ರೋಟರಿ ಜಿಲ್ಲಾ ಸಮ್ಮೇಳನ ‘ರಾಜಪರ್ವ’ ಉದ್ಘಾಟನೆ  

ರೋಟರಿಜಿಲ್ಲೆ ೩೧೮೨ ಇದರ ಜಿಲ್ಲಾ ಸಮ್ಮೇಳನ ‘ರಾಜಪರ್ವ’ ​ಶನಿವಾರದಂದು ​ ಉಡುಪಿಯ ಅಮೃತ್‌ಗಾರ್ಡನ್‌ನಲ್ಲಿ ಶ್ರೀ ಅದೃಶ್ಯ ಕಾಡ ಸಿದ್ದೇಶ್ವರ ಸ್ವಾಮೀಜಿ, ಸಿದ್ದಗಿರಿ, ಕನ್ನೇರಿ ಮಠ,​ ​ಕೊಲ್ಲಾಪುರ ಇವರು ಉದ್ಘಾಟಿಸಿದರು. ಸೃಷ್ಠಿಯಲ್ಲಿರುವ ವಿಷಮತೆಯನ್ನು ದೂರಗೊಳಿಸಿ​ ​ಸಮತೆಯನ್ನು ಸಾಧಿಸಲು, ಸಶಕ್ತರು ಅಶಕ್ತರನ್ನು ಮೇಲೆತ್ತಲು ಭಗವಂತ​ ​ಮನುಷ್ಯನನ್ನು ಸೃಷ್ಠಿಸಿದ. 
 
ಜಗತ್ತಿಗೆ ಮಾದರಿಯಾದ ರಾಜಕೀಯ ವ್ಯವಸ್ಥೆ ನಮ್ಮದೇಶದಲ್ಲಿತ್ತು. ರಾಜನಲ್ಲಿ ಸಂಗ್ರಹಿತವಾದ ತೆರಿಗೆ ಆಡಳಿತ ವಿನಿಯೋಗದ ನಂತರ ಮತ್ತೆ​ ​ಸಮಾಜ​ ​ಮುಖಿಯಾಗಿ ಹರಿಯಬೇಕು ಎನ್ನುವ ದೃಷ್ಠಿಯಲ್ಲಿ ಲೋಕಕಲ್ಯಾಣಾರ್ಥ ಹೋಮ​ ​ಹವನಗಳು ಜರಗುತ್ತಿದ್ದವು. ಈ ಜಗತ್ತು ಕೊಟ್ಟವನನ್ನು ಎಂದಿಗೂ ಸ್ಮರಿಸುತ್ತದೆ​ ​ಹೊರತು ತನ್ನ ಸ್ವಂತಕ್ಕಾಗಿ ಕೂಡಿಡುವ ಶ್ರೀಮಂತನನ್ನು ಅಲ್ಲ. 
 
ರೋಟರಿ ಬಂಧುಗಳು​ ​ವಿಶ್ವದ ಸೇವೆಯ ಕೈಂಕರ್ಯವನ್ನು ನಡೆಸುತ್ತಿರುವುದು, ತಮ್ಮ ಸ್ವಂತ​ ​ದುಡಿಮೆಯ ಒಂದು ಬಾಗವನ್ನು ಸೇವೆಯ ರೂಪದಲ್ಲಿ ವಿನಿಯೋಗಿ​ ​ಸುತ್ತಿರುವುದು​ ​ನಿಜವಾಗಿಯೂ ಅಭಿನಂದನೀಯ, ಇಂತಹ ಸಮ್ಮೇಳದ ಮೂಲಕ ಇನ್ನಷ್ಟು ಚಿಂತನ​~​​ಮಂಥನಗಳು ನಡೆಯಲಿ ಎಂದು ಆಶೀರ್ವಚಿಸಿದರು. 
 
ರೊಟರಿ ಜಿಲ್ಲಾ ಗವರ್ನರ್ ಬಿರಾಜಾರಾಮ್ ಭಟ್ ಮಾತನಾಡಿ ಸ್ನೇಹ ಒಡನಾಟದೊಂದಿಗೆ ಪ್ರಾರಂಭವಾದ ರೋಟರಿ ಇಂದು​ ​ಸೇವೆಯ ಮೂಲಕ ಜಗತ್ತನ್ನು ಆವರಿಸಿದೆ. ‘ರಾಜಪರ್ವ’ ಸಂಘಟಿಸುವಲ್ಲಿ ಕಾರಣೀಕರ್ತರಾದ​ ​ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.​ ​ಅಂತಾ​ರಾಷ್ಟ್ರೀಯ ರೋಟರಿ ಅಧ್ಯಕ್ಷರ ಪ್ರತಿನಿಧಿ ಟಿಎನ್ ಸುಬ್ರಹ್ಮಣಿಯವರು ಸಮುದಾಯಕ್ಕಾಗಿ​ ​ಸೇವೆ​ ​ಸಲ್ಲಿಸುತ್ತಿರುವ ರೋಟರಿಯ ಮಹತ್ವದ ಬಗ್ಗೆ ತಿಳಿಸಿದರು. 
 
ಮುಖ್ಯ​ ​ಅತಿಥಿಯಾಗಿ ಉಡುಪಿ ನಗರಸಭಾಧ್ಯಕ್ಷೆ ಶ್ರೀಮತಿ ಸುಮಿತ್ರ ನಾಯಕ್ ಭಾಗವಹಿಸಿದ್ದರು.​ ​ಕರ್ನಾಟಕ ರಾಜ್ಯ ಹಿಂದುಳಿದ ಆಯೋಗದ ಅಧ್ಯಕ್ಷ​ ​ಕೆ ಜಯಪ್ರಕಾಶ್ ಹೆಗ್ಡೆ “ರಾಜಕೀಯ​ ​ಮತ್ತು ಸೇವೆ”ಯ ಬಗ್ಗೆ ತಿಳಿಸಿದರು. ಡಾ| ವೀಣಾ ಬನ್ನಂಜೆಯವರು “ಸೇವೆ ಮತ್ತು​ ​ಸಂಕಲ್ಪ” ವಿಷಯದ ಬಗ್ಗೆ ಮಾತನಾಡಿದರು.​ ​ ವೇದಿಯಲ್ಲಿ ರೋಟರಿ ಜಿಲ್ಲಾ ಪ್ರಥಮಮಹಿಳೆ ವರದಾಂಬ ಆರ್ ಭಟ್, ಮಾಜಿ ರೋಟರಿ ಜಿಲ್ಲಾ ಗವರ್ನರ್ ಅಭಿನಂದನ್ ಶೆಟ್ಟಿ​​,​ ​ಭರ​ತೇಶ್ ಅಧಿರಾಜ್, ಜ್ಞಾನ ವಸಂತ ಶೆಟ್ಟಿ, 
 
​​ನಿಯೋಜಿತ ಜಿಲ್ಲಾ ಗವರ್ನರ್ ಎಂ.ಜಿ.ರಾಮ​ಚಂದ್ರ ಮೂರ್ತಿ, ಸಮ್ಮೇಳನ ಕಾರ್ಯದರ್ಶಿ ಬಿ.ವಿ. ​ಲಕ್ಷ್ಮೀ  ನಾರಾಯಣ್, ಹಾಗೂ ಕೃಷ್ಣ​ ​ಕಾಂಚನ್, ಡಾ| ಕೆ. ಸುರೇಶ್ ಶೆಣೈ, ಅತಿಥ್ಯವನ್ನು ವಹಿಸಿರುವ ರೋಟರಿ ಕಲ್ಯಾಣಪುರ ​ಅಧ್ಯಕ್ಷ ಡೆಸ್ಮಂಡ್ ಎಚ್ ವಾಚ್, ಕಾಯದರ್ಶಿ ವಿಲಿಯಂ ಅಂದ್ರಾದೆ.
ಸಹಾಯಕ​ ​ಗವರ್ನರ್‌ಗಳಾದ ಡಾ| ಎಚ್. ನಾಗಭೂಷನ್ ಉಡುಪ, ಸುರೇಶ್ ಬೆಲೂರು, ದೇವದಾಸ​ ​ಶೆಟ್ಟಿಗಾರ್, ಆನಂದ ಉದ್ಯಾವರ್, ನವೀನ್ ಅಮೀನ್, ಕೆ.ಬಿ. ಪ್ರಸನ್ನ, ಬಿ.ಎನ್ ಸು​​ರೇಶ್, ಕೆ.ಪಾಲಾಕ್ಷ, ಎನ್.ಎಸ್.ಶ್ರೀಧರ್, ಡಾ. ನಂದಕಿಶೋರ್ ಯು.ಕೆ. ಉಪಸ್ಥಿತರಿದ್ದರು. ಆಡಳಿತ​ ​ಕಾರ್ಯದರ್ಶಿ ಅಲೆನ್ ವಿನಯ್ ಲೂವಿಸ್ ವಂದಿಸಿದರು​. ಸಮ್ಮೇಳನ​ ಸಮಿತಿ  ​ಅಧ್ಯಕ್ಷ ಆನಂದ ಶೆಟ್ಟಿ ಸ್ವಾಗತಿಸಿದರು.​​
 
 
 
 
 
 
 
 
 
 
 

Leave a Reply