಟ್ಟೆ ರಾಮದಾಸ ನಾಯಕ್​ ಉಪಸ್ಥಿತರಿದ್ದರು. 
ಆನಂದ್ ಉದ್ಯಾವರ ಸ್ವಾಗತಿಸಿದರು. ವಲಯ ಕಾರ್ಯದರ್ಶಿ​ ರಾಜೇಶ್ ಡಿ ವಂದಿಸಿದರು. ಸತೀಶ್, ವಸಂತ ಕೋಟ್ಯಾನ್ ನಿರ್ವಹಿಸಿದರು.​
 
 
 
 
 
 
 
 
 
 
 

Leave a Reply