ರೋಟರಿ ಕ್ಲಬ್ ಗಂಗೊಳ್ಳಿ ವತಿಯಿಂದ ಕಾರ್ಗಿಲ್ ವಿಜಯೋತ್ಸವ ದಿನಾಚರಣೆ

 ಸೈನಿಕರಾಗುವ ನಿಟ್ಟಿನಲ್ಲಿ ಮಕ್ಕಳಿಗೆ ಚಿಕ್ಕಂದಿನಿಂದಲೇ ಅರಿವು ಮೂಡಿಸಬೇಕು ಆ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಹೆಚ್ಚು ಹೆಚ್ಚು ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಭಾರತೀಯ ಗಡಿ ಭದ್ರತಾ ಪಡೆ ಕಮಾಂಡೋ ಪ್ರದೀಪ್ ಖಾರ್ವಿ ಹೇಳಿದರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಲೈಬ್ರರಿ ಹಾಲಿನಲ್ಲಿ ರೋಟರಿ ಕ್ಲಬ್ ಗಂಗೊಳ್ಳಿ ವತಿಯಿಂದ ನಡೆದ ಕಾರ್ಗಿಲ್ ವಿಜಯೋತ್ಸವ ದಿನಾಚರಣೆ ಮತ್ತು ಕಾರ್ಗಿಲ್ ಹುತಾತ್ಮರ ಬಲಿದಾನ ಸ್ಮರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು. ರೋಟರಿ ಕ್ಲಬ್ ಅಧ್ಯಕ್ಷ ಸುಗುಣ ಆರ್ ಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಂದರ್ಭದಲ್ಲಿ ಜ್ಯೋತಿ ಬೆಳಗಿಸಿ ಪುಷ್ಪಾರ್ಚನೆಯ ಮೂಲಕ ಕಾರ್ಗಿಲ್ ಹುತಾತ್ಮರನ್ನು ಸ್ಮರಿಸಲಾಯಿತು.ರೋ. ಟಿ ದಿನಕರ್ ಶಾನುಭಾಗ್ ಕಾರ್ಗಿಲ್ ಹುತಾತ್ಮರಿಗೆ ನುಡಿ ನಮನವನ್ನು ಸಲ್ಲಿಸಿದರು ಝೋನ್ ಒಂದರ ವಲಯ ಸೇನಾನಿಗಳಾದ ರೋ.ಪ್ರವೀಣ್ ಕುಮಾರ್ ಶೆಟ್ಟಿ ಮತ್ತು ರೋ ಪೂರ್ಣಿಮಾ ಭವಾನಿ ಶಂಕರ್, ರೋಟರಿ ಕ್ಲಬ್ ಸನ್ ರೈಸ್ ಕುಂದಾಪುರದ ಅಧ್ಯಕ್ಷರಾದ ಬಿ ಎಂ ಚಂದ್ರಶೇಖರ್ ಮತ್ತು ಸಹಕಾರ್ಯದರ್ಶಿ ಶಿವಾನಂದ ಬಿ ಎಸ್, ಮೊದಲಾದವರು ಉಪಸ್ಥಿತರಿದ್ದರು ಕಾರ್ಯಕ್ರಮದಲ್ಲಿ ಕಮಾಂಡೋ ಪ್ರದೀಪ್ ಖಾರ್ವಿ ಅವರನ್ನು ಸನ್ಮಾನಿಸಲಾಯಿತು. ರೋಟರಿ ಕ್ಲಬ್ ಸದಸ್ಯ ಲಿಫ್ಟನ್ ಒಲಿವೆರಾ ಅವರ ಜನ್ಮ ದಿನಾಚರಣೆಯನ್ನು ನಡೆಸಲಾಯಿತು. ಚೇರ್ಮನ್ ಕ್ಲಬ್ ಸರ್ವಿಸ್ ರೋ.ಕೃಷ್ಣ ಪೂಜಾರಿ ಸನ್ಮಾನಿತರ ಪರಿಚಯ ಮಾಡಿದರು ರೋಟರಿ ಕ್ಲಬ್ ಗಂಗೊಳ್ಳಿ ಕಾರ್ಯದರ್ಶಿ ರೋ.ಚಂದ್ರಕಲಾ ತಾಂಡೇಲ ಕಾರ್ಯಕ್ರಮ ನಿರೂಪಿಸಿದರು. 

Leave a Reply