ಬೈಂದೂರು ಹಿರಿಯ ನಾಗರಿಕ ವೇದಿಕೆಗೆ ಕೆ.ಪುಂಡಲೀಕ ನಾಯಕ್ ರವರ ಸಾರಥ್ಯ

ಬೈಂದೂರು ಹಿರಿಯ ನಾಗರಿಕ ವೇದಿಕೆಯ 2023ರ ಮಾಸಿಕ ಸಭೆಯು ವೇದಿಕೆಯ ಅಧ್ಯಕ್ಷ ಎಂ. ಗೋವಿಂದ ಅವರ ಅಧ್ಯಕ್ಷತೆಯಲ್ಲಿ ಇಲ್ಲಿನ ಮಹಾಕಾಳಿ ದೇವಸ್ಥಾನದಲ್ಲಿ ನಡೆಯಿತು. ಅಧ್ಯಕ್ಷರು ಗತ ವರ್ಷದ ಕಾರ್ಯ ಚಟುವಟಿಕೆಗಳನ್ನು ಮೆಲುಕು ಹಾಕಿದರು. ಇದೇ ಸಂದರ್ಭದಲ್ಲಿ ಪ್ರಸ್ತುತ ವರ್ಷದ ಹೊಸ ಪದಾಧಿಕಾರಿಗಳ ಆಯ್ಕೆ ನಡೆಯಿತು . ವೇದಿಕೆಯ ಅಧ್ಯಕ್ಷರಾಗಿ ಸಾಹಿತಿ ಹಿರಿಯ ಸಹಕಾರಿ ಕೆ.ಪುಂಡಲೀಕ ನಾಯಕ್ ನಾಯ್ಕನಕಟ್ಟೆ ಅವರು ಅವಿರೋಧವಾಗಿ ಆಯ್ಕೆಯಾದರು . ಅವರ ಸಲಹೆ ಮತ್ತು ಸದಸ್ಯರೆಲ್ಲರ ಒಮ್ಮತದ ಸೂಚನೆಯಂತೆ ಗೌರವವಾಧ್ಯಕ್ಷರಾಗಿ ಎಂ. ಗೋವಿಂದ, ನಾಯಕನಕಟ್ಟೆ, ಸ್ಥಾಪಕಾಧ್ಯಕ್ಷರು ಹೆಚ್. ವಸಂತ ಹೆಗಡೆ, ಕಾರ್ಯದರ್ಶಿಯಾಗಿ ಕೆ. ಗೋವಿಂದ ಬಿಲ್ಲವ ತಗ್ಗರ್ಸೆ, ಉಪಾಧ್ಯಕ್ಷರಾಗಿ ಉದ್ಯಮಿ ಎನ್. ಜಗನ್ನಾಥ್ ಶೆಟ್ಟಿ ನಾಕಟ್ಟೆ ಬೈಂದೂರು, ಗೌರವ ಸಲಹೆಗಾರರಾಗಿ ಭಾಸ್ಕರ್ ಶೆಟ್ಟಿ, ಐ. ನಾರಾಯಣ್, ಈಶ್ವರ್ ಸೇರೆಗಾರ್, ಎಚ್. ರಾಮ ಸೇರೆಗಾರ್, ಕೆ. ಶಾರದಾ ಟೀಚರ್, ಸಂಜೀವ್ ಆಚಾರ್, ಎಂ .ಎನ್. ಸೇರೆಗಾರ್ ವೆಂಕಟೇಶ್ ಕಾರಂತ್ ಇವರನ್ನು ಆಯ್ಕೆ ಮಾಡಿ ವಿದ್ಯುಕ್ತವಾಗಿ ನೂತನಾಧ್ಯಕ್ಷ ಕಾರ್ಯದರ್ಶಿಗಳಿಗೆ ಅಧಿಕಾರವನ್ನು ಹಸ್ತಾಂತರಿಸಲಾಯಿತು. ಮುಂದಿನ ದಿನಗಳಲ್ಲಿ ಸದಸ್ಯರೆಲ್ಲರ ಸಹಕಾರದೊಂದಿಗೆ ಉತ್ತಮ ಸ್ನೇಹ- ಸೇವೆಯನ್ನು ಬೆಳೆಸಿ ಕೊಂಡು ವೇದಿಕೆಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದಾಗಿ ನೂತನಾಧ್ಯಕ್ಷರು ತಮ್ಮ ಮನದಾಳದ ಮಾತುಗಳನ್ನು ಆಡಿದರು. ಹೆಚ್. ರಾಮ ಸೇರೆಗಾರ್ ಕಾರ್ಯಕ್ರಮ ನಿರ್ವಹಿಸಿದರು .ನೂತನ ಕಾರ್ಯದರ್ಶಿ ಕೆ . ಗೋವಿಂದ ಬಿಲ್ಲವ ವಂದನಾರ್ಪಣೆ ಮಾಡಿದರು.

 
 
 
 
 
 
 

Leave a Reply