Janardhan Kodavoor/ Team KaravaliXpress
24.6 C
Udupi
Tuesday, July 5, 2022
Sathyanatha Stores Brahmavara

ಉಡುಪಿ ನಾರ್ತ್ ಶಾಲೆಗೆ ಯೂನಿಯನ್ ಬ್ಯಾಂಕಿನಿಂದ ಪಿಠೋಪಕರಣಗಳ ಕೊಡುಗೆ

ಉಡುಪಿ, ಜೂ.14: ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಉಡುಪಿ ನಾರ್ತ್ ಶಾಲೆಗೆ ಯೂನಿಯನ್ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಚೇರಿಯಿಂದ ಕೊಡುಗೆಯಾಗಿ ನೀಡಲಾದ ಸುಮಾರು ಎರಡು ಲಕ್ಷ ರೂ. ವೌಲ್ಯದ ಪೀಠೋಪಕರಣಗಳ ಹಸ್ತಾಂತರ ಕಾರ್ಯಕ್ರಮ ಮಂಗಳವಾರ ಶಾಲೆ ಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಯೂನಿಯನ್ ಬ್ಯಾಂಕ್ ಮಂಗಳೂರು ವಲಯ ಕಚೇರಿಯ ಮಹಾಪ್ರಬಂಧಕ ಡಾ.ರವೀಂದ್ರ ಬಾಬು ಮಾತನಾಡಿ, ನಮ್ಮ ಬ್ಯಾಂಕ್ ಕೇವಲ ವ್ಯವಹಾರಿಕವಾಗಿ ಕಾರ್ಯನಿರ್ವಹಿಸದೆ ಸಾಮಾಜಿಕ ಜವಾಬ್ದಾರಿಯನ್ನು ಕೂಡ ಪಾಲಿಸುತ್ತಿದೆ. ಶಾಲಾ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಪಿಠೋಪಕರಣಗಳನ್ನು ನೀಡಲಾಗಿದೆ ಎಂದು ತಿಳಿಸಿದರು.

ಬ್ಯಾಂಕಿನ ಉಡುಪಿ ಪ್ರಾದೇಶಿಕ ಕಚೇರಿಯ ಉಪ ಮಹಾಪ್ರಬಂಧಕ ಡಾ. ಎಚ್.ಟಿ.ವಾಸಪ್ಪ, ಸಹಾಯಕ ಮಹಾಪ್ರಬಂಧಕಿ ರೋಶ್ಲಿನ್ ರೊಡ್ರಿಗಸ್, ಹಾಜಿ ಅಬ್ದುಲ್ಲಾ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಡಾ.ಪಿ.ವಿ.ಭಂಡಾರಿ, ಉಪಾಧ್ಯಕ್ಷ ಸೈಯ್ಯದ್ ಸಿರಾಜ್ ಅಹ್ಮದ್, ಕೋಶಾಧಿಕಾರಿ ಇಕ್ಬಾಲ್ ಮನ್ನಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸುನೀತಾ ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕಿ ವಸಂತಿ ಬಿ. ಸ್ವಾಗತಿಸಿದರು. ಶಿಕ್ಷಕಿಯರಾದ ಶೋಭಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ರೇಣುಕಾ ಆಚಾರ್ಯ ವಂದಿಸಿದರು. ಬ್ಯಾಂಕಿನಿಂದ ಡೆಸ್ಕ್, ಬೆಂಚ್, ಬಟ್ಟಲು ಸ್ಟಾಂಡ್, ಬಟ್ಟಲು, ಲೋಟೆಗಳನ್ನು ಶಾಲೆಗೆ ನೀಡಲಾಯಿತು

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!