ಕಣ್ಣಿನ ಆರೈಕೆ, ಸಂರಕ್ಷಣೆ ಪ್ರತಿಯೊಬ್ಬನ ಕರ್ತವ್ಯ~ಆಂಟೋನಿ ಡಿಸೋಜಾ

ಆದಿತ್ಯ ಟ್ರಸ್ಟ್ (ರಿ ), ನಕ್ರೆ, ಕಾರ್ಕಳ, ಗ್ರಾಮ ಪಂಚಾಯತ್ ಕುಕ್ಕುಂದೂರು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ನಕ್ರೆ, ಸಹಯೋಗದಲ್ಲಿ ಗುರುತಿಸಲ್ಪಟ್ಟ ದೃಷ್ಟಿ ವಿಕಲ ಚೇತನರಿಗೆ ಕನ್ನಡಕವನ್ನು ಉಚಿತವಾಗಿ ವಿತರಿಸಲಾಯಿತು. 
 
ಮುಖ್ಯ ಅತಿಥಿಯಾಗಿ ಆಗಮಿಸಿದ ಕುಕ್ಕುಂದೂರು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಆಂಟೋನಿ ಡಿಸೋಜಾ ರವರು ಮಾನವನಿಗೆ ಕಣ್ಣು ಅತೀ ಮುಖ್ಯವಾದ ಅಂಗ. ಕಣ್ಣಿನ ಆರೈಕೆ, ಸಂರಕ್ಷಣೆ ಪ್ರತಿಯೊಬ್ಬನ ಕರ್ತವ್ಯ. ಸೂಕ್ತವಾದ ಕನ್ನಡಕ ಹಾಕುವ ಮೂಲಕ ತಮ್ಮ ಕರ್ತವ್ಯವನ್ನು ಉತ್ತಮವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದರು.
ಕುಕ್ಕುಂದೂರು ಗ್ರಾಮ ಪಂಚಾಯತ್ ಸದಸ್ಯ ಶ್ರೀ ಪ್ರಾಣೇಶ್ ಶೆಟ್ಟಿ ಇವರು ಸಮಾಜದಲ್ಲಿರುವ ವಿಕಲ ಚೇತನರನ್ನು ಗುರುತಿಸಿ ಪ್ರಯೋಜಕತ್ವ ವಹಿಸಿ ಅವರಿಗೆ ಬೇಕಾದ ಸಾಧನ ಸಲಕರಣೆ ಕೊಟ್ಟು ಅವರ ಕಷ್ಟಗಳಿಗೆ ಸ್ಪಂದಿಸಿದಾಗ ಬಹಳ ಸಂತೋಷ ವಾಗುತ್ತದೆ ಎಂದರು. ಟ್ರಸ್ಟಿನ ಅಧ್ಯಕ್ಷ ಶ್ರೀ ಮಂಜುನಾಥ್ ತೆಂಕಿಲ್ಲಾಯ ಮಾತನಾಡುತ್ತ ಸಮಾಜದಲ್ಲಿರುವ ವಿಕಲ ಚೇತನರಿಗೆ ಸ್ವಸಹಾಯ ಸಂಘ ಪ್ರಾರಂಭಿಸಿ ಅವರು ಆರ್ಥಿಕವಾಗಿ ಸ್ವಾವಲಂಬಿ ಗಳನ್ನಾಗಿ ಮಾಡುವುದು ಹಾಗು ಅವರಿಗೆ ಸಂಪನ್ಮೂಲ ಕೇಂದ್ರ ಪ್ರಾರಂಬಿಸುವ ಮೂಲಕ ಪುನರ್ವಸತಿ ಕಲ್ಪಿಸುವ ಉದ್ದೇಶ ಟ್ರಸ್ಟಿಗೆ ಇದೆ ಎಂದರು. 
ಕೊರೋನ ಸಂದರ್ಭದಲ್ಲಿ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ತಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿ ಸಿದ ಶುಸ್ರುಕಿಯರಾದ ಶ್ರೀಮತಿ ಕುಮುದವತಿ, ಶ್ರೀಮತಿ ಅರ್ಚನಾ, ಕುಮಾರಿ ಅನಿತಾ ಇವರನ್ನು ಅಭಿನಂದನಾ ಪತ್ರ ನೀಡಿ ಸನ್ಮಾನಿಸಲಾಯಿತು. 
 
ವೈದಾಧಿಕಾರಿ ಡಾಕ್ಟರ್ ಪ್ರತೀಕ್ಷಾ ಶೆಟ್ಟಿ, ಪೊಲೀಸ್ ಇಲಾಖೆಯ ನಿವೃತ ಸಹಾಯಕ ಅಧಿಕಾರಿ ಶ್ರೀ ದಿವಾಕರ ಪೂಜಾರಿ,ಪಂಚಾಯತ್ ಸದಸ್ಯೆ ಶ್ರೀಮತಿ ಶೋಭಾ, ಉದ್ಯಮಿ ಜಯರಾಮ್ ಆಚಾರ್ಯ, ಉದ್ಯಮಿ ಅರುಣ್ ಶೆಟ್ಟಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅನಿಲ್ ಪೂಜಾರಿ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಟ್ರಸ್ಟಿನ ಕಾರ್ಯದರ್ಶಿ ಶ್ರೀ ರಮೇಶ್ ಕಾರ್ಯಕ್ರಮ ನಿರ್ವಹಿಸಿದರು. ಕುಮಾರಿ ರಕ್ಷಾ ಪ್ರಾರ್ಥಿಸಿದರು.
 
 
 
 
 
 
 
 
 
 
 

Leave a Reply