ಕೇದಾರೋತ್ಥಾನ ಟ್ರಸ್ಟ್ ಗೆ ನಾಟಿ ಯಂತ್ರ ಹಾಗೂ ಚಾಪೆ ನೇಜಿ ಟ್ರೇ ಹಸ್ತಾಂತರ

ಉಡುಪಿ: ಜಿಲ್ಲೆಯಾದ್ಯಂತ ಹಮ್ಮಿಕೊಂಡಿರುವ “ಹಡಿಲು ಭೂಮಿ ಕೃಷಿ ಆಂದೋಲನ” ದಡಿ ಈಗಾಗಲೇ ಕೃಷಿ ಚಟುವಟಿಕೆಗಳು ಆರಂಭವಾಗಿದೆ. ನಾಟಿ ಮಾಡಲು ಬೇಕಾಗುವ 4 ನಾಟಿ ಯಂತ್ರವನ್ನು ಹಾಗೂ ಚಾಪೆ ನೇಜಿ ಮಾಡಲು 15 ಸಾವಿರ ಟ್ರೇಗಳನ್ನು ಖರೀದಿಸಲಾಗಿದೆ.

ಇಂದು ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ರಘುಪತಿ ಭಟ್ ಅವರ ಸಮ್ಮುಖದಲ್ಲಿ ಕೇದಾರೋತ್ಥಾನ ಟ್ರಸ್ಟ್ ಗೆ ಹಸ್ತಾಂತರಿಸಲಾಯಿತು.

ಕೇದಾರೋತ್ಥಾನ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಮುರಳಿ ಕಡೆಕಾರ್, ಕೋಶಾಧಿಕಾರಿ ರಾಘವೇಂದ್ರ ಕಿಣಿ, ಸದಸ್ಯರಾದ ಪ್ರತಾಪ್ ಹೆಗ್ಡೆ ಮಾರಾಳಿ, ಮಹೇಶ್ ಠಾಕೂರ್, ದಿನಕರ್ ಬಾಬು,ನಾರಾಯಣ್ ಶೆಣೈ, ಭುಜಂಗ ಶೆಟ್ಟಿ, ನಗರ ಸಭೆಯ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್,ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ. ಕೆಂಪೇಗೌಡ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಬಿ ಧನಂಜಯ್, ಸಹ ಸಂಶೋಧನಾ ನಿರ್ದೇಶಕ ಡಾ.ಲಕ್ಷ್ಮಣ್,ಹಿರಿಯ ಕ್ಷೇತ್ರ ಅಧಿಕಾರಿಗಳಾದ ಶಂಕರ್, ಕೃಷಿ ತಜ್ಞ ಶ್ರೀಕಾಂತ್ ಭಟ್ ಹಾಗೂ ನಗರಸಭಾ ಸದಸ್ಯರು,ಗ್ರಾಮ ಪಂಚಾಯತ್ ಅಧ್ಯಕ್ಷರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply