ವಿಶ್ವ ಅಂಗದಾನದಿನಾಚರಣೆ ರೋಟರಿಯಿಂದ ಜನಜಾಗೃತಿ ಗಾಗಿ ವಾಹನ ಜಾತಾ

ವಿಶ್ವ ಅಂಗದಾನದಿನಾಚರಣೆ ಅಂಗವಾಗಿ ರೋಟರಿ ವಲಯ ೪ರ ಹತ್ತು ಕ್ಲಬ್ ಗಳಾದ ಪೆರ್ಡೂರು, ಪರ್ಕಳ, ಐಸಿರಿ ಪರ್ಕಳ, ಮಣಿಪಾಲ ಟೌನ್, ಮಣಿಪಾಲ, ಮಣಿಪಾಲ ಹಿಲ್ಸ್, ಉಡುಪಿ, ಉಡುಪಿ ರೋಯಲ್, ಉದ್ಯಾವರ ಮತ್ತು ಕಟಪಾಡಿ ಯ ಸದಸ್ಯರು ತಮ್ಮ ತಮ್ಮ ಪ್ರದೇಶದಿಂದ ,ಉಡುಪಿ ಜೋಡುಕಟ್ಟೆಗೆ ವಾಹನ ಜಾತಾದಿಂದ ಸೇರಿ ಅಲ್ಲಿಂದ  ಮಣಿಪಾಲ ಟೈಗರ್ ಸರ್ಕಲ್ ನವರೆಗೆ ಅಂಗದಾನದ ಮಹತ್ವ ಮತ್ತು ಅಗತ್ಯತೆ ಬಗ್ಗೆ ಜನಜಾಗೃತಿ ಗಾಗಿ ನಡೆಸಿದ ಕಾರು ಮತ್ತು ಬೈಕ್ ಜಾತಾವನ್ನು ಅಪರ ಜಿಲ್ಲಾಧಿಕಾರಿ ಶ್ರೀ ಮತಿ ವೀಣಾ, ಮಾಹೆಯ ಪ್ರೊ. ಚಾನ್ಸಲರ್ ಡಾ.ಎಚ್.ಎಸ್. ಬಲ್ಲಾಳ, ರೋಟರಿ ಗವರ್ನರ್ ರೋ.ಡಾ.ಜಯಗೌರಿ, ರೋಟರಿ ಸಹಾಯಕ ಗವರ್ನರ್ ರೋ.ರಾಮಚಂದ್ರ ಉಪಾಧ್ಯಾಯ ಮತ್ತು ರೋಟರಿ ಜಿಲ್ಲಾ ಯೋಜನೆ – ಚರ್ಮ ಮತ್ತು ಅಂಗದಾನದ ಸಭಾಪತಿ ರೋ.ಡಾ.ಶ್ರೀಧರ ಮತ್ತಿತರ ಗಣ್ಯರೋಡನೆ ಚಾಲನೆ  ನೀಡಿದರು.
ನಂತರ ಅಪರ ಜಿಲ್ಲಾಧಿಕಾರಿ ಶ್ರೀಮತಿ ವೀಣಾ ಅವರು ಮಾತಾಡುತ್ತಾ ತಮ್ಮ ಒಂದು ಉತ್ತಮ ಕ್ರಿಯೆಯಿಂದ ಅನೇಕರ ಜೀವ ಉಳಿಸುವ ಈ ಪುಣ್ಯ ಕಾರ್ಯ ದಲ್ಲಿ ಎಲ್ಲರು ತೊಡಗಿಸಿ ಕೊಳ್ಳಬೇಕು ಮತ್ತು ಇಂತಹ ಉಪಯುಕ್ತ ಕಾರ್ಯಕ್ರಮ ನಡೆಸಿದ ಬಗ್ಗೆ ರೋಟರಿಯನ್ನು  ಅಭಿನಂದಿಸಿದರು. ಮಾಹೆಯ ಪ್ರೊ.ಚಾನ್ಸಲರ್  ಡಾ. ಎಚ್. ಎಸ್. ಬಲ್ಲಾಳ ರು ರೋಟರಿ ಕಸ್ತೂರಬಾ ಆಸ್ಪತ್ರೆ ಗೆ ಸ್ಕಿನ್ ಬ್ಯಾಂಕ್ ಸವಲತ್ತನ್ನು ನೀಡಿದ್ದು ಅಭಿನಂದನೀಯ. ಅಂಗದಾನದ ಅವಶ್ಯಕತೆ ಬಹಳಷ್ಡಿದ್ದು ಇಂತಹ ಜಾಗೃತಿ ಕಾರ್ಯಕ್ರಮ ಗಳು ಬಹಳ ಅವಶ್ಯ ಎಂದರು.ವಲಯದ   ಕ್ಲಬ್ ಗಳ ಅಧ್ಯಕ್ಷರು ಮತ್ತು ಸದಸ್ಯರು, ಮಣಿಪಾಲ ಅಟೋಕ್ಲಬ್ ಮತ್ತು ಉಡುಪಿ ಜಾವಾ ಯೆಚ್ಡಿ ಮೋಟಾರ್ ಸೈಕಲ್ ಕ್ಲಬ್ ನ ಸದಸ್ಯರು ಗಳು, ಉಡುಪಿ ಮತ್ತು ಮಣಿಪಾಲ ಪೋಲೀಸ್ ಠಾಣೆಯ ಮುಖ್ಯಸ್ಥ ರು ಮತ್ತು ಸಿಬ್ಬಂದಿ ಗಳು ಈ ಜಾತಾದಲ್ಲಿ ಭಾಗವಹಿಸಿದರು. ಈ ಅಭಿಯಾನವು ಮಣಿಪಾಲದ ಟೈಗರ ಸರ್ಕಲ್ ನಲ್ಲಿ  ಸಮಾರೋಪ ಗೊಂಡು ರೋಟರಿ ಗವರ್ನರ್ ರೋ.ಜಯಗೌರಿ ಯವರು  . ಅಂಗದಾನದ ಅಗತ್ಯತೆ ಮತ್ತು ಮಹತ್ವವನ್ನು ತಿಳಿಯಪಡಿಸುವ ಸಲುವಾಗಿ ಜನಜಾಗೃತಿ ಗಾಗಿ ನಡೆದ ಜಾತಾದಲ್ಲಿ ಪಾಲ್ಗೊಂಡ ಎಲ್ಲರನ್ನು ಅಭಿನಂದಿಸಿದರು. ಜಿಲ್ಲಾ  ಕಾರ್ಯದರ್ಶಿಗಳಾದ ರೋ.ಅಮಿತ ಅರವಿಂದ, ರೋ. ಸುಬ್ರಹ್ಮಣ್ಯ ಬಾಸ್ರಿ, ರೋ.ಡಾ.ಸೇಸಪ್ಪ ರೈ, ರೋ. ಪ್ರಶಾಂತ ಹೆಗ್ಡೆ, ರೋ.ರಾಜವರ್ಮ ಅರಿಗ ಸಹಿತ ಅನೇಕ ರೋಟರಿ ದುರೀಣರು ಉಪಸ್ಥಿತರಿದ್ದರು. ರೋ. ಹೇಮಂತ ಯು.ಕಾಂತರು ಕಾರ್ಯಕ್ರಮ ನಡೆಸಿಕೊಟ್ಟರು. ಮಣಿಪಾಲ ಟೌನ್ ನ ಅಧ್ಯಕ್ಷ ರೋ.ನಿತ್ಯಾನಂದ ನಾಯಕರು ದನ್ಯವಾದ ಸಮರ್ಪಿಸಿದರು.
 
 
 
 
 
 
 
 
 
 
 

Leave a Reply