Janardhan Kodavoor/ Team KaravaliXpress
33.6 C
Udupi
Monday, March 20, 2023
Sathyanatha Stores Brahmavara

ಮುಸ್ಲಿಮ್ ಒಕ್ಕೂಟದ ಉಡುಪಿ ತಾಲೂಕು ಅಧ್ಯಕ್ಷರಾಗಿ ಎಸ್.ಎಂ. ಇರ್ಶಾದ್ ಆಯ್ಕೆ

ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಉಡುಪಿ ತಾಲೂಕು ಘಟಕದ‌ ಅಧ್ಯಕ್ಷರಾಗಿ ಎಸ್.ಎಂ. ಇರ್ಶಾದ್ ನೇಜಾರ್ ಆಯ್ಕೆಯಾಗಿದ್ದಾರೆ. ಒಕ್ಕೂಟದ ಉಡುಪಿ ತಾಲೂಕು ಸಮಿತಿಯ ಸಭೆಯಲ್ಲಿ ಅವರನ್ನು 2023 – 24ನೇ ಅವಧಿಯ ಅಧ್ಯಕ್ಷರಾಗಿ ಸರ್ವಾನುಮತದಿಂದ ಆರಿಸಲಾಯಿತು. ಕಾರ್ಯದರ್ಶಿಯಾಗಿ ಜಿ.ಎಂ. ಶರೀಫ್ ಹೂಡೆ ಆರಿಸಲ್ಪಟ್ಟರು. ಉಪಾಧ್ಯಕ್ಷರಾಗಿ ಡಾ| ಶಾಜಹಾನ್ ತೋನ್ಸೆ, ಜತೆ ಕಾರ್ಯದರ್ಶಿಯಾಗಿ ಫೈಝ್ ಅಹ್ಮದ್ ಅಝೀಝ್ ಮತ್ತು ಕೋಶಾಧಿಕಾರಿಯಾಗಿ ಎಂ. ಪೀರು ಸಾಹೆಬ್ ಆದಿಉಡುಪಿ ನೇಮಿಸಲ್ಪಟ್ಟರು.

ಅಬ್ದುಲ್ ರಜಾಕ್ ಗುಜ್ಜರಬೆಟ್ಟು, ಟಿ. ಎಮ್ ಜಫ್ರುಲ್ಲ ಹೂಡೆ , ರಿಯಾಜ್ ಅಹಮದ್ ಕುಕ್ಕಿಕಟ್ಟೆ, ಮುಹಮ್ಮದ್ ಅಜೀಮ್ ಬಾರ್ಕುರ್, ಶಾರುಖ್ ತೀರ್ಥಹಳ್ಳಿ , ಇಸ್ಮಾಯಿಲ್ ಕಿದಿಯೂರು, ಸಯ್ಯದ್ ಫರೀದ್, ಅಬ್ದುಲ್ ಅಜೀಜ್ ಉದ್ಯಾವರ , ಅಬ್ದುಲ್ ಅಜೀಜ್ ಆದಿ ಉಡುಪಿ, ಇಫ್ತಿಕಾರ್ ದಾವೂದ್ ಉಡುಪಿ, ಪರ್ವೇಜ್ ಕುಕ್ಕಿಕಟ್ಟೆ, ಯಾಸೀನ್ ಕೊಡಿ ಬೆಂಗ್ರೆ, ಅಬ್ದುಲ್ ಲತೀಫ್ ಮದನಿ , ಎಮ್ ನಾಸಿರ್ ಮಲ್ಪೆ ಉಡುಪಿ ತಾಲೂಕು ಸಮಿತಿ ಸದಸ್ಯರಾಗಿ ಆಯ್ಕೆಯಾದರು.

ಶೇಕ್ ಅಬ್ದುಲ್ಲಾ, ನಜೀರ್ ನೆಜಾರ್, ರಶೀದ್ ಅತ್ರಾಡಿ, ಮುಷೀರ್ ಇಂದ್ರಾಳಿ, ಅಬೂಬಕರ್ ಪರ್ಕಳ , ಮುನೀರ್ ಕಲ್ಮಾಡಿ, ಆಸೀಫ್ ಇಕ್ಬಾಲ್ ಆದಿ ಉಡುಪಿ, ಮಕ್ಸೂದ್ ಕುಕ್ಕಿಕಟ್ಟೆ
ಇವರನ್ನು ತಾಲೂಕು ಸಮಿತಿಯ ನಾಮ ನಿರ್ದೇಶನ ಸದಸ್ಯರಾಗಿ ನೇಮಿಸಲಾಯಿತು.

ನಿರ್ಗಮನ ಅಧ್ಯಕ್ಷರಾದ ಟಿ. ಎಮ್. ಜಫ್ರುಲ್ಲಾ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು.

ಕಾರ್ಯಕ್ರಮವು ಅಬ್ದುಲ್ ಅಜೀಜ್ ಆದಿ ಉಡುಪಿ ಯವರ ಕಿರಾತ್ ನೊಂದಿಗೆ ಪ್ರಾರಂಭವಾಯಿತು. ಜಿಲ್ಲಾ ಉಪಾಧ್ಯಕ್ಷ ಮುಹಮ್ಮದ್ ಮೌಲಾ
ಪ್ರಾಸ್ತವಿಕ ಮಾತುಗಳನ್ನಾಡಿದರ. ಜಿಲ್ಲಾ ಕಾರ್ಯದರ್ಶಿ ಇಸ್ಮಾಯಿಲ್ ಹುಸೈನ್ ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು. ಟಿ. ಎಮ್ ಜಫ್ರುಲ್ಲ ಸ್ವಾಗತಿಸಿದರು. ಅಬ್ದುಲ್ ರಜಾಕ್ ಧನ್ಯವಾದ ನೀಡಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!