ರೋಟರಿ ಹಂಗಾರಕಟ್ಟೆ ಸಾಸ್ತಾನ ವತಿಯಿಂದ ಗುಂಡ್ಮಿ ಹೈಸ್ಕೂಲ್‌ಗೆ ಪೀಠೋಪಕರಣ ಕೊಡುಗೆ

ಕೋಟ: ಹಂಗಾರಕಟ್ಟೆ ಸಾಸ್ತಾನ ರೋಟರಿ ಕ್ಲಬ್ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಂಡ್ಮಿ ಇಲ್ಲಿಗೆ ಜಿಲ್ಲಾ ಗ್ರಾಂಟ್ ನಂ 2232052 ಅಡಿಯಲ್ಲಿ ಪ್ರಾಯೋಜಿತವಾದ ರೂ. 18000/- ಮೌಲ್ಯದ ಪೀಠೋಪಕರಣಗಳನ್ನು ನಿಕಟಪೂರ್ವ ಗವರ್ನರ್ ಬಿ .ರಾಜಾರಾಮ್ ಭಟ್ ಹಸ್ತಾಂತರಿಸಿದರು .
ಈ ಸಂದರ್ಭ ರೋಟರಿ ವಲಯ 3 ರ ಸಹಾಯಕ ಗವರ್ನರ್ ಕೆ.ಪದ್ಮನಾಭ ಕಾಂಚನ್, 2022-23 ರ ನಿಯೋಜಿತ ಜಿಲ್ಲಾ ಗವರ್ನರ್ ಡಾ. ಜಯ ಗೌರಿ ಹಾಗೂ 24-25 ರೊ ಸಾಲಿನ ಜಿಲ್ಲಾ ಗವರ್ನರ್ ನೇಮಕಗೊಂಡ. ಸಿ . ಎ. ದೇವಾನಂದ್, ಶಾಲಾ ಮುಖ್ಯೋಪಾಧ್ಯಾಯಿನಿ ಉಷಾ ಪ್ರಭಾಕರ್, ಎಸ್ಡಿಎಂಸಿ ಅಧ್ಯಕ್ಷ ಮಲ್ಲಿಕಾ ಕೆ ಆಚಾರ್ , ಸದಸ್ಯ ಮನೋಜ್ ಕುಮಾರ್ ರೋಟರಿ ಕಾರ್ಯದರ್ಶಿ ವಿಘ್ನೇಶ್ವರ ಅಡಿಗ, ಗಣೇಶ್ .ಜಿ. ಉಪಸ್ಥಿತರಿದ್ದರು ರೋಟರಿ ಅಧ್ಯಕ್ಷೆ ಯಶೋದಾ ಸಿ ಹೊಳ್ಳ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು.

Leave a Reply