ಉಡುಪಿಯಲ್ಲಿ “RAHLA – 2022” ಎಂಬ ರೋಟರಿ ಉನ್ನತ ನಾಯಕತ್ವ ತರಬೇತಿ ಕಾರ್ಯಾಗಾರ

ರೋಟರಿ ಉಡುಪಿ ಮತ್ತು ರೋಟರಿ ಜಿಲ್ಲೆ 3182 ರ ವಲಯ 4 ರ ಇತರ ಒಂಬತ್ತು ಕ್ಲಬ್ ಗಳ ಸಂಯುಕ್ತ ಆಶ್ರಯದಲ್ಲಿ ಒಂದು ದಿನದ ರೋಟರಿ ಜಿಲ್ಲಾ ಮಟ್ಟದ ‘ರೋಟರಿ ಉನ್ನತ ನಾಯಕತ್ವ ತರಬೇತಿ ಕಾರ್ಯಾಗಾರ’ ಇದೇ ದಿನಾಂಕ 11ನೇ ಸೆಪ್ಟೆಂಬರ್ 2022 ರಂದು ಉಡುಪಿಯ ಪುರಭವನದಲ್ಲಿ ನಡೆಯಲಿದೆ.

ಎನೈಟಿಕೆ – ಸುರತ್ಕಲ್ ಇಲ್ಲಿಯ ವಿಶ್ರಾಂತ ನಿರ್ದೇಶಕ ಪ್ರೊ. ಉದಯಕುಮಾರ್ ಆರ್. ವೈ. ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ, “ನಾಯಕತ್ವದಲ್ಲಿ ಸಾಮಾಜಿಕ ಜವಾಬ್ದಾರಿ” ಎಂಬ ವಿಷಯದ ಬಗ್ಗೆ ದಿಕ್ಸೂಚಿ ಭಾಷಣ ಮಾಡಲಿರುವರು. ಸಮಾರಂಭದಲ್ಲಿ ರೋಟರಿ ಗವರ್ನರ್ ರೊ.ಡಾ. ಜಯಗೌರಿ, ಮಾಜಿ ಗವರ್ನರ್ ಗಳಾದ ರೊ. ಅಭಿನಂದನ್ ಎ. ಶೆಟ್ಟಿ, ರೊ. ಡಿ‌. ಎಸ್. ರವಿ, ರೊ. ಬಿ. ಎನ್. ರಮೇಶ್, ಮುಂದಿನ ಸಾಲಿನ ಗವರ್ನರ್ ಗಳಾದ – ರೊ. ಬಿ.ಸಿ. ಗೀತಾ ಮತ್ತು ರೊ. ದೇವಾನಂದ್, ಸಹಾಯಕ ಗವರ್ನರ್ – ರೊ. ರಾಮಚಂದ್ರ ಉಪಾಧ್ಯಾಯ ಇವರು ಭಾಗವಹಿಸಲಿರುವರು.

ನಂತರ ನಡೆಯುವ ವಿವಿಧ ಗೋಷ್ಟಿಗಳಲ್ಲಿ ಜೇಸಿ ಸಂಸ್ಥೆಯ ಅಂತರಾಷ್ಟ್ರೀಯ ತರಬೇತುದಾರ – ಜೇಸಿ. ಪ್ತಮೋದ್ ಕುಮಾರ್ ಇವರು “ಕ್ರಿಯಾಶೀಲ ನಾಯಕತ್ವ” ದ ಬಗ್ಗೆ, ಲಯನ್ ‌ಸಂಸ್ಥೆಯ ಮಾಜಿ ಗವರ್ನರ್ – ಶ್ರೀಮತಿ ಕವಿತಾ ಶಾಸ್ತ್ರಿ ಇವರು “ಸ್ವಯಂಸೇವಾ ಸಂಸ್ಥೆಗಳಲ್ಲಿ ಮಹಿಳಾ ನಾಯಕತ್ವ” ದ ಬಗ್ಗೆ, “ರೋಟರಿಯಲ್ಲಿ ಕಾಣುವ ಜೀವನೋತ್ಸಾಹ” ಎಂಬುದರ ಬಗ್ಗೆ ಫ್ರೊ. ಎಮ್. ಬಾಲಕೃಷ್ಣ ಶೆಟ್ಟಿ ಯವರು ವಿಷಯಗಳನ್ನು ಮಂಡಿಸಲಿರುವರು.

ಅಪರಾಹ್ನ, ಕರಾವಳಿ ಕರ್ನಾಟಕದ ಹೆಸರಾಂತ ನಿರೂಪಕಿ – ಶ್ರೀಮತಿ ಸೌಜನ್ಯ ಹೆಗ್ಡೆ ಅವರ ನಿರೂಪಣೆಯಲ್ಲಿ ನಡೆಯುವ ಚರ್ಚಾಗೋಷ್ಡಿಯಲ್ಲಿ “ರೋಟರಿಯಲ್ಲಿ ವೈವಿಧ್ಯತೆ, ಸಮಾನತೆ ಮತ್ತು ಒಳಗೊಳ್ಳುವಿಕೆ” ಎಂಬ ವಿಷಯದ ಬಗ್ಗೆ ರೋಟರಿ ಜಿಲ್ಲಾ ಗವರ್ನರ್ – ರೊ. ಡಾ. ಜಯಗೌರಿ, ರೋಟರಿ ಜಿಲ್ಲಾ ತರಬೇತುದಾರ ಮತ್ತು ಮಾಜಿ ಜಿಲ್ಲಾ ಗವರ್ನರ್ – ರೊ. ಅಭಿನಂದನ್ ಎ. ಶೆಟ್ಟಿ, ಮುಂದಿನ ವರ್ಷದ ರೋಟರಿ ಜಿಲ್ಲಾ ಗವರ್ನರ್ – ರೊ. ಬಿ. ಸಿ. ಗೀತಾ, ಯುನಿಯನ್‌ ಬ್ಯಾಂಕ್ ಆಫ್ ಇಂಡಿಯಾದ ಉಡುಪಿ ವಲಯ ಮುಖ್ಯಸ್ಥ – ರೊ. ಡಾ. ಎಚ್.ಟಿ. ವಾಸಪ್ಪ, ಟೀಚರ್ಸ್ ಕೋಪರೇಟಿವ್ ಬ್ಯಾಂಕ್ ನ ಅಧ್ಯಕ್ಷ – ರೊ. ಅಶೋಕ್ ಕುಮಾರ್ ಶೆಟ್ಟಿ ಮತ್ತು ರೋಟರಾಕ್ಟ ಜಿಲ್ಲಾ ಪ್ರತಿನಿಧಿ – ರೋಟರಾಕ್ಟರ್ ಮಹಾಲಸ ಕಿಣಿ ಇವರುಗಳು ಭಾಗವಹಿಸಲಿರುವರು ಎಂದು ಜಿಲ್ಲಾ ಸಭಾಪತಿ – ರೊ. ಜನಾರ್ದನ್ ಭಟ್ ಮತ್ತು ಇವೆಂಟ್ ಚೇರ್ಮನ್ – ರೊ. ಹೇಮಂತ್ ಯು. ಕಾಂತ್ ಅವರು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿರುತ್ತಾರೆ.

 
 
 
 
 
 
 
 
 
 
 

Leave a Reply