ವಲಯ ಪ್ರಶಸ್ತಿ ವಿಜೇತ ಮಣಿಪಾಲ ಟೌನ್ ರೋಟರಿ

ಕಟಪಾಡಿ ಎಸ್.ವಿ.ಎಸ್. ಕ್ರೀಡಾಂಗಣದಲ್ಲಿ ನಡೆದ ರೋಟರಿ ವಲಯ 4ರ ಕ್ರೀಡಾ ಸ್ಪರ್ಧೆಗಳಲ್ಲಿ ಮಣಿಪಾಲ ಟೌನ್ ರೋಟರಿ ಕ್ಲಬ್ ಸಮಗ್ರ ಪ್ರಶಸ್ತಿಯನ್ನು ಬಾಚಿಕೊಂಡಿತು. ಕ್ರಿಕೆಟ್, ಹಗ್ಗಜಗ್ಗಾಟ, ವಾಲಿಬಾಲ್, ಕ್ಯಾರಮ್, ತ್ರೋಬಾಲ್, ಶಟ್ಲ್ ಬ್ಯಾಡಿಮಿಂಟನ್, ಚೆಸ್ಸ್ ವಿಭಾಗದಲ್ಲಿ ಪ್ರಥಮ ಸ್ಥಾನಿಯಾಗಿ ಹೊಸ ಧಾಖಲೆಯನ್ನು ನಿರ್ಮಿಸಿತು.

ಹಾಗೆಯೇ ಇನ್ನಿತರ ಕ್ರೀಡೆಗಳಲ್ಲಿ ಕ್ಲಬ್ಬಿನ ಸದಸ್ಯರು ಹೆಚ್ಚಿನ ಪ್ರಶಸ್ತಿಗಳನ್ನು ಪಡೆದುಕೊಂಡು ಜಿಲ್ಲಾ ಮಟ್ಟದಲ್ಲಿ ಸ್ಪರ್ಧಿಸಲು ಅವಕಾಶವನ್ನು ಪಡೆಯಿತು.

ಮಾಜಿ ಗವರ್ನರ್ ರೋ. ರಾಜರಾಮ ಭಟ್, ನಿಯೋಜಿತ ಗವರ್ನರ್ ರೋ. ಡಾ. ಜಯಗೌರಿ ಹೆಚ್., ಎಜಿ. ಡಾ. ಸುರೇಶ್ ಶೆಣೈ ಪ್ರಶಸ್ತಿಗಳನ್ನು ವಿತರಿಸಿ ಅಭಿನಂದಿಸಿದರು.

ಕ್ರೀಡಾಕೂಟ ವ್ಯವಸ್ಥೆಯನ್ನು ಉದ್ಯಾವರ ಮತ್ತು ಕಟಪಾಡಿ ರೋಟರಿ ಕ್ಲಬ್ ಸಂಸ್ಥೆಯವರು ವಹಿಸಿಕೊಂಡು ಯಶಸ್ವಿಯಾಗಿ ನಡೆಸಿಕೊಟ್ಟರು.

 
 
 
 
 
 
 
 
 
 
 

Leave a Reply