ದೇಶದಲ್ಲಿ ನೇಕಾರ ವೃತ್ತಿ ಮಾಡುವವರಿಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ರಾಜ್ಯ ಮತ್ತು ಸ್ಥಳೀಯ ಸಂಸ್ಥೆಗಳ ಮೂಲಕ ಹಲವಾರು ಜನಪ್ರಿಯ ಯೋಜನೆಗಳನ್ನು ಘೋಷಣೆ ಮಾಡಿ ಅನುಷ್ಠಾನ ಗೊಳಿಸಿದೆ ಮತ್ತು ಅವುಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸುವ ಜವಾಬ್ದಾರಿಯನ್ನು ರಾಜ್ಯ ಸರಕಾರ ಮತ್ತು ಸ್ಥಳೀಯ ಸಂಸ್ಥೆಗಳಿಗೆ ನೀಡಿದೆ. ನೇಕಾರ ಸಮುದಾಯಗಳು ಈ ಯೋಜನೆಗಳ ಲಾಭ ಪಡೆದು ಕೊಳ್ಳಲು ಸಂಘಟಿತವಾಗಿ ಹೋರಾಡಿ ಸರಕಾರಗಳ ಗಮನ ಸೆಳೆಯ ಬೇಕಾಗಿದೆ ಎಂದು ರಾಜ್ಯ ನೇಕಾರ ಸಮುದಾಯಗಳ ಒಕ್ಕೊಟದ ಕಾರ್ಯಾಧ್ಯಕ್ಷರಾದ ರಘು ಶ್ರೀನಿವಾಸ್ ಶೆಟ್ಟಿಗಾರ್ ಅಭಿಮತ ವ್ಯಕ್ತ ಪಡಿಸಿದರು. ಪದ್ಮಶಾಲಿ ನೇಕಾರ ಪ್ರತಿಷ್ಠಾನ ಉಡುಪಿ ಇದರ ಆಶ್ರಯದಲ್ಲಿ ಭಾನುವಾರ ಉಡುಪಿ ಕಿನ್ನಿಮೂಲ್ಕಿ ಶ್ರೀ ವೀರಭದ್ರ ದೇವಸ್ಥಾನದ ಸಭಾಂಗಣದಲ್ಲಿ ಹಾಲಿ, ಮಾಜಿ ಹಾಗು ಭವಿಷ್ಯದ ನೇಕಾರರ ಸಮ್ಮಿಲನ, ವಿಚಾರ ಸಂಕಿರಣ ಮತ್ತು ಗೌರವಾರ್ಪಣೆ ಯಶೋಗಾಥೆಗೊಂದು ಮುನ್ನುಡಿ – 2023 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಉಡುಪಿ ಕಿನ್ನಿಮುಲ್ಕಿ ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಪ್ರಭಾಶಂಕರ್ ಪದ್ಮಶಾಲಿ ಇವರು ದೀಪ ಬೆಳಗಿಸುವ ಮೂಲಕ ನೆರವೇರಿಸಿದರು.
ಉಡುಪಿ ಪ್ರಾಥಮಿಕ ನೇಕಾರ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಯ ಸದಸ್ಯರಾಗಿ ಆಯ್ಕೆಯಾದ ಪದ್ಮಶಾಲಿ ನೇಕಾರ ಪ್ರತಿಷ್ಠಾನದ ಸದಸ್ಯರಾದ ಗೀತಾ ಕೇಶವ್ ಶೆಟ್ಟಿಗಾರ್, ದೇವರಾಯ ಶೆಟ್ಟಿಗಾರ್, ಪ್ರೇಮಾನಂದ ಶೆಟ್ಟಿಗಾರ್, ಭಾರತಿ ಶೆಟ್ಟಿಗಾರ್, ಮಂಜುನಾಥ್ ಶೆಟ್ಟಿಗಾರ್, ಯಶೋಧ ಎಲ್ ಶೆಟ್ಟಿಗಾರ್, ಪಾಂಡುರಂಗ ಶೆಟ್ಟಿಗಾರ್, ಮಂಜುನಾಥ್ ಮಣಿಪಾಲ ಹಾಗು ಕೇಶವ ಶೆಟ್ಟಿಗಾರ್ ಇವರನ್ನು ಅಭಿನಂದಿಸಲಾಯಿತು.
ಕೈ ಮಗ್ಗ ಸೀರೆಗಳ ಸ್ಪರ್ಧೆ, ಪ್ರದರ್ಶನ ಮತ್ತು ಮಾರಾಟ, ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ, ಚರಕದಲ್ಲಿ ನೂಲು ಸುತ್ತುವ ಸ್ಪರ್ಧೆ, ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಯಿತು.
ಹಿರಿಯ ನ್ಯಾಯವಾದಿಗಳಾದ ಕೀರ್ತಿಶೇಷ ವಿಠ್ಠಲ್ ಶೆಟ್ಟಿಗಾರ್ ರವರಿಗೆ ಪದ್ಮಶಾಲಿ ಅನರ್ಘ್ಯ್ನ ರತ್ನ ಮತ್ತು ಸಾಯಿರಾಂ ಟೆಸ್ಟೋರಿಯಂ ಸ್ಥಾಪಕರಾದ ಕೀರ್ತಿಶೇಷ ಸಂಜೀವ್ ಶೆಟ್ಟಿಗಾರ್ ರವರಿಗೆ ಪದ್ಮಶಾಲಿ ನೇಕಾರ ಭೂಷಣ ಪ್ರಶಸ್ತಿಗಳನ್ನು ಮರಣೋತ್ತರವಾಗಿ ನೀಡಲಾಯಿತು.
ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾದನೆಗಳನ್ನು ಮಾಡಿದ ಸಮಾಜದ ಪ್ರತಿಭಾವಂತರಾದ ಜಯರಾಮ್ ಮಂಗಳೂರು, ರಾಹುಲ್ ಶೆಟ್ಟಿಗಾರ್ ಪರ್ಕಳ, ಮಹೇಶ್ ಶೆಟ್ಟಿಗಾರ್ ಕಾರ್ಕಳ ಇವರಗಳನ್ನು ಗೌರವಿಸಲಾಯಿತು.
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ವಕ್ವಾಡಿ ಕರುಣಾಕರ್ ಶೆಟ್ಟಿಗಾರ್ ರವರಿಗೆ ಪದ್ಮಶಾಲಿ ಶೌರ್ಯ ಕೇಸರಿ ಪ್ರಶಸ್ತಿ ಪ್ರಧಾನ ಮಾಡಲಾಯಿತು..
ಹಿರಿಯ ನೇಕಾರರಾದ ಸಂಜೀವ ಶೆಟ್ಟಿಗಾರ್, ವಾಮನ್ ಶೆಟ್ಟಿಗಾರ್, ಶ್ರೀನಿವಾಸ್ ಶೆಟ್ಟಿಗಾರ್ ಮತ್ತು ರಾಘವ ಪದ್ಮಶಾಲಿ ಇವರನ್ನು ವಿಶೇಷವಾಗಿ ಗೌರವಿಸಲಾಯಿತು.
ಪ್ರತಿಷ್ಠಾನದ ಅಧ್ಯಕ್ಷರಾದ ರತ್ನಾಕರ್ ಇಂದ್ರಾಳಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನೇಕಾರ ಪ್ರಮುಖರಾದ ಓಂಪ್ರಕಾಶ್ ಡಿ ಶೆಟ್ಟಿಗಾರ್ ಸುರತ್ಕಲ್, ಡಾ. ಮನೋಹರ್ ಬೋಳೂರು, ಶೋಭಾ ಜ್ಯೋತಿಪ್ರಸಾದ್, ಸತೀಶ್ ಶೆಟ್ಟಿಗಾರ್ ಅತ್ರಾಡಿ, ಸೀತಾರಾಮ್ ಶೆಟ್ಟಿಗಾರ್ ಬೆಳ್ಳಂಪಳ್ಳಿ, ಮಾಧವ ಶೆಟ್ಟಿಗಾರ್ ಕೆರೆಕಾಡು, ಡಾ. ಶಿವಪ್ರಸಾದ್, ವಿಶ್ವನಾಥ್ ಶೆಟ್ಟಿಗಾರ್ ದೇರೆಬೈಲ್, ದತ್ತರಾಜ್ ಶೆಟ್ಟಿಗಾರ್, ಸರೋಜಾ ಶೆಟ್ಟಿಗಾರ್, ನರೇಂದ್ರ ಶೆಟ್ಟಿಗಾರ್ ಉಪಸ್ಥಿತರಿದ್ದರು. ಅವಿನಾಶ್ ಮಾರ್ಪಳ್ಳಿ ಸ್ವಾಗತಿಸಿದರು. ಧನಂಜಯ್ ಕಳತ್ತೂರು ವಂದಿಸಿದರು. ನಾಗರಾಜ್ ಕಿನ್ನಿಮೂಲ್ಕಿ ಮತ್ತು ಮಮತಾ ರೂಪೇಶ್ ನಿರೂಪಿಸಿದರು.