Janardhan Kodavoor/ Team KaravaliXpress
25.6 C
Udupi
Saturday, December 3, 2022
Sathyanatha Stores Brahmavara

ನಿಟ್ಟೂರು ಎಜುಕೇಶನಲ್ ಸೊಸೈಟಿಯ ಅಧ್ಯಕ್ಷರಾಗಿ ಕೆ. ರಘುಪತಿ ಭಟ್ ಪುನರಾಯ್ಕೆ

ನಿಟ್ಟೂರು ಎಜುಕೇಶನಲ್ ಸೊಸೈಟಿಯ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ 18,2020ನಡೆಯಿತು.ಇದರ ಅಧ್ಯಕ್ಷತೆಯನ್ನು ರಘುಪತಿ ಭಟ್‌ ವಹಿಸಿದ್ದರು.ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಭಾಸ್ಕರ್ ಡಿ. ಸುವರ್ಣ ಮಂಡಿಸಿದರು ಮತ್ತು ಕೋಶಾಧಿಕಾರಿ ಮುರಳಿ ಕಡೆಕಾರ್ ಪರಿಶೋಧಿತ ಲೆಕ್ಕಪತ್ರ ಮಂಡಿಸಿದರು. ಬಳಿಕ 2020-21ನೇ ಸಾಲಿಗೆ ನೂತನ ಆಡಳಿತ ಮಂಡಳಿಯನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಕೆ. ರಘುಪತಿ ಭಟ್ ಪುನರಾಯ್ಕೆಯಾದರೆ ಉಪಾಧ್ಯಕ್ಷರಾಗಿ ಎಸ್. ವಿ. ಭಟ್, ಎಂ. ಗಂಗಾಧರ ರಾವ್, ಯೋಗೀಶ್ಚಂದ್ರಾಧರ ಆಯ್ಕೆ ಆಗಿದ್ದಾರೆ. ಇನ್ನು ಕಾರ್ಯದರ್ಶಿಯಾಗಿ ಮುರಳಿ ಕಡೆಕಾರ್, ಜತೆ ಕಾರ್ಯದರ್ಶಿಯಾಗಿ ಪಿ. ದಿನೇಶ್ ಪೂಜಾರಿ ಹಾಗೂ ಕೋಶಾಧಿಕಾರಿಯಾಗಿ ಅನಸೂಯ ಆಯ್ಕೆಗೊಂಡಿದ್ದಾರೆ.

ಸದಸ್ಯರಾಗಿ ಕೆ. ಎ. ಪಿ. ಭಟ್, ಭಾಸ್ಕರ ಡಿ ಸುವರ್ಣ, ಕೆ. ಸುಬ್ರಹ್ಮಣ್ಯ ಭಟ್, ಯು. ರವಿಕಾಂತ, ಆಲ್ಫ್ರೆಡ್ ಕರ್ನೇಲಿಯೋ, ಸಂತೋಷ ಕರ್ನೇಲಿಯೋ, ರಾಮಚಂದ್ರ ಆಚಾರ್, ಯು. ಬಿ. ಅಜಿತ್ ಕುಮಾರ್, ಕೃಷ್ಣಮೂರ್ತಿ ಭಟ್, ಪಿ. ಪರಶುರಾಮ ಶೆಟ್ಟಿ, ಪ್ರಭಾಕರ ಪೂಜಾರಿ, ಪ್ರಭಾಕರ ಜಿ, ವಸಂತ ಎನ್, ಪ್ರೇಮಾನಂದ ಆಚಾರ್ಯ ಆಯ್ಕೆಯಾಗಿದ್ದಾರೆ.೨೦೨೦-೨೧ನೇ ಸಾಲಿಗೆ ಲೆಕ್ಕ ಪರಿಶೋಧಕರಾಗಿ ಸಿ.ಎ. ಪ್ರದೀಪ್ ಜೋಗಿಯವರನ್ನು ನೇಮಿಸಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಶಾಲೆಯ ಸ್ಥಾಪಕ ಸದಸ್ಯರಾದ ಪಿ. ಎಂ. ರಾಮಕೃಷ್ಣ ಆಚಾರ್ ಮತ್ತು ಪಿ. ರಾಮ ಭಟ್ ಹಾಗೂ ಲೆಕ್ಕ ಪರಿಶೋಧಕರಾದ ಬಿ. ಡಿ. ಶೆಟ್ಟರ ನಿಧನಕ್ಕೆ ಸಭೆಯಲ್ಲಿ ಗಾಢ ಸಂತಾಪ ಸೂಚಿಸಲಾಯಿತು.

ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕೆ. ರಘುಪತಿ ಭಟ್‌ರವರು ಕರೋನಾದ ನಡುವೆಯೂ 50ಎಕ್ರೆ ಹಡಿಲುಗದ್ದೆ ಬೇಸಾಯ ಮಾಡಿ ನಿಮ್ಮ ಸಂಸ್ಥೆಯ ಸುವರ್ಣ ಪರ್ವವನ್ನು ಅರ್ಥಪೂರ್ಣವಾಗಿ ಆಚರಿಸುವಂತಾಯಿತು. ಶಾಲೆಯ ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ಮುಂದಿನ ತಿಂಗಳೊಳಗೆ ಪೂರೈಸಿ, ಸಮಾಜ ಮೆಚ್ಚುವ ರೀತಿಯಲ್ಲಿ ಈ ಕನ್ನಡ ಮಾಧ್ಯಮ ಶಾಲೆಯನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ನುಡಿದರು. ದಿನೇಶ್ ಪಿ. ಪೂಜಾರಿ ಶಾಲೆಯ ಸುವರ್ಣ ಪರ್ವಕ್ಕೆ ೧ಲಕ್ಷ ರೂಪಾಯಿ ದೇಣಿಗೆಯನ್ನು ಅಧ್ಯಕ್ಷರಾದ ಕೆ. ರಘುಪತಿ ಭಟ್ ಇವರಿಗೆ ಹಸ್ತಾಂತರಿಸಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!