Janardhan Kodavoor/ Team KaravaliXpress
24.6 C
Udupi
Sunday, September 25, 2022
Sathyanatha Stores Brahmavara

ರೋಟರಿ ಉಡುಪಿಯಿಂದ ಮಹಿಳಾ ಸಬಲೀಕರಣದ ಬಗ್ಗೆ ಕಾರ್ಯಾಗಾರ

ರೋಟರಿ ಉಡುಪಿ, ಯೂನಿಯನ್ ಬ್ಯಾಂಕ್, ನೆಹರು ಯುವಕ ಕೇಂದ್ರ ಮತ್ತು ಸಮೃಧ್ಧಿ ಮಹಿಳಾ ಮಂಡಳಿಯ ಸಂಯುಕ್ತ ಆಶ್ರಯ ದಲ್ಲಿ ಪೇತ್ರಿಯಲ್ಲಿ ಮಹಿಳಾ ಸಬಲೀಕರಣದ ಬಗ್ಗೆ ಕಾರ್ಯಾಗಾರ ವು ನಡೆಯಿತು. ರೋಟರಿ ಸಹಾಯಕ ಗವರ್ನರ್ ರೋ.ರಾಮಚಂದ್ರ ಉಪಾಧ್ಯಾಯ ರು ಕಾರ್ಯಕ್ರಮ ವನ್ನು ಉದ್ಘಾಟಿಸಿ ಹಳ್ಳಿಯಲ್ಲಿ ಇಂತಹ ಕಾರ್ಯಕ್ರಮ ನಡೆಸಿದಬಗ್ಗೆ ಎಲ್ಲರನ್ನು ಅಭಿನಂದಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಯೂನಿಯನ್ ಬ್ಯಾಂಕ್ ನ ಉಡುಪಿ ವಲಯದ ಮುಖ್ಯ ಸ್ಥರಾದ ರೋ.ಡಾ.ಎಚ್.ಟಿ.ವಾಸಪ್ಪನವರು ಬ್ಯಾಂಕ್ ನಿಂದ ಸಿಗುವ ವಿವಿದ ಸವಲತ್ತುಗಳ ಬಗ್ಗೆ ವಿವರಿಸಿ ಅದರ ಸದುಪಯೋಗ ಪಡೆಯುವಂತೆ ಕರೆನೀಡಿದರು.ಪ್ರಾರಂಬದಲ್ಲಿ ಸಮೃದ್ಧಿ ಮಹಿಳಾ ಮಂಡಳದ ಅಧ್ಯಕ್ಷೆ ಶ್ರೀ ಮತಿ ಪ್ರಸನ್ನ ಭಟ್ ರವರು ಎಲ್ಲರನ್ನು ಸ್ವಾಗತಿಸಿದ ಬಳಿಕ ರೋಟರಿ ಉಡುಪಿ ಅಧ್ಯಕ್ಷ ರೋ.ಸುಬ್ರಹ್ಮಣ್ಯ ಕಾರಂತರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ರೋಟರಿ ವಲಯ ಸಂಯೋಜಕ ರಾದ ರೋ.ದೀಪಾ ಭಂಡಾರಿಯವರು ರೊಟರಿಜಿಲ್ಲಾಯೋಜನೆಯಾದ ಮಹಿಳಾ ಸಬಲೀಕರಣದಬಗ್ಗೆ ವಿವರಿಸಿದರು. ಈ ಸಂದರ್ಭದಲ್ಲಿ ಪರಿಸರದ ಅತೀ ಅವಶ್ಯಕತೆಯಿಳ್ಳ ಮೂವರು ಮಹಿಳೆಯರಿಗೆ ಯೂನಿಯನ್ ಬ್ಯಾಂಕ್ ನಿಂದ ಕೊಡಮಾಡಿದ ಹೊಲಿಗೆಯಂತ್ರಗಳನ್ನು ವಿತರಿಸಲಾಯ್ತು.

ಬ್ಯಾಂಕನ ಸಹಾಯಕ ಪ್ರಬಂಧಕ ರಾದ ರೋ.ರೋಸಲಿನ್ ರೋಡ್ರಿಗಸ್ ರವರು ಸಮಯೋಚಿತವಾಗಿ ಮಾತಾಡಿದರು. ಬ್ಯಾಂಕ್ ನ ವಿವಿದ ಯೋಜನೆ ಗಳಬಗ್ಗೆ ಅಧಿಕಾರಿ ರೋ.ಅಶೋಕ ಕೋಟ್ಯಾನ್ ರವರು ಮಾಹಿತಿನೀಡಿದರು. ಚೈಲ್ಡಲೈನ್ ನ ಸಂಯೋಜಕಿ ಕು ಜ್ಯೋತಿಯವರು ಮಕ್ಕಳ ಸಹಾಯವಾಣಿ ಬಗ್ಗೆ ಮಾಹಿತಿ ನೀಡಿದರು. ಕೊನೆಯಲ್ಲಿ ಕಾರ್ಯದರ್ಶಿ ರೋ.ಗುರುರಾಜ ಭಟ್ ರು ಧನ್ಯವಾದ ಸಮರ್ಪಿಸಿದರು. ರೋ. ಶುಭಬಾಸ್ರಿ ಕಾರ್ಯಕ್ರಮ ನಿರ್ವಹಿಸಿದರು. ಸಮಾರಂಭದಲ್ಲಿ ರೋ.ದಿನೇಶ ಭಂಡಾರಿ, ರೋ.ವನಿತಾಉಪಾಧ್ಯಾಯ, ರೋ. ಅಮಲ ಭಟ್, ರೋ.ರಾಮಣ್ಣ ನಾಯ್ಕ ಮತ್ತು ಮಹಿಳಾ ಮಂಡಳದ ಸದಸ್ಯರು ಬಹು ಸಂಖ್ಯೆಯ ಲ್ಲಿ ಭಾಗವಹಿಸಿ ದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!