Janardhan Kodavoor/ Team KaravaliXpress
24.6 C
Udupi
Thursday, June 30, 2022
Sathyanatha Stores Brahmavara

ರೋಟರಿ ಕ್ಲಬ್ ಕಲ್ಯಾಣಪುರದ ವತಿಯಿಂದ ಶಾಲೆಗಳಿಗೆ ಕೊಡುಗೆ:

ಸಂತ ಜೋಸೆಫ್ ಕನ್ನಡ ಮಾಧ್ಯಮ ಶಾಲೆ ಕಲ್ಯಾಣಪುರಕ್ಕೆ ರೋಟರಿ ಯೋಜನೆಯಡಿ ವಿದ್ಯಾರ್ಥಿಗಳ ಉಪಯೋಗಕ್ಕಾಗಿ ರೂ.36,300 ವೆಚ್ಚದಲ್ಲಿ ಕೈತೊಳೆಯುವ ವ್ಯವಸ್ಥೆಯನ್ನು ನಿರ್ಮಿಸಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಹೆರಾಲ್ಡ್ ಡಿಸೋಜ ಮತ್ತಿತರ ಗಣ್ಯರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.

ಅಲ್ಲದೆ ಹಿಂದೂ ಹಿರಿಯ ಪ್ರಾಥಮಿಕ ಶಾಲೆ ಕಲ್ಯಾಣಪುರಕ್ಕೆ ಶಾಲಾ ಬಿಸಿ ಊಟದ ವ್ಯವಸ್ಥೆಗೆ ಅಗತ್ಯವಿದ್ದ ರೂ.11,500 ಮೌಲ್ಯದ ಗ್ಯಾಸ್ ಒಲೆ, ಹಾಗೂ ಕ್ರೀಡಾ ಉಪಕರಣಗಳನ್ನು ವಿತರಿಸಲಾಯಿತು.

ಆಯಾ ಶಾಲೆಯಲ್ಲಿ ಜರುಗಿದ ಎರಡು ಪ್ರತ್ಯೇಕ ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲಾ ನಿಕಟಪೂರ್ವ ಗವರ್ನರ್ ರೋ ರಾಜಾರಾಮ ಭಟ್, ವಲಯದ ಸಹಾಯಕ ಗವರ್ನರ್ ರೋ. ಪದ್ಮನಾಭ ಕಾಂಚನ್ , ವಲಯ ಸೇನಾನಿ ರೋ ಬ್ರಾಯನ್ ಡಿಸೋಜ ರವರು ಭಾಗವಹಿಸಿ ದ್ದು ಸಂಧರ್ಭೋಚಿತವಾಗಿ ಮಾತನಾಡಿದರು. ಅಧ್ಯಕ್ಷತೆಯನ್ನು ರೋ. ಶಂಭು ಶಂಕರ್ ರವರು ವಹಿಸಿದ್ದರು. ಕಾರ್ಯದರ್ಶಿ ರೋ ಪ್ರಕಾಶ್ ರವರು, ರೋ ಅಲೆನ್ ಲೂವಿಸ್, ರಾಮ ಪೂಜಾರಿ, ದಿವಾಕರ್ ಮತ್ತಿತರರು ಉಪಸ್ಥಿತರಿದ್ದರು. ಶಾಲಾ ಅಧ್ಯಾಪಕರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!