Janardhan Kodavoor/ Team KaravaliXpress
26.6 C
Udupi
Thursday, August 11, 2022
Sathyanatha Stores Brahmavara

ರಾಮಕ್ಷತ್ರಿಯ ಸಂಘ (ರಿ.) ಉಡುಪಿ​ ​41ನೇ ವಾರ್ಷಿಕ ಮಹಾಸಭೆ ಹಾಗೂ​ ಸಾಧಕರಿಗೆ ಸನ್ಮಾನ

ರಾಮಕ್ಷತ್ರಿಯ ಸಂಘ (ರಿ.) ಉಡುಪಿ, ಯುವಸಂಘ ಮತ್ತು​ ಮಹಿಳಾ ಮಂಡಲಗಳ ೪೧ನೇ ವಾರ್ಷಿಕ ಮಹಾಸಭೆಯು ಆದಿತ್ಯವಾರ ಸಂಘದ ಸಭಾಭವನ ಉಪ್ಪೂರಿನಲ್ಲಿ​ ನಡೆಸಲಾಯಿತು. ಸಂಘದ ಅಧ್ಯಕ್ಷ ಕೆ.ಟಿ. ನಾಯ್ಕ್ ಇವರ​ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಸಂಘದ​ ಗೌರವಾಧ್ಯಕ್ಷರಾದ ಶ್ರೀ ಕೆ. ರವಿರಾಜ್ ಇವರು ಉದ್ಘಾಟಿಸಿ​ ಮಾತನಾಡುತ್ತಾ ಸಂಘದ ಬೆಳವಣಿಗೆಯಲ್ಲಿ ಯುವಕರ​ ಪಾತ್ರ ಅತ್ಯಂತ ಪ್ರಮುಖವಾದದ್ದು, ಸಂಘದ ಅಭಿವೃದ್ಧಿಗೆ​ ಎಲ್ಲರೂ ಒಗ್ಗಟ್ಟಿನ ಸಹಕಾರ ನೀಡಬೇಕೆಂದು ಶುಭ​ ನುಡಿದರು.ಕೋಶಾಧಿಕಾರಿಗಳಾದ  ಜಯಂತ್ ಕುಮಾರ್,  ರಾಮದಾಸ್​ ಪಿ. ಮತ್ತು  ಚಂಚಲಾಕ್ಷಿ ವಾರ್ಷಿಕ ಲೆಕ್ಕಪತ್ರವನ್ನು​ ಸಭೆಯಲ್ಲಿ ಮಂಡಿಸಿದರು.​ ವೇದಿಕೆಯಲ್ಲಿ ಉಪಸ್ಥಿತರಿದ್ದ  ಕರುಣಾಕರ್, ಟ್ರಸ್ಟ್​ ಅಧ್ಯಕ್ಷರು,  ಕೃಷ್ಣ ನೀಲಾವರ ಅಧ್ಯಕ್ಷರು​ ಯುವಸಂಘ,  ಮಂಜುಲಾ ಜಯಕರ್ ಅಧ್ಯಕ್ಷರು​ ಮಹಿಳಾ ಮಂಡಲ ಇವರುಗಳು ಮಾತನಾಡುತ್ತಾ ಸಹಕಾರನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತಾ ಮುಂದಿನ​ ದಿನಗಳಲ್ಲಿ ಇನ್ನೂ ಹೆಚ್ಚಿನ ಸಹಕಾರ ನೀಡಬೇಕೆಂದು ಮನವಿ​ ಮಾಡಿದರು.​​

ಪ್ರವೀಣ್ ಕುಮಾರ್ ಗುರ್ಮೆ ಅಧ್ಯಕ್ಷರು​ ರಾಮಾಂಜನೇಯ ಸಭಾಭವನ ನಿರ್ಮಾಣ ಸಮಿತಿ ಇವರುಮಾತನಾಡುತ್ತಾ ಸಭಾಭವನದ ಶೀಘ್ರ ಉದ್ಘಾಟನೆಗೆ ಸಮಾಜ ಬಾಂಧವರು ತಮ್ಮಿಂದಾದ ಸಹಕಾರ ನೀಡಬೇಕೆಂದು ಮನವಿ​ ಮಾಡಿದರು.

ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ​ ಸಲ್ಲಿಸಿ ಪ್ರಶಸ್ತಿ ಪುರಸ್ಕೃತರಾದ ಮತ್ತು ವಿವಿಧಹುದ್ದೆಗಳಿಗೆ ಆಯ್ಕೆಯಾದ ಸಮಾಜದ ಗೌರವಾನ್ವಿತರಾದ​ ಪ್ರವೀಣ್ ಕುಮಾರ್ ಗುರ್ಮೆ,  ಕರುಣಾಕರ ರಾವ್,​ ದೇವದಾಸ್ ಉಪ್ಪೂರು,  ಆನಂದ ಸೇರ್ವೆಗಾರ್, ಬಾಲಕೃಷ್ಣ ಮದ್ದೋಡಿ,  ಶ್ರೀಧರ್ ಸಾಸ್ತಾನ, ಶಿವಾನಂದ​ ನಾಯ್ಕ್ ಇಂದ್ರಾಳಿ, ಹೂವಯ್ಯ ಸೇರ್ವೆಗಾರ್​ ಇವರುಗಳನ್ನು ಸನ್ಮಾನಿಸಲಾಯಿತು. ​ 

ಸನ್ಮಾನಿತರು​ ಮಾತನಾಡುತ್ತಾ ಸಮಾಜ ನೀಡುವ ಈ ಗೌರವ ನಮಗೆ​ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲು ಆತ್ಮ​ ಬಲ ತುಂಬಿ ಬಂದಿದೆ. ಅದಕ್ಕಾಗಿ ತಾವು ಸದಾ ಸಮಾಜಕ್ಕೆ​ ಚಿರಋಣಿಗಳಾಗಿದ್ದೇವೆ​ ​ಎಂದು ತಿಳಿಸಿದರು.​ 

ಮಾಜಿ ಅಧ್ಯಕ್ಷ ಶ್ರೀ ಪರಮೇಶ್ವರ​ ಮದ್ದೋಡಿ ಸ್ವಾಗತಿಸಿದರು. ಸಂಘದ​ ಕಾರ್ಯದರ್ಶಿ​ ​ಶ್ರೀ ಜಯಪ್ರಕಾಶ್ ತೆಂಕಬೆಟ್ಟು, ಶ್ರೀ​ ಜಯಕರ್ ಉಪ್ಪೂರು ಮತ್ತು ಶ್ರೀಮತಿ ವಿಜಯ​ಲಕ್ಶ್ಮೀ ಮಾಧವ್ ವಾರ್ಷಿಕ ವರದಿಯನ್ನು ತಿಳಿಸಿದರು.​​ ಜಲಪುಷ್ಪ  ಪ್ರಾರ್ಥ​ಸಿದರು​.  ಬಾಲಗಂಗಾಧರ ರಾವ್ ಕೆ. ತಿಳುವಳಿಕೆ ಪತ್ರ​ ವಾಚಿಸಿದರು. ಶೋಭಾ ಜಯಪ್ರಕಾಶ್ನಿರೂಪಿಸಿದರು. ಜೊತೆ​ ಕಾರ್ಯದರ್ಶಿ​ ​ಜಯಪ್ರಕಾಶ್ ಕುಮಾರ್ ಧನ್ಯವಾದ​ವಿತ್ತರು. 
 
 
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!