ಜೀವನದಲ್ಲಿ ನೂರಕ್ಕೆ ನೂರು ಪುಣ್ಯ ಫಲ ಪ್ರಾಪ್ತಿಯಾಗ ಬೇಕಾದರೆ ರಕ್ತದಾನ ಮಾಡಿ~ಪ್ರಮೋದ್ ಮಧ್ವರಾಜ್

ದಾನ ಕೊಟ್ಟವರಿಗೂ, ದಾನ ಪಡೆದವರಿಗೂ ಗೊತ್ತಿಲ್ಲದ ಏಕೈಕ ದಾನವೆಂದರೆ ರಕ್ತದಾನ. ಜೀವನದಲ್ಲಿ ನೂರಕ್ಕೆ ನೂರು ಪುಣ್ಯ ಫಲ ಪ್ರಾಪ್ತಿಯಾಗ ಬೇಕಾದರೆ ರಕ್ತದಾನ ಮಾಡಿ ಎಂದು ​ಮಾಜಿ ಸಚಿವ  ಪ್ರಮೋದ್ ಮಧ್ವರಾಜ್ ತನ್ನ ಹುಟ್ಟು ಹಬ್ಬದ ಪ್ರಯುಕ್ತ ಪ್ರಮೋದ್ ಮಧ್ವರಾಜ್ ಅಭಿಮಾನಿ ಬಳಗ ಹಮ್ಮಿಕೊಂಡ ರಕ್ತದಾನ ಶಿಬಿರವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ದಾನ ಧರ್ಮ ಮಾಡಿದ್ದು ಪ್ರಚಾರ ಮಾಡಬಾರದು. ರಕ್ತದಾನ ಮಾಡಿದವರಿಗೆ ಪುಣ್ಯಫಲ ಜಾಸ್ತಿಯಾಗುತ್ತೆ ಎಂದರು. ಮಣಿಪಾಲದ ಕೆ.ಎಮ್.ಸಿ ಆಸ್ಪತ್ರೆಯ ಬ್ಲಡ್ ಬ್ಯಾಂಕಿನಲ್ಲಿ ನೂರಾರು ಅಭಿಮಾನಿಗಳು ರಕ್ತದಾನವನ್ನು ಮಾಡುವುದರ ಮೂಲಕ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದರು

 
 
 
 
 
 
 
 
 
 
 

Leave a Reply